Posts Tagged ‘anakavaadu’

ಆರೆಂಜ್ ಕ್ಯಾಪ್ ಧರಿಸೋ ರೇಂಜಿಗೆ ಆರ್ಭಟಿಸುತ್ತಿರುವ RCB ಕ್ಯಾಪ್ಟನ್ ಹಾಟ್, ಗೆಲ್ತಾನಾ ಜಾಕ್-ಪಾಟ್ ಅನ್ನೋ ವರಿ ಬೇರೆ ತಂಡಗಳಿಗೆ ಮೂಡಿಸಿದ್ದಕ್ಕೆ ‘ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ’ ಸ್ಟೈಲಲ್ಲಿ ಅಣಕ ಹಾಡು ‘ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ’ (ದಿಸ್ಸು ಸಾಂಗ್ ಫಾರ್ RCB ಫ್ಯಾನ್ಸು) 🙂

kohli-ipl

ವಿರಾಟ್

ಯೋ ಬಾಯ್ಸ್… ಐ ಯಾಮ್ ಸಿಂಗಿಂಗ್ ಸಾಂಗ್
ಹೋಪ್ ಸಾಂಗ್… ಸ್ಕೂಪ್ ಸಾಂಗ್

ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?
ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?

ಬ್ಯಾಟಿಂಗ್ ಪರ್ಫೆಕ್ಟ್…

ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?

ಮೆ೦ಟೈನ್ ದಿಸ್…

ವೈ ದಿಸ್ ಕೊಹ್ಲಿವರಿ……… ರೀ

ಬ್ಯಾಟಿಂಗಲ್ಲಿ… ಗೇಯ್ಲು ಗೇಯ್ಲು
ಗೇಯ್ಲು ಆದರೆ… ಫೇಲು
ರೆಡ್ಡು ಬ್ಯಾಕ್-ಗ್ರೌಂಡ್… ನೈಟು ನೈಟು
ಫೈಟ್ ಬಿಕಮು… ಟೈಟು

ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?
ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?

ವೈಟ್ ಮಿಸ್ಚೀಫ್… ಗರ್ಲ್ಸು ಗರ್ಲ್ಸು
ಗರ್ಲ್ಸು ಡ್ಯಾನ್ಸಿಂಗ್… ಹಾಟು
ಫೋರು ಸಿಕ್ಸು… ಹಿಟ್ಟು ಹಿಟ್ಟು
ಗೇಯ್ಲು ವಿಲ್ಯರ್ಸ್… ವಿರಾಟು

ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?
ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?

ಕೈಯ್ಯಲ್ಲ್ ಬ್ಯಾಟು… ಓನ್ಲೀ ಇ೦ಗ್ಲೀಷ್
ಹ್ಯಾಂಡಲ್ ಬ್ಯಾಟು… ಬ್ಯಾಟಲ್ ಶಾಟು
ಕ್ರೌಡು ಫುಲ್ಲು… ಚಿಯರ್ರು

ಪ್ಲೆಂಟಿ ರನ್ಸು… ಆರ್ಪಿ ಗೀವ್ಸು
ಮ್ಯಾಚು ರಿವರ್ಸ್… ಗಿಯರ್ರು

ಲವ್ವು ಲವ್ವು… ಓ ರಾಂ ಪಾಲ್-ಉ
ಯು ಸೇವ್ಡ್ ಮೀ… ನವ್ವು

ಹವ್ವು ಹವ್ವು… ಇಂಪ್ರೂ ಬೌಲ್-ಉ
ಐ ವಾಂಟ್ ಯು ಜಹೀರ್… ನವ್ವು

ಗಾಡ್ ವೀ ಆರ್ ವಿನ್ನಿಂಗ್ ಹೋಮು
ಮೇಕ್ ಅಸ್ ವಿನ್ನು ಔಟು

ದಿಸ್ಸು ಸಾಂಗ್-ಉ… ಫಾರ್ RCB ಫ್ಯಾನ್ಸು
ಯೂ ಡೋಂಟ್ ಹ್ಯಾವ್ ಚಾಯ್ಸು

ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?
ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?
ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?
ವೈ ದಿಸ್ ಕೊಹ್ಲಿವರಿ ಕೊಹ್ಲಿವರಿ ಕೊಹ್ಲಿವರಿ ರೀ?

ಮೂಲ ಹಾಡು: ‘3’ ತಮಿಳು ಚಿತ್ರದ ‘ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ…’
ಕೃಪೆ: http://budbudke-budbudke.blogspot.in/2012_09_01_archive.html

ಯೊ ಬೋಯ್ಸ್… ಐ ಯಾಮ್ ಸಿ೦ಗಿ೦ಗ್ ಸಾಂಗ್
ಸೂಪ್ ಸಾಂಗ್… ಫ್ಲಾಪ್ ಸಾಂಗ್

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ರಿದಮ್ ಕರೆಕ್ಟ್…

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ಮೆ೦ಟೈನ್ ದಿಸ್…

ವೈ ದಿಸ್ ಕೊಲವೆರಿ………… ಅಡೀ…

ಡಿಸ್ಟೇನ್ಸ್-ಲಾ… ಮೂನು ಮೂನು
ಮೂನ್ ಕಲರ್ರು… ವೈಟು
ವೈಟ್ ಬ್ಯಾಕ್-ಗ್ರೌಂಡ್… ನೈಟು ನೈಟು
ನೈಟು ಕಲರ್ರು.,. ಬ್ಲ್ಯಾಕು

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ವೈಟ್ ಸ್ಕಿನ್ನು… ಗರ್ಲು ಗರ್ಲು
ಗರ್ಲು ಹಾರ್ಟು… ಬ್ಲ್ಯಾಕು
ಐಸು ಐಸು.. ಮೀಟು ಮೀಟು
ಮೈಯ್ ಫ್ಯೂಚರ್… ಡಾರ್ಕು

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ಕೈಲ ಗ್ಲಾಸ್… ಓನ್ಲೀ ಇ೦ಗ್ಲೀಷ್
ಹ್ಯಾ೦ಡ್ಲಾ ಗ್ಲಾಸ್… ಗ್ಲಾಸ್ಲಾ ಸ್ಕಾಚು
ಐಸು ಫುಲ್ಲು… ಟಿಯರ್ರು

ಎ೦ಮ್ಟಿ ಲೈಫು… ಗರ್ಲ್ ಕಮ್ಮು
ಲೈಫು ರಿವರ್ಸು… ಗಿಯರ್ರು

ಲವ್ವು ಲವ್ವು… ಓ ಮೈ ಲವ್ವು
ಯು ಶೋಡು ಮಿ… ಬವ್ವು

ಕವ್ವು ಕವ್ವು…ಹೋಲಿ ಕವ್ವು
ಐ ವಾ೦ಟ್ ಯು ಹಿಯರ್… ನವ್ವು

ಗಾಡ್ ಐ ಯಾಮ್ ಡೈಯಿ೦ಗ್ ನವ್ವು
ಶೀ ಇಸ್ ಹ್ಯಾಪ್ಪಿ ಹವ್ವು?

ದಿಸ್ಸು ಸಾಂಗ್-ಉ… ಫಾರ್ ಸೂಪ್ ಬಾಯ್ಸು
ವಿ ಡೋ೦ಟ್ ಹ್ಯಾವ್ ಚಾಯ್ಸು

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ಫ್ಲಾಪ್ ಸಾಂಗ್…

ಪೋಸ್ಟು ಹಾಕಿ ಬೇರೆಯವರನ್ನು ತಗಲ್ಹಾಕಿಸೋ(ಟ್ಯಾಗ್ ಮಾಡೋ) ನನ್ನ ಮೇಲೆ ಒಂದು ಅಣಕ… ಟ್ಯಾಗ್ ಮಾಡೋ ಎಲ್ಲಾ… ‘ಟ್ಯಾಗ’ರಾಜರಿಗೆ ಅರ್ಪಣೆ 🙂
ಈ ಸಲ ನನ್ನ ಮೇಲೆ ಒಂದು ಅಣಕ ಬರೆಯೋಣ ಅಂತ… 🙂
ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ…ಹಾಲಲ್ಲಾದರು ಹಾಕು… ನೀರಲ್ಲಾದರೂ ಹಾಕು ಧಾಟಿಯಲ್ಲಿ ಅಣಕ… 🙂

ಯಾಕಂದ್ರೆ ಯಡ್ಡಿ ಮೇಲೆ ಅಣಕದ ಮೇಲೆ ಅಣಕ ಬರ್ದಿದ್ದಕ್ಕೆ… ಅವ್ರು ಶ್ಯಾನೆ ಬ್ಯಾಸ್ರ ಮಾಡ್ಕೊಂಡವ್ರೆ… 😀

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ
ವಾಲಲ್ಲಿ ಮರೆಮಾಡಿ… ಟ್ಯಾಗನ್ನು ತೆಗೆದಾಕಿ… ಕ್ಲೀನಾಗಿಡುವೆ ಟ್ಯಾಗವೇಂದ್ರ

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ
ವಾಲಲ್ಲಿ ಮರೆಮಾಡಿ… ಟ್ಯಾಗನ್ನು ತೆಗೆದಾಕಿ… ಕ್ಲೀನಾಗಿಡುವೆ ಟ್ಯಾಗವೇಂದ್ರ
ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ

ಫೋಟೋವನ್ನಾದರು ಹಾಕು… ವೀಡ್ಯೋವನ್ನಾದರು ಹಾಕು… ಟ್ಯಾಗವೇಂದ್ರ
ಫೋಟೋವನ್ನಾದರು ಹಾಕು… ವೀಡ್ಯೋವನ್ನಾದರು ಹಾಕು … ಟ್ಯಾಗವೇಂದ್ರ
ಫೋಟೋನ ಶೇರ್ ಮಾಡಿ … ವೀಡ್ಯೋನ ಲೈಕ್ ಮಾಡಿ… ಫ್ರೆಂಡಾಗಿರುವೆ… ಟ್ಯಾಗವೇಂದ್ರ

ಚಿತ್ರದಲ್ಲೇ ತಳುಕಿಸು… ಕಮೆಂಟಲ್ಲೇ ಗುರುತಿಸು… ಟ್ಯಾಗವೇಂದ್ರ
ಕಮೆಂಟಲ್ಲಿ ರಾಂಗಾಗಿ… ಮೆಸೆಜಲ್ಲಿ ಕೂಲಾಗಿ… ತೆಗೆಯೆನುತ ಹೇಳ್ವೆ… ಟ್ಯಾಗವೇಂದ್ರ

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ…

ಟ್ಯಾಗುಗಳೇ ಬೇಡೆಂದು… ಎಂದೂ ಹೇಳೆನು ನಾನು… ಟ್ಯಾಗವೇಂದ್ರ
ಟ್ಯಾಗುಗಳೇ ಬೇಡೆಂದು… ಎಂದೂ ಹೇಳೆನು ನಾನು… ಟ್ಯಾಗವೇಂದ್ರ
ಸುಮ್ನೆ ಮಾಡ್ಬೇಡಿ ಟ್ಯಾಗ… ಸೇರ್ಸೋ ಮೊದಲೇ ಗುಂಪು
ನನ್ನ ಕೇಳೋ… ಟ್ಯಾಗವೇಂದ್ರ

ಎಲ್ಲೇ ಇದ್ದರೂ ನೀ… ಬೇಡಿಕೊಳ್ಳುವೆ ನಾ … ಟ್ಯಾಗವೇಂದ್ರ
ನಿನ್ನಲ್ಲಿ ದಯಮಾಡಿ… ನೀ ನನ್ನ ಟ್ಯಾಗ್-ಮಾಡ್ದೆ… ಉಳಿದರೆ ಸಾಕು… ಟ್ಯಾಗವೇಂದ್ರ

ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ
ವಾಲಲ್ಲಿ ಮರೆಮಾಡಿ… ಟ್ಯಾಗನ್ನು ತೆಗೆದಾಕಿ… ಕ್ಲೀನಾಗಿಡುವೆ ಟ್ಯಾಗವೇಂದ್ರ
ವಾಲಲ್ಲಾದರೂ ಹಾಕು… ಟ್ಯಾಗಲ್ಲಾದರೂ ಹಾಕು… ಟ್ಯಾಗವೇಂದ್ರ

ಮೂಲ ಹಾಡು ‘ದೇವತಾ ಮನುಷ್ಯ’ ಚಿತ್ರ ಕೃಪೆ: http://kannadahaadulyrics.blogspot.in/

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ… ನೀರಲ್ಲಿ ಮೀನಾಗಿ… ಹಾಯಾಗಿರುವೆ… ರಾಘವೇಂದ್ರ

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ… ನೀರಲ್ಲಿ ಮೀನಾಗಿ… ಹಾಯಾಗಿರುವೆ… ರಾಘವೇಂದ್ರ
ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ

ಮುಳ್ಳಲ್ಲಾದರು ನೂಕು… ಕಲ್ಲಲ್ಲಾದರು ನೂಕು… ರಾಘವೇಂದ್ರ
ಮುಳ್ಳಲ್ಲಾದರು ನೂಕು… ಕಲ್ಲಲ್ಲಾದರು ನೂಕು… ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ… ಕಲ್ಲಲ್ಲಿ ಕಲ್ಲಾಗಿ… ಒಂದಾಗಿರುವೆ… ರಾಘವೇಂದ್ರ

ಬಿಸಿಲಲಲ್ಲೇ ಒಣಗಿಸು… ನೆರಳಲ್ಲೇ ಮಲಗಿಸು… ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ… ನೆರಳಲ್ಲಿ ತಂಪಾಗಿ… ನಗುನಗುತ ಇರುವೆ… ರಾಘವೇಂದ್ರ

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ

ಸುಖವನ್ನೇ ನೀಡೆಂದು… ಎಂದೂ ಕೇಳೆನು ನಾನು… ರಾಘವೇಂದ್ರ
ಸುಖವನ್ನೇ ನೀಡೆಂದು… ಎಂದೂ ಕೇಳೆನು ನಾನು… ರಾಘವೇಂದ್ರ
ಮುನ್ನ ಮಾಡಿದ ಪಾಪ… ಯಾರ ತಾತನ ಗಂಟು…
ಮುನ್ನ ಮಾಡಿದ ಪಾಪ… ಯಾರ ತಾತನ ಗಂಟು…
ನೀನೇ ಹೇಳೂ… ರಾಘವೇಂದ್ರ

ಎಲ್ಲಿದ್ದರೇನು ನಾ….. ಹೇಗಿದ್ದರೇನು ನಾ… ರಾಘವೇಂದ್ರ
ನಿನ್ನಲ್ಲಿ ಶರಣಾಗಿ… ನೀ ನನ್ನ ಉಸಿರಾಗಿ… ಬಾಳಿದರೆ ಸಾಕು… ರಾಘವೇಂದ್ರ

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ… ನೀರಲ್ಲಿ ಮೀನಾಗಿ… ಹಾಯಾಗಿರುವೆ… ರಾಘವೇಂದ್ರ

ಹಾಲಲ್ಲಾದರು ಹಾಕು… ನೀರಲ್ಲಾದರು ಹಾಕು… ರಾಘವೇಂದ್ರ

ಬಿ.ಜೆ.ಪಿ. ಯಿಂದ ಗುಳೆ ಹೊಂಟು ಹೋಗಿ, ಕೆ.ಜೆ.ಪಿ ಪಕ್ಷ ಕಟ್ಟಿದ ಮೇಲೆ, ‘ನಿಮ್-ಹಿಂದೆ’ ನಾವಿದೀವಿ… ಅಂದೋರೆಲ್ಲಾ ‘ಬೆನ್-ಹಿಂದೆ’ ಚೂರಿ ಹಾಕಿ, ಕೈ ಕೊಟ್ಟಿದ್ದು ನೋಡಿ ‘ಮಿಲನ’ ಚಿತ್ರದ ‘ಮಳೆ ನಿಂತು ಹೋದ ಮೇಲೆ…’ ಹಾಡು ಯಡ್ಡಿ ಬಾಯಲ್ಲಿ ಕೇಳಿ ‘ಗುಳೆ ಹೊಂಟು ಹೋದ ಮೇಲೆ…’ 🙂

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಮಾಡುವುದು ಏನು… ಉಳಿದುಹೋಗಿದೆ?
ಸಾಯಲಿ ಏನು… ತಿಳಿಯದಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಹಾವೇರೀಲಿ ಆಣೆ ಮಾಡಿ
ಬರುವೆ ಅಂದೋರ
ನಿಲುವು ಬೇರೆ ಆಯಿತೇ
ಯಾಕೆ ನಂತರ

ನಮ್ಮ ಪಾರ್ಟಿಯಲ್ಲಿ ಇಂದು
ಗೆಲ್ಲುವ ಆತುರ
ಒಂದೇ ಸಾರಿ ನೀವ್
ತೋರಿರಿ ಕನಿಕರ

ಬಿಜೆಪಿಯ ನಾಶ… ಮಾಡ ಬೇಕಿದೆ
ಮಾಡಲಿ ಹೇಗೆ… ತಿಳಿಯದಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಇನ್ನು ತಡವ ಮಾಡದೆ
ಪಾರ್ಟಿಯ ಸೇರ್ರಣ್ಣ
ನಿಮ್ಮ ಹಟವ ತೋರದೆ
ಮನಸು ಮಾಡ್ರಣ್ಣ

ಗಡುವು ದೂರವೇನಿಲ್ಲ
ಹತ್ತಿರ ಬಂತಣ್ಣ
ನೀವು ಬಾರದೆ
ಏತಕೋ ತಲ್ಲಣ

ಭರವಸೆ ಎಲ್ಲಾ… ಕಳೆದು ಹೋಗಿದೆ
ಎಲೆಕ್ಷನು ಸೋಲು… ಖಾತ್ರಿಯಾಗಿದೆ

ಗುಳೆ ಹೊಂಟು ಹೋದ ಮೇಲೆ… ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ… ನನಗೇನು ಕಾದಿದೆ?

ಮಾಡುವುದು ಏನು… ಉಳಿದುಹೋಗಿದೆ?
ಸಾಯಲಿ ಏನು… ತಿಳಿಯದಾಗಿದೆ

ಮೂಲ ಹಾಡು: ‘ಮಿಲನ’ ಚಿತ್ರದ ‘ಮಳೆ ನಿಂತು ಹೋದ ಮೇಲೆ…’ (ಸಾಹಿತ್ಯ: ಜಯಂತ ಕಾಯ್ಕಿಣಿ)
ಕೃಪೆ: http://kn.wikisource.org/wiki/

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ನೋವಿನಲ್ಲಿ ಜೀವ ಜೀವ
ಅರಿತ ನಂತರ
ನಲಿವು ಬೇರೆ ಏನಿದೆ
ಏಕೆ ಅಂತರ

ನಿನ್ನ ಹಾಡಿನಲ್ಲಿ ಇಂದು
ಬೆರೆವ ಕಾತರ
ಒಂದೇ ಸಾರಿ ನೀ
ಕೇಳೆಯ ಈ ಸ್ವರ

ಮನಸಲ್ಲಿ ಚೂರು… ಜಾಗ ಬೇಕಿದೆ
ಕೇಳಲಿ ಹೇಗೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಕಣ್ಣು ತೆರೆದು ಕಾಣುವ
ಕನಸೆ ಜೀವನ
ಸಣ್ಣ ಹಠವ ಮಾಡಿದೇ
ಹೃದಯ ಈ ದಿನ

ಎದೆಯ ದೂರವಾಣಿಯ
ಕರೆಯ ರಿಂಗಣ
ಕೇಳು ಜೀವವೇ
ಏತಕೀ ಕಂಪನ

ಹೃದಯವು ಇಲ್ಲೆ… ಕಳೆದು ಹೋಗಿದೆ
ಹುಡುಕಲೇ ಬೇಕೆ… ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ… ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ… ದನಿಯೊಂದು ಕಾಡಿದೆ

ಹೇಳುವದು ಏನು… ಉಳಿದು ಹೋಗಿದೆ
ಹೇಳಲಿ ಹೇಗೆ… ತಿಳಿಯದಾಗಿದೆ

‘ಸಂಜು ವೆಡ್ಸ್ ಗೀತಾ’ ಚಿತ್ರದ ‘ಸಂಜು ಮತ್ತು ಗೀತಾ… ಸೇರಬೇಕು ಅಂತಾ’ ಹಾಡಿನ ಧಾಟಿಯಲ್ಲಿ, ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಟಾಡಾ ಕಾಯ್ದೆಯಡಿ ಜೈಲು ಶಿಕ್ಷೆ ಪಡೆದ ಸಂಜಯ್ ದತ್ ಕೃತ್ಯದ ಅಣಕ ‘ಸಂಜು ದತ್ತು ಜೈಲು… ಸೇರಬೇಕು ಅಂತ’

ಗಿಲ್ಟೀ………

ಸಂಜು ವಿ ಹೇಟ್ ಯೂ…

ಸಂಜು ದತ್ತು ಜೈಲು… ಸೇರಬೇಕು ಅಂತ
ಆರ್ಡರಾಗಿದೆ… ಸುಪ್ರೀಂ ಕೋರ್ಟಿಂದಾ
ನಮ್ಮ ಕಂಟ್ರಿಗಿಂತಾ… ದ್ರೋಹ ಕ್ರೈಮು ಅಂತಾ
ಮಾಡುವಾಗ ನೀನು… ಕಂತ್ರಿ ಅಲ್ವೇನು?

ನಿನ್ನ ಎಲ್ಲ ಫಿಲ್ಮನ್ನು… ಮರೆತು ಕಂಬಿ ಎಣಿಸಿನ್ನು
ನಿನ್ನ ಫಿಲ್ಮು ಕೃಷಿಯನ್ನು… ತೊರೆದು ಜೈಲು ವಶವಿನ್ನು

ಸಿನಿಮಾದಲ್ಲಿ… ಗಾಂಧಿಯ ಗಿರಿ… ತೋರಿದೆ
ಬಯಲಾ…ಯಿತೆ… ಬಯಲಾಯಿತೆ… ನಿನ್ನ ಬಣ್ಣವೇ?

ಸಂಜು ದತ್ತು ಜೈಲು… ಸೇರಬೇಕು ಅಂತ
ಆರ್ಡರಾಗಿದೆ… ಸುಪ್ರೀಂ ಕೋರ್ಟಿಂದಾ

ಆ ಕೋರ್ಟು ಇಂದು… ಈ ಪಾಪಿಗೆಂದು
ಟಾಡಾನ ತಂದು… ಒಳಿತಾಯಿತಿಂದು
ಏನಾಗಲಿ… ಜೈಲು ಸಂಗಾತಿ ನೀ
ನಿನ್ನ ಈ ಬಣ್ಣವು… ಇಂದೆ ಕೊನೆಯಾಗಲಿ

ಬಾಲಿವುಡ್ಡಿನಲ್ಲಿ… ದೊಡ್ಡ ತಾರೆಯಂತೆ ನಿನ್ನ
ಬೆಚ್ಚನೆಯ ಪ್ರೀತಿ… ಕೊಟ್ಟು… ಮೆಚ್ಚಿ ಹೊಗೊಳೋರನ್ನ
ಇತಿಹಾಸದ… ಪುಟ ಕಾಣದೆ… ಕುರುಡು ಜನರೆ?

ಸಿನಿಮಾದಲ್ಲಿ… ಗಾಂಧಿಯ ಗಿರಿ… ತೋರಿದೆ
ಬಯಲಾ…ಯಿತೆ… ಬಯಲಾಯಿತೆ… ನಿನ್ನ ಬಣ್ಣವೇ?

ಸಂಜು ದತ್ತು ಜೈಲು… ಸೇರಬೇಕು ಅಂತ
ಆರ್ಡರಾಗಿದೆ… ಸುಪ್ರೀಂ ಕೋರ್ಟಿಂದಾ

ಊಹಿಸಿಲ್ಲ ಯಾರು… ಖಳನಾಯಕನೆಂದು
ಇರಬಹುದೋ ಏನೋ… ನಿರ್ದೋಷಿಯೆಂದು
ಸಿನಿಮಾ ಮಾಡಿದೆ… ನೀ ಖಳ ನಾಯಕ
ನಿಜವಾ ಕಂಡರೆ… ಅದಕೂ ದುರ್ಭರ

ಕೇಳಿಕೊಳ್ಳು ನೀನು… ನಿನ್ನ ಎದೆಯ ಸಾಕ್ಷಿಯನ್ನು
ಅರಿತು ಕೊಳ್ಳಬೇಕು… ನಿನ್ನ ತಪ್ಪುಗಳನು ನೀನು
ಇದರಾಚೆಗೂ… ನಗೆನಾಚಿಕೆ… ಇಲ್ಲದೇ… ಹೋದರೆ

ಕರ್ಮವೆಲ್ಲವು… ಪಾಪಿ ಸುತ್ತುವಾ… ತರವೇ
ನೀನು ಸೇ…ರುವೆ ಜೈಲು ಸೇರುವೆ… ಮಗದೊಮ್ಮೆ

ಸಂಜು ದತ್ತು ಜೈಲು… ಸೇರಬೇಕು ಅಂತ
ಆರ್ಡರಾಗಿದೆ… ಸುಪ್ರೀಂ ಕೋರ್ಟಿಂದಾ

ಮೂಲ ಹಾಡು: ‘ಸಂಜು ವೆಡ್ಸ್ ಗೀತಾ ’ ಚಿತ್ರದ ‘ಸಂಜು ಮತ್ತು ಗೀತಾ… ಸೇರಬೇಕು ಅಂತಾ’
ಕೃಪೆ: kannadalyrics.com

ಬ್ಯೂಟೀ………

ಸಂಜು ಐ ಲವ್ ಯೂ…

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು
ನನ್ನ ಜೀವಕ್ಕಿಂತಾ… ನೀನೆ ನನ್ನ ಸ್ವಂತಾ
ಇರುವಾಗ ನಾನು… ಚಿಂತೆ ಏನು?

ನಿನ್ನ ಎಲ್ಲ ನೋವನ್ನು… ಕೊಡುಗೆ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು… ಕೊಡುವೇ ನಿನ್ನ ವಶಕಿನ್ನು

ಮಳೆಯಾ ಹನಿ… ಉರುಳೋ ದನಿ… ತರವೇ
ನಗಬಾ…ರದೆ… ನಗಬಾರದೆ… ನನ್ನೊಲವೇ?

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು

ಆ ಕಣ್ಣಿಗೊಂದು… ಈ ಕಣ್ಣಿಗೊಂದು
ಸ್ವರ್ಗಾನ ತಂದು… ಕೊಡಲೇನು ಇಂದು
ಏನಾಗಲೀ… ನನ್ನ ಸಂಗಾತಿ ನೀ
ನಿನ್ನ ಈ ಕಣ್ಣಲೀ… ಇದೆ ಕೊನೆಯಾ ಹನಿ

ಎದೆಯ ಗೂಡಿನಲ್ಲಿ… ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ… ಕೊಟ್ಟು… ಬಚ್ಚಿ ಇಡುವೆ ಚಿನ್ನ
ಇತಿಹಾಸದ… ಪುಟ ಕಾಣದ… ಒಲುಮೆ… ನೀಡುವೆ

ಮಳೆಯಾ ಹನಿ… ಉರುಳೋ ದನಿ… ತರವೇ
ನಗಬಾ…ರದೆ… ನಗಬಾರದೆ… ನನ್ನೊಲವೇ?

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು

ಕಂಡಿಲ್ಲ ಯಾರೂ… ಆ ದೇವರನ್ನು
ಇರಬಹುದೊ ಏನೋ… ನಿನ್ನಂತೆ ಅವನು
ಗೆಳೆಯಾ ಎಂದರೆ… ಅದಕೂ ಹತ್ತಿರ
ಇನಿಯಾ ಎಂದರೆ… ಅದಕೂ ಎತ್ತರ

ಒರಗಿಕೊಳ್ಳಲೇನು… ನಿನ್ನಾ ಎದೆಗೆ ಒಮ್ಮೆ ನಾನು
ಕರಗಿ ಹೋಗಲೇನು… ನಿನ್ನಾ ಕರಗಳಲ್ಲಿ ನಾನು
ಯುಗದಾಚೆಗೂ… ಜಗದಾಚೆಗೂ… ಜೊತೆಗೇ… ಸಾಗುವೇ

ಕಡಲೆಲ್ಲವ… ಅಲೆ ಸುತ್ತುವಾ… ತರವೇ
ನಿನ್ನ ಸೇ…ರುವೇ… ನಿನ್ನ ಸೇರುವೆ… ನನ್ನೊಲವೇ

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು

ಆಷ್ಟ್ರೇಲಿಯಾ ಕಥೆ ‘ಗೋವಿಂದಾಯ ನಮಃ’ ಆದ ಮೇಲೆ, ಸುಣ್ಣ ಬಳಿಸಿಕೊಂಡ ಮೋರೆಯೊಂದಿಗೆ ‘ಜೋಳಿಗೆ’ಯೊಳಗೆ ಸೋಲಿನ ‘ಮರಿ’ ಹೊತ್ತು ತಾಯ್ನಾಡಿಗೆ ಕುಪ್ಪಳಿಸುತ್ತಿರುವ ಕಾಂಗರೂಗಳು… ‘ಪ್ಯಾರ್‌ಗೆ ಅಗ್ಬಿಟೈತೆ… ’ ಹಾಡನ್ನು ‘ಹಾರ್‌ಗೆ ಅಗ್ಬಿಟೈತೆ…’ ಅಂತ ಹಾಡ್ತಾ ಅವ್ರೆ ನೋಡಿ 🙂

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ
ಮಾನ್‌ಗೆ ಹೊಗ್ಬಿಟೈತೆ… ಓಯ್ ನಮ್ದುಕ್ಕೆ… ಮಾನ್‌ಗೆ ಹೋಗ್ಬಿಟೈತೆ

ಪಾಂಚ್ ದಿನ್ ಬೇಕಾಗಿಲ್ಲ… ನಮ್ದುಕೇ
ತೀನ್ ದಿನ್ ಖೇಲ್ತಾ ಇಲ್ಲ… ನಮ್ದುಕೇ
ಇಂಡಿಯಾನೇ ಸಾಕಾಗ್ಬಿಟ್ಟೈತೆ

ಹಾರ್‌ಗೆ ಅಗ್ಬಿಟೈತೆ…
ಹಾರ್‌ಗೆ ಅಗ್ಬಿಟೈತೆ…
ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ

ದಿಲ್ಲಿ ಒಳ್ಗೆ ನೆಗ್ದು ಬಿದ್ದ… ನಮ್ಮ ಟೀಮ್ನ ಎಲ್ರೂ ಇಂದು… ಕ್ಯಾಕರ್ಸಿ… ಉಗಿತವ್ರೆ
ನಿಮ್ದುಕ್ಕೆ… ವೇಷ್ಟ್ ಫೆಲೋಸ್ ಅಂತಾ ಅವ್ರೆ
ದಿಲ್ಲಿ ಒಳ್ಗೆ ನೆಗ್ದು ಬಿದ್ದ… ನಮ್ಮ ಟೀಮ್ನ ಎಲ್ರೂ ಇಂದು… ಕ್ಯಾಕರ್ಸಿ… ಉಗಿತವ್ರೆ
ನಿಮ್ದುಕ್ಕೆ… ವೇಷ್ಟ್ ಫೆಲೋಸ್ ಅಂತಾ ಅವ್ರೆ

ಮೀಡ್ಯಾ-ಗೀಡ್ಯಾ ನಕ್ಕೋಜಿ
ಸುಮ್ಕೆ ಪ್ಯಾಕ್ ಕರೋಜಿ
ನಮ್ದುಕ್ಕೆ ಪ್ಲೇನ್… ಮಿಸ್ಸ್ ಆಗ್ತಾ ಹೈ

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ
ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ

ಸ್ಪಿನ್ನು ಗಿನ್ನು ಆಗ್-ಬಿಟ್ಟಿ… ಪೂರಾ ಮ್ಯಾಚು ಸೋತುಬಿಟ್ವಿ… ಅಶ್ವಿನ್ ಜಾದು ಮಾಡಿಬಿಡೋದೇ
ನಮ್ಮುಂದೆ… ಧವನ್ ಮಾರ್ಕೇ ಮೆರ್ದುಬಿಡೋದೇ
ಸ್ಪಿನ್ನು ಗಿನ್ನು ಆಗ್-ಬಿಟ್ಟಿ… ಪೂರಾ ಮ್ಯಾಚು ಸೋತುಬಿಟ್ವಿ… ಅಶ್ವಿನ್ ಜಾದು ಮಾಡಿಬಿಡೋದೇ
ನಮ್ಮುಂದೆ… ಶಿಖರ್ ಧವನ್ ಮೆರ್ದುಬಿಡೋದೇ

ಮುರ್ಳಿ ಪುಜಾರ ಯಾಕ್ ಕೇಳ್ತೀ
ನೆನೆದ್ರೆ ಜುಂ ಜುಂ… ಅಂತೈತಿ
ಜಡೇಜಾನೂ ಹೆಚ್ಕೊಂಡ್-ಬಿಡೋದೇ

ನಕ್ಕೋ… ನಕ್ಕೋ…

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ
ಮಾನ್‌ಗೆ ಹೊಗ್ಬಿಟೈತೆ… ಓಯ್ ನಮ್ದುಕ್ಕೆ… ಮಾನ್‌ಗೆ ಹೋಗ್ಬಿಟೈತೆ

ಪಾಂಚ್ ದಿನ್ ಬೇಕಾಗಿಲ್ಲ… ನಮ್ದುಕೇ
ತೀನ್ ದಿನ್ ಖೇಲ್ತಾ ಇಲ್ಲ… ನಮ್ದುಕೇ
ಇಂಡಿಯಾನೇ ಸಾಕಾಗ್ಬಿಟ್ಟೈತೆ… ಛೇ… ಛೇ… ಛೇ…

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ

ಮೂಲ ಹಾಡು: ‘ಗೋವಿಂದಾಯ ನಮಃ’ ಚಿತ್ರದ ‘ಪ್ಯಾರ್‌ಗೆ ಅಗ್ಬಿಟೈತೆ…’
ಕೃಪೆ: kannadalyrics.com

ಪ್ಯಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ
ಜಾನ್‌ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್‌ಗೆ ಹೋಗ್ಬಿಟೈತೆ

ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್‌ಗೀನೆ ಹಾಳಾಗ್ಬಿಟೈತೆ

ಪ್ಯಾರ್‌ಗೆ ಅಗ್ಬಿಟೈತೆ…
ಪ್ಯಾರ್‌ಗೆ ಅಗ್ಬಿಟೈತೆ…
ಪ್ಯಾರ್‌ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ

ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ
ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ

ಉಗ್ಯೋ-ಗಿಗ್ಯೋ ನಕ್ಕೊಜಿ
ಸುಮ್ಕೇ ಪ್ಯಾರ್ ಕರೋಜಿ
ನಮ್ದುಕ್ಕೆ ನಿಮ್… ಇಶ್ಕ್ ಕರ್ತಾ ಹೈ

ಪ್ಯಾರ್‌ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ
ಪ್ಯಾರ್‌ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ

ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್-ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡೆಕೇಡ್ ಭರ್ಕೋ ಹೆತ್ತುಬಿಡೋದೇ
ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್ಕೊಂಡ್ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡಜನ್ ಡಜನ್ ಹೆತ್ತುಬಿಡೋದೇ

ಅಲ್ಲಿಗಂಟಾ ಯಾಕ್ ಕಾಯ್ತೀ
ಒಳಗೆ ಜುಂ-ಜುಂ ಅಂತೈತಿ
ಇಲ್ಲೇ ಶುರು ಹಚ್ಕೊಂಬಿಡೋದೇ

ನಕ್ಕೋ… ನಕ್ಕೋ…

ಪ್ಯಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ
ಜಾನ್‌ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್‌ಗೆ ಹೋ…ಗ್ಬಿಟೈತೆ

ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್‌ಗೀನೆ ಹಾಳಾಗ್ಬಿಟೈತೆ… ಎ… ಎ… ಎ…

ಪ್ಯಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ