Posts Tagged ‘aramane film song’

ಹಿಂದೊಮ್ಮೆ ಪತ್ರೊಡೆ ಪತ್ಥರ್ ವಡೆ ಆದ ಅಣಕ ಬರೆದಿದ್ದೆ.  ಕೊಲವೆರಿ ಇ-ಸ್ಟೈಲಲ್ಲಿ

ನಮ್ಮ ಕನ್ನಡದ ಕೊಲವೆರಿ ಅಂತ ಯೂಟ್ಯೂಬಲ್ಲಿ ಅತೀ ಹೆಚ್ಚು ಹಿಟ್ ಪಡೆದ ಪವನ್ ವಿರಚಿತ ‘ಗೋವಿಂದಾಯ ನಮಃ’ ದ  ‘ಪ್ಯಾರ್-ಗೇ ಆಗ್-ಬಿಟ್ಟೈತೆ’ಗೆ ಪತ್ರೊಡೆ ಮಸಾಲಾ ‘ಮಿಕ್ಸಿ’ದ್ರೆ ‘ಹಿಟ್ಟಾ’ಗುತ್ತಾ ? :-)

ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ
ವೇಸ್ಟ್- ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ವೇಸ್ಟ್- ಗೇ ಆಗ್ ಬಿಟ್ಟೈತೆ

ಖಾನೇ ಲಾಯಕ್ ಅನ್ಸತಾ ಇಲ್ಲ… ಪತ್ರೊಡೆ
ತಿಂದ್ ಗಿಂದ್ ಹೊಟ್ಟೇ ನೋವು… ಬರ್ತದೇ
ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ

ಪತ್ಥರ್-ಗೇ ಆಗ್ ಬಿಟ್ಟೈತೆ…
ಪತ್ಥರ್-ಗೇ ಆಗ್ ಬಿಟ್ಟೈತೆ…
ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ

ಕಲ್ಲು ತಿಂದು ಹಲ್ಲು ಬಿದ್ದು… ನಮ್ಮ ಮನ್ಯಲ್ ಎಲ್ಲ ನಂಗೆ… ಕ್ಯಾಕರ್ಸಿ… ಉಗಿತವ್ರೇ
ನಿಮ್ದೂಕೇ… ವೇಸ್ಟ್ ಕಿಯಾ ಅನ್ನುತಾವ್ರೇ
ಕಲ್ಲು ತಿಂದು ಹಲ್ಲು ಬಿದ್ದು… ನಮ್ಮ ಮನ್ಯಲ್ ಎಲ್ಲ ನಂಗೆ… ಕ್ಯಾಕರ್ಸಿ… ಉಗಿತವ್ರೇ
ನಿಮ್ದೂಕೇ… ವೇಸ್ಟ್ ಕಿಯಾ ಅನ್ನುತಾವ್ರೇ

ಅಗ್ಯೋದ್ ಗಿಗ್ಯೋದ್ ನಕ್ಕೋಜಿ
ಸುಮ್ಕೇ ಗುಳುಮ್ ಕರೋಜಿ
ನಮ್ದುಕೇ ರಿಕ್ವೆಸ್ಟ್ ಕರ್ತಾ ಹೈ

ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ
ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ

ಆಸೆ ಪಟ್ಟು ತಿಂದು ಬಿಟ್ಟು… ತಿಂದ ಮೇಲೆ ಹೊಟ್ಟೆ ಕೆಟ್ಟು… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ನಿಮ್ಮನ್ನ… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ಆಸೆ ಪಟ್ಟು ತಿಂದು ಬಿಟ್ಟು… ತಿಂದ ಮೇಲೆ ಹೊಟ್ಟೆ ಕೆಟ್ಟು… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
ನಿಮ್ಮನ್ನ… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್

ಸುಮ್ನೇ ಕೀಟ್ಲೆ ಯಾಕ್ಮಾಡ್ತೀ
ವಾಸ್ನೇ ಘಂ-ಘಂ ಅಂತೈತೆ
ತಿನ್ನೋಕ್ ಶುರು ಕರ್ಕೇ ದೇಖೋಜಿ…

ತಕ್ಕೋ… ತಕ್ಕೋ…

ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ
ವೇಸ್ಟ್- ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ವೇಸ್ಟ್- ಗೇ ಆಗ್ ಬಿಟ್ಟೈತೆ

ಖಾನೇ ಲಾಯಕ್ ಅನ್ಸತಾ ಇಲ್ಲ… ಪತ್ರೊಡೆ
ತಿಂದ್ ಗಿಂದ್ ಹೊಟ್ಟೇ ನೋವು… ಬರ್ತದೇ
ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ… ಛೇ… ಛೇ… ಛೇ…

ಪತ್ಥರ್-ಗೇ ಆಗ್ ಬಿಟ್ಟೈತೆ… ಈ ಪತ್ರೊಡೆ… ಪತ್ಥರ್-ಗೇ ಆಗ್ ಬಿಟ್ಟೈತೆ

ಮೂಲ ಹಾಡು: ‘ಗೋವಿಂದಾಯ ನಮಃ’ ಚಿತ್ರದ ‘ಪ್ಯಾರ್‌ಗೆ ಅಗ್ಬಿಟೈತೆ…’
ಕೃಪೆ: kannadalyrics.com

ಪ್ಯಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ
ಜಾನ್‌ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್‌ಗೆ ಹೋಗ್ಬಿಟೈತೆ

ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್‌ಗೀನೆ ಹಾಳಾಗ್ಬಿಟೈತೆ

ಪ್ಯಾರ್‌ಗೆ ಅಗ್ಬಿಟೈತೆ…
ಪ್ಯಾರ್‌ಗೆ ಅಗ್ಬಿಟೈತೆ…
ಪ್ಯಾರ್‌ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ

ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ
ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ

ಉಗ್ಯೋ-ಗಿಗ್ಯೋ ನಕ್ಕೊಜಿ
ಸುಮ್ಕೇ ಪ್ಯಾರ್ ಕರೋಜಿ
ನಮ್ದುಕ್ಕೆ ನಿಮ್… ಇಶ್ಕ್ ಕರ್ತಾ ಹೈ

ಪ್ಯಾರ್‌ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ
ಪ್ಯಾರ್‌ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ

ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್-ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡೆಕೇಡ್ ಭರ್ಕೋ ಹೆತ್ತುಬಿಡೋದೇ
ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್ಕೊಂಡ್ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡಜನ್ ಡಜನ್ ಹೆತ್ತುಬಿಡೋದೇ

ಅಲ್ಲಿಗಂಟಾ ಯಾಕ್ ಕಾಯ್ತೀ
ಒಳಗೆ ಜುಂ-ಜುಂ ಅಂತೈತಿ
ಇಲ್ಲೇ ಶುರು ಹಚ್ಕೊಂಬಿಡೋದೇ

ನಕ್ಕೋ… ನಕ್ಕೋ…

ಪ್ಯಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ
ಜಾನ್‌ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್‌ಗೆ ಹೋ…ಗ್ಬಿಟೈತೆ

ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್‌ಗೀನೆ ಹಾಳಾಗ್ಬಿಟೈತೆ… ಎ… ಎ… ಎ…

ಪ್ಯಾರ್‌ಗೆ ಅಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ

ಎಕ್ಸಾಮ್ ಹಾಲಲ್ಲಿ ಉತ್ರ ಬರೆಯೋಕೆ ಗೊತ್ತಿಲ್ದೆ ಹಾಲೇ ‘ಸೆರೆಮನೆ’ಯಾದಾಗ ‘ಅರಮನೆ’ ಚಿತ್ರದ ‘ಪತ್ರ ಬರಯಲಾ… ಇಲ್ಲಾ ಚಿತ್ರ ಬಿಡಿಸಲಾ…’ ಹಾಡು ‘ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ’ ಎಂಬ ಸಂದಿಗ್ಧದ ಪಾಡಾಗಿದೆ 🙂

ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ
ಹೇಗೆ ತುಂಬಲಿ ನಾನು… ಖಾಲಿ ಪುಟಗಳ

ಕಾಪಿ-ಮಾಡಲಾ… ಇಲ್ಲಾ ನೀಕಿ ನೋಡಲಾ
ಹೇಗೆ ಕಳೆಯಲಿ ನಾನು… ಎರಡು ಗಂಟೆಗಳ
ಉತ್ರ ಬರೆಯಲಾ…

ಮುಷ್ಟೀಲಿ ಹಿಡಿದು ನನ್ನ…ಟಫ್ಫಾದ ಈ ಪೇಪರನ್ನ
ಮಡ್ಚುತ್ತಾ ಹಾಗೆ ಅಲ್ಲೇ… ಮುದ್ದೆಯ ಮಾಡುವ ಆಸೆ
ಆರಾಮಾಗಿ ಸುಮ್ಮನೆ ನನ್ನ… ಡೆಸ್ಕ್-ಮೇಲೆ ಮಲಗುವ ಮುನ್ನ
ಈ ಎಕ್ಸಾಮು ಹಾಲಿನಿಂದ… ನಾ ಓಡಿ ಹೋಗುವಾಸೆ

ಸುಮ್ನೆ ಕೂರಲಾ… ನಿದ್ರೆ ಮಾಡಲಾ… ಓಡಿ ಹೋಗಲಾ…
ನಾ ಏನು ಏನು ಏನು ಮಾಡಲಿ?

ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ
ಹೇಗೆ ತುಂಬಲಿ ನಾನು… ಖಾಲಿ ಪುಟಗಳ
ಉತ್ರ ಬರೆಯಲಾ…

ಕಷ್ಟವಾದ ಪ್ರಶ್ನೆಗಳನ್ನ… ಪರೀಕ್ಷೇಲಿ ಕೇಳ್ದವರನ್ನ
ಬಾಯ್ತುಂಬಾ ಬೈಬೇಕಂತ… ನನ್ನ ಮಹದಾಸೆ
ಫೇಲು ಆಗಿ ಬಿಟ್ಟರೆ ಹೇಗೂ… ಇನ್ನೊಮ್ಮೆ ಕೂರುವೆ ನಾನು
ಉತ್ರವೆನುತ ಪ್ರಶ್ನೆ ಬರೆದು… ಪುಟ ತುಂಬೋದ್-ವಾಸಿ

ಬರೋ ಮಾರ್ಚಿಗೂ… ಅದರಾಚೆಗೂ… ಬರೆದ್ರಾಯಿತು
ನಾ ಫೇಲು ಫೇಲು ಫೇಲು ಆದರೆ

ಉತ್ರ ಬರೆಯಲಾ… ಇಲ್ಲ ಪ್ರಶ್ನೆ ಬರೆಯಲಾ
ಹೇಗೆ ತುಂಬಲಿ ನಾನು… ಖಾಲಿ ಪುಟಗಳ

ಕಾಪಿ-ಮಾಡಲಾ… ಇಲ್ಲಾ ನೀಕಿ ನೋಡಲಾ
ಹೇಗೆ ಕಳೆಯಲಿ ನಾನು… ಎರಡು ಗಂಟೆಗಳ
ಉತ್ರ ಬರೆಯಲಾ…

ಮೂಲ ಹಾಡು: ‘ಅರಮನೆ’ ಚಿತ್ರದ ‘ಪತ್ರ ಬರಯಲಾ… ಇಲ್ಲಾ ಚಿತ್ರ ಬಿಡಿಸಲಾ…’
ಕೃಪೆ : kannadalyrics.com

ಪತ್ರ ಬರೆಯಲಾ… ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ… ಮನದ ಹಂಬಲ

ಮಾತನಾಡಲಾ… ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ… ಎದೆಯ ತಳಮಳ
ಪತ್ರ ಬರೆಯಲಾ…

ಬೊಗಸೇಲಿ ಹಿಡಿದು ನಿನ್ನ… ಮುದ್ಡಾದ ಈ ಮೊಗವನ್ನ
ನೋಡುತ್ತಾ ಹಾಗೆ ನಿನ್ನ… ಕಣ್ಣಲ್ಲೇ ಕರಗೋ ಆಸೆ
ಮಗುವಾಗಿ ಸುಮ್ಮನೇ ನಿನ್ನ… ಮಡಿಲಲ್ಲಿ ಮಲಗಿಸೋ ಮುನ್ನ
ಈ ಬೆಚ್ಚಗೆ ಎದೆಯಲ್ಲಿ… ನಾ ಬಚ್ಚಿ ಕೂರುವಾಸೆ

ನಗುವಾಗಲಾ… ನೆರಳಾಗಲಾ… ಉಸಿರಾಗಲಾ…
ಐ ಲವ್ ಯೂ ಲವ್ ಯೂ ಲವ್ ಯೂ ಗೆಳೆಯ

ಪತ್ರ ಬರೆಯಲಾ… ಇಲ್ಲ ಚಿತ್ರ ಬಿಡಿಸಲಾ…
ಹೇಗೆ ಹೇಳಲಿ ನನ್ನ… ಮನದ ಹಂಬಲ
ಪತ್ರ ಬರೆಯಲಾ…

ನುಣುಪಾದ ಪಾದಗಳನ್ನ… ನೆಲವನ್ನು ಸೋಕುವ ಮುನ್ನ
ಅಂಗೈನ ಚಾಚಿ ನಿನ್ನ… ನಾ ನಡೆಸುವಾಸೆ
ಜೊತೆಯಾಗಿ ಇದ್ದರೆ ನಾವು… ಒಂದೊಮ್ಮೆ ಬಂದರೂ ಸಾವು
ನಗುನಗುತ ಅಲ್ಲೇ ಅದನು… ಸ್ವೀಕರಿಸುವಾಸೆ

ಯುಗದಾಚೆಗೂ… ಜಗದಾಚೆಗೂ… ಜೊತೆಯಾಗಿರು…
ಐ ಲವ್ ಯೂ ಲವ್ ಯೂ ಲವ್ ಯೂ ಗೆಳೆಯ

ಪತ್ರ ಬರೆಯಲಾ… ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ… ಮನದ ಹಂಬಲ

ಮಾತನಾಡಲಾ… ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ… ಎದೆಯ ತಳಮಳ
ಪತ್ರ ಬರೆಯಲಾ…