Posts Tagged ‘2g scam’

ಅಮೃತವರ್ಷಿಣಿ ಸಿನೆಮಾದ ತುಂತುರು ಅಲ್ಲಿ ನೀರ ಹಾಡು…

ಪ್ರಸ್ತುತ ಕೇಂದ್ರ-ರಾಜ್ಯ ಸರ್ಕಾರಗಳ ಹಗರಣಗಳ ಮಧ್ಯೆ ಹೀಗೆ ಅಣಕವಾಗಿ ಬದಲಾಗಿದೆ… 🙂

ಸೆಂಟರು… ಅಲ್ಲಿ 2ಜೀ ಪಾಡು…
ಸ್ಟೇಟಲಿ.. ಯಡ್ಡಿ ಡ್ರಾಮ ನೋಡು…
ಕಾಂಗ್ರೆಸ್ಸಿರಲಿ…ಬಿಜೆಪಿ ಇರಲೀ…
ಸ್ಕ್ಯಾಮಿನದೇ ಗೋಳಿನಲಿ…
ನಮ್ಮ ದೇಶ ತಿಂದರು… ನಮ್ಮ ಲೀಡರು…
ಎಲ್ಲ ಅಧಿಕಾರದ ಲಾಭಿಗಾಗಿ….
ಏರಿ ಮೆರೆಯೋದು ಲಾಭಕಾಗಿ… ||ಸೆಂಟರು… ಅಲ್ಲಿ 2ಜೀ ಪಾಡು||

ಕನಿಮೊಳೀ ರಾಜ… ಜೈಲಿನಲಿ.. ಕಲ್ಮಾಡಿಗೀಗ… ಮರೆವ ಕಾಯ್ಲೆ..
ಗಣಿ-ಭೂಮಿ ಧೂಳು… ಎಡ್ಡಿ ಮೇಲೆ.. ಕೋಟಿ ಕೋಟಿ ಡೀಲು… ತರಂಗದಲೆ..
ಸ್ಕ್ಯಾಮು ರೇಡು ಲ್ಯಾಂಡು ಮೈನ್ಸು… ಪೇಪರ್ ತುಂಬಾ ಇದೆಯೊ..
ನಿಮ್ಮ ಹೆಸ್ರು ಟಿವಿಯಲ್ಲಿ…ಚರ್ಚೆ ತುಂಬಾ ಬಿಸಿಯೋ.
ನಮ್ಮ ನಾಡ ನುಂಗಿದ ಇತಿಹಾಸವು
ನಿಮ್ಮ ನಿರ್ಗಮನವೆ ಪರಿಹಾರ
ನೀವು ಹೋಗೋದೆ ಕಾಯುವೆವು… ||ಸೆಂಟರು… ಅಲ್ಲಿ 2ಜೀ ಪಾಡು||

ನಾಯಕರೇ ನಿಮ್ಮ… ಹಗರಣದಿ.. ನಾಡಿನ ಎಳ್ಗೆ…. ಕನವರಿಕೆ..
ಅಧಿಕಾರಶಾಹಿ…. ಇರೊವರೆಗೆ.. ಲೋಕಪಾಲ ಕಾಯ್ದೆ… ಮರೆಯೊಳಗೆ..
ಓಟು ಕೊಟ್ವಿ… ಆಗ ನಾವು..ಈಗ ನೀವು… ಮಂತ್ರಿ
ರಾಜ್ಯ-ದೇಶ… ಭೇದವಿಲ್ಲ…ಸಾವಿರಾರು ಕೋಟಿ… ತೀಂದ್ರಿ…
ಭ್ರಷ್ಟಾಚಾರ ನಿಮಗೆ… ನರನಾಡಿಯು..
ಅ೦ದು ನೀವು ಕೊಟ್ಟ ಭರವಸೆಯು
ಇ೦ದು ನಾಕಾಣೆಯಾಗಿದೆಯ…. ||ಸೆಂಟರು… ಅಲ್ಲಿ 2ಜೀ ಪಾಡು||