Posts Tagged ‘ಕರ್ನಾಟಕ ವಿಧಾನಸಭಾ ಚುನಾವಣಾ 2013’

ಬಿ.ಜೆ.ಪಿ. ಯಿಂದ ಗುಳೆ ಹೊಂಟು ಹೋಗಿ, ಕೆ.ಜೆ.ಪಿ ಪಕ್ಷ ಕಟ್ಟಿದ ಮೇಲೆ, ‘ನಿಮ್-ಹಿಂದೆ’ ನಾವಿದೀವಿ… ಅಂದೋರೆಲ್ಲಾ ‘ಬೆನ್-ಹಿಂದೆ’ ಚೂರಿ ಹಾಕಿ, ಕೈ ಕೊಟ್ಟಿದ್ದು ನೋಡಿ ‘ಮಿಲನ’ ಚಿತ್ರದ ‘ಮಳೆ ನಿಂತು ಹೋದ ಮೇಲೆ…’ ಹಾಡು ಯಡ್ಡಿ ಬಾಯಲ್ಲಿ ಕೇಳಿ ‘ಗುಳೆ ಹೊಂಟು ಹೋದ ಮೇಲೆ…’ 🙂

 

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಮಾಡುವುದು ಏನು… ಉಳಿದುಹೋಗಿದೆ?
ಸಾಯಲಿ ಏನು… ತಿಳಿಯದಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಹಾವೇರೀಲಿ ಆಣೆ ಮಾಡಿ
ಬರುವೆ ಅಂದೋರ
ನಿಲುವು ಬೇರೆ ಆಯಿತೇ
ಯಾಕೆ ನಂತರ

ನಮ್ಮ ಪಾರ್ಟಿಯಲ್ಲಿ ಇಂದು
ಗೆಲ್ಲುವ ಆತುರ
ಒಂದೇ ಸಾರಿ ನೀವ್
ತೋರಿರಿ ಕನಿಕರ

ಬಿಜೆಪಿಯ ನಾಶ… ಮಾಡ ಬೇಕಿದೆ
ಮಾಡಲಿ ಹೇಗೆ… ತಿಳಿಯದಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಇನ್ನು ತಡವ ಮಾಡದೆ
ಪಾರ್ಟಿಯ ಸೇರ್ರಣ್ಣ
ನಿಮ್ಮ ಹಟವ ತೋರದೆ
ಮನಸು ಮಾಡ್ರಣ್ಣ

ಗಡುವು ದೂರವೇನಿಲ್ಲ
ಹತ್ತಿರ ಬಂತಣ್ಣ
ನೀವು ಬಾರದೆ
ಏತಕೋ ತಲ್ಲಣ

ಭರವಸೆ ಎಲ್ಲಾ… ಕಳೆದು ಹೋಗಿದೆ
ಎಲೆಕ್ಷನು ಸೋಲು… ಖಾತ್ರಿಯಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಮಾಡುವುದು ಏನು… ಉಳಿದುಹೋಗಿದೆ?
ಸಾಯಲಿ ಏನು… ತಿಳಿಯದಾಗಿದೆ

ಮೂಲ ಹಾಡು: ‘ಮಿಲನ’ ಚಿತ್ರದ ‘ಮಳೆ ನಿಂತು ಹೋದ ಮೇಲೆ…’ (ಸಾಹಿತ್ಯ: ಜಯಂತ ಕಾಯ್ಕಿಣಿ)
ಕೃಪೆ: http://kn.wikisource.org/wiki/

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ನೋವಿನಲ್ಲಿ ಜೀವ ಜೀವ
ಅರಿತ ನಂತರ
ನಲಿವು ಬೇರೆ ಏನಿದೆ
ಏಕೆ ಅಂತರ

ನಿನ್ನ ಹಾಡಿನಲ್ಲಿ ಇಂದು
ಬೆರೆವ ಕಾತರ
ಒಂದೇ ಸಾರಿ ನೀ
ಕೇಳೆಯ ಈ ಸ್ವರ

ಮನಸಲ್ಲಿ ಚೂರು… ಜಾಗ ಬೇಕಿದೆ
ಕೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಕಣ್ಣು ತೆರೆದು ಕಾಣುವ
ಕನಸೆ ಜೀವನ
ಸಣ್ಣ ಹಠವ ಮಾಡಿದೇ
ಹೃದಯ ಈ ದಿನ

ಎದೆಯ ದೂರವಾಣಿಯ
ಕರೆಯ ರಿಂಗಣ
ಕೇಳು ಜೀವವೇ
ಏತಕೀ ಕಂಪನ

ಹೃದಯವು ಇಲ್ಲೆ… ಕಳೆದು ಹೋಗಿದೆ
ಹುಡುಕಲೇ ಬೇಕೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ