Posts Tagged ‘BJP Governor’

(ಸಂಜು ಮತ್ತು ಗೀತಾ….ಸೇರಬೇಕು ಅಂತ… ಹಾಡಿನ ಧಾಟಿಯಲ್ಲಿ , ಯಡ್ಯೂರಪ್ಪ ತಮ್ಮ ಗೋಳು ತೋಡಿಕೊಳ್ಳುವ ರೀತಿಯ ಒಂದು ಅಣಕ)

ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು
ರೆಡ್ಡಿ ಬ್ರದರ್ಸಗಿಂತ…ಇವ್ರೆ ದೊಡ್ಡ ಕಂಟಕ…ಉರುಳೋದ್ರೆ ಖುರ್ಚಿ.. ಮುಂದೆ ಏನು?
ಮೊನ್ನೆ ಎಲ್ಲಾ ಸೀಟನ್ನು… ಗೆದ್ವಿ ಆದ್ರೂ ನಿಮ್ದೇನು
ಎಲ್ಲಾ ಶಾಸಕರ ಪತ್ರ..ನೀಡುವೆ ನಿಮ್ಮ ವಶಕಿನ್ನು
ನಾಳೆಯಾಗಲಿ ನಾಡಿದ್-ನಾ ದಿಲ್ಲಿ,, ಸೇರುವೆ
ನೋಡಬಾರದೆ ನೋಡಬಾರದೆ ನಮ್ ಬಲವ?

ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು ||

ಬೀಜೇಪಿಗೊಂದು… ಕಾಂಗ್ರೇಸ್ಸಿಗೊಂದು
ರೂಲ್ಸಂತೆ ಇಂದು..ಸರಿಯೇನು ನಿಮ್ದು
ಏನಾಗಲಿ..ನಮ್ಮ ಗವರ್ನರು ನೀವ್
ನಿಮ್ಮ ದಿಲ್ಲಿ ದರ್ಬಾರು… ಬೇಗ ಕೊನೆಯಾಗಲಿ

ಇಡಿಯ ದೇಶದಲ್ಲಿ…ದೊಡ್ಡ ಸುದ್ದಿಯಾದ್ರಿ ನಿನ್ನೆ
ವಿರೋಧಪಕ್ಷದ ರೀತಿ…. ನೀವು ನಮ್ಗೆ ಕೊಟ್ರಿ ಕೈನಾ
ಇತಿಹಾಸದ… ಪುಟಕಾಣದ… ನಿಲುವೇ. ನಿಮ್ಮದೇ..?
ನಾಳೆಯಾಗಲಿ… ನಾಡಿದ್-ನಾ ದಿಲ್ಲಿ,, ಸೇರುವೆ
ನೋಡಬಾರದೆ… ನೋಡಬಾರದೆ ನಮ್ ಬಲವ?

ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು ||

ನಮ್ಮ್ ಪಾರ್ಟಿಯೋರು… ಒದ್ದಾಡಿ ಹೇಗೋ
ಎಮ್ಮೆಲ್ಲ್ಯೆ ಎಲ್ರೊ..ನಮ್ಮ ಹಿಂದೆ ಬಂದ್ರು
ಪತ್ರ ನೋಡಿದೆ… ಅಳುವೇ ಬರುತಿದೆ
ನಿಮ್ಮ ಹಗೆಯಿಂದಲೇ…ನಮ್ಮ ನಗೆ ನಿಂತಿದೆ
ಎದುರು ಪಾರ್ಟಿ ಸನ್ನೆಗೆ…ನೀವು.. ಕುಣಿಯಬಹುದೆ ಹೀಗೆ
ದೆಹೆಲಿ ಮೇಡಂ ಆಜ್ಞೆಗೆ,,,ನೀವು… ಕಾದು ಕುಳಿತ್ರೆ ಹೇಗೆ
ಉಸಿರಾಡುವ… ಶವವಾಗುವೆ… ನಾ.. ಕುರ್ಚಿ.. ಇಲ್ಲದೆ
ಬೆಂಬಲ ಇದ್ದರೂ.. ಸಸ್ಪೆನ್ಷನು… ತರವೇ
ನಾಳೆ ದಿಲ್ಲಿಗೆ ನಿಮ್ಮಲ್ಲಿಗೆ ನಾ ಬರುವೇ…
ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು ||

ಮೂಲ ಹಾಡಿನ ಸಾಹಿತ್ಯ ಇಲ್ಲಿದೆ…

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ.. ನನ್ನ ಸಂಗಾತಿ ನೀ..
ನಿನ್ನ ಈ ಕಣ್ಣಲೀ… ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ… ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ… ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ.. ಪುತ ಕಾಣದ…. ಒಲುಮೆ… ನೀಡುವೇ…
ಮಳೆಯಾ ಹನಿ… ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ತಂಗಾಳಿಯಾಗೋ ಬಿರುಗಾಳಿಯಾಗೋ
ನೀ ಒಮ್ಮೆ ಬಂದು.. ನನ್ನ ಸೋಕಿ ಹೋಗು
ನಿನ್ನ ನೋಡದೇ… ಅಳುವೇ ಬರುತಿದೇ
ನಿನ್ನ ನಗುವಿಲ್ಲದೇ …ಜಗ ನಿಂತಂತಿದೆ..
ನಿದಿರೆ ಬರದ ಕಣ್ಣಿಗೆ… ಬಾರೆ ಹಗಲುಗನಸ ಹಾಗೆ
ಬಳಲಿ ಹೋದ ನನಗೆ…. ಬಾರೆ ಜೀವ ತುಂಬು ಹಾಗೆ
ಉಸಿರಾಡುವ… ಶವವಾದೆ ನಾ… ನೀನು… ಇಲ್ಲದೇ
ಮಳೆ ನಿಂತರೂ..ಮರದಾ ಹನಿ… ತರವೇ
ಬಾ ಇಲ್ಲಿಗೆ… ನನ್ನಲ್ಲಿಗೆ…. ನನ್ನೊಲವೇ..
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…