Posts Tagged ‘cricket’

ಯೋ ಬಾಯ್ಸ್.. ಅಯಾಮ್ ಸಿಂಗಿಂಗ್ ಸಾಂಗ್

solo ಸಾಂಗ್….ಸೋಲೋ… ಸಾಂಗ್…
ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ..

ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ..

ಪರ್ತಿನಲ್ಲಿ ಟೆಸ್ಟು ಟೆಸ್ಟು
ಆಡಿದ್ ಸುಮ್ನೇ ವೇಷ್ಟು
ವೈಟು ವಾಷು ಅದ್ರೆ ಬೆಷ್ಟು
ಕುಡಿಬೌದು ಪೆಪ್ಸಿ ಬೂಸ್ಟೂ..

ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ..

ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ..

ವೈಟು ಸ್ಕಿನ್ನು ಕ್ಲಾರ್ಕು ಕ್ಲಾರ್ಕು
ನೆಟ್ಟ ಮೈಲ್-ಸ್ಟೋನ್ ಮಾರ್ಕು
ಸೀನಿಯರ್ ಬಾಯ್ಸು ಫೇಲು ಫೇಲು
ಅವ್ರ ಫ್ಯೂಚರ್ ಡಾರ್ಕು..

ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ..

ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ..

ಹ್ಯಾಂಡಲ್ ಗ್ಲೌಸು
ಕಾಲಲ್ ಪ್ಯಾಡು
ಹಾರ್ಟು ಫುಲ್ಲು ಫಿಯರು

ಎಂಪ್ಟಿ ಸ್ಕೋರು
ಬೌಲರ್ ಕಮ್ಮು
ಸ್ವಿಂಗ್ ಬಾಲು…ಫಯರ್ರು

ಬೌಲ್ಡೋ ಬೌಲ್ಡೋ
ಮಿ ಕ್ಲೀನ್ ಬೌಲ್ಡೋ
ಐ ಹ್ಯಾವ್ ಟು ಲೀವ್ ಗ್ರೌಂಡು

ಬೂ(boo)ವೋ…ಬೂ(boo)ವೋ
ಕ್ರೌಡ್ ಫುಲ್ಲ್ ಬೂ(boo)ವೋ
ಐ ವಾಂಟ್ ಟು ಎಸ್ಕೇಪ್ ನವ್ವು

ಓ ಗಾಡ್ ವಿ ಆರ್ ಪಾರ್ಟಿಯಿಂಗ್ ನವ್ವು, ವಿ ಆರ್ ಹ್ಯಾಪ್ಪಿ ನವ್ವು
ದಿಸ್ ಸಾಂಗು ಫಾರ್ ಕ್ರಿಕೇಟ್ ಫ್ಯಾನ್ಸು.. ಯೂ ಡೋಂಟ್ ಹ್ಯಾವ್ ಸೆನ್ಸು….!!!

ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ..

ವೈ ದಿಸ್ ಕ್ರಿಕೇಟ್-ವರಿ ಕ್ರಿಕೇಟ್-ವರಿ ಕ್ರಿಕೇಟ್-ವರಿ ರೀ..

 

ಶೋಯೇಬ್ ಅಕ್ತರ್ ಗೆ ಹುಚ್ ನಾಯಿ ಕಚ್ಚಿ….ಸಚಿನ್ ಮೇಲೆ ಬಾಯಿಗೆ ಬಂದದ್ದೆಲ್ಲಾ ಬೊಗಳಿ ಆದ ಮೇಲೆ ಈಗ ಪರಮಾತ್ಮ ಚಿತ್ರದ ಯಾವನಿಗ್ಗೊತ್ತು ಹಾಡನ್ನು ಬದಲಾಯಿಸಿ ಹೀಂಗೆ ಹಲುಬುತ್ತಿದ್ದಾನೆ ನೋಡಿ… 🙂

ನೀನೆ ಜೀನಿಯಸ್ಸು… ಬಾಯಿತಪ್ಪಿಎಡವಟ್ಟಾಯ್ತೋ…
ಅದು ದ್ವೇಷಾನಾ… ನನ್ನ ಬುರ್ಡೇನಾ
ಮಂಡೆ ಕೆಟ್ಟಿತ್ತಾ…. ಯಾವಾನಿಗ್ ಗೊತ್ತು

ಏನು ಮಾಡೊದು… ಮೆಂಟ್ಲು ನಾಯೊಂದು
ರೋಡಲ್ಲಿ ಕಚ್ತು… ರೋಡಲ್ಲಿ ಕಚ್ತು
ಏನು ಹೇಳಿದ್ನೋ… ಇಂತ ಟೈಮಲ್ಲಿ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಸಣ್ಣದೊಂದು ನಾಯಿ… ನನ್ನತ್ರ ಬಂದು
ತನ್ನ ಹಲ್ಲು… ನೆಟ್ಟಂಗಾಯ್ತು

ನಾಯಿ ಯಾತಕ್ಕೆ.. ನಂಗೆ ಕಚ್ಚಿತ್ತೋ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಮರ್ಲು ಬಿಡ್ತದಾ… ಹಿಂಗೆ ಇರ್ತದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಅದು ಯಾವ್ದೊ ವರ್ಡು ಕಪ್ಪು… ಮ್ಯಾಚಲ್ಲಿ
ಬೌಲಿಂಗು ಮಾಡುತ್ತಿದ್ದೆ… ಸ್ಪೀಡಲ್ಲಿ
ನೀ ಬ್ಯಾಟಿಂಗ್ ಮಾಡ್ತಿದ್ದೆ… ಎದುರಲ್ಲಿ
ಅವಲಕ್ಕಿ ಕುಟ್ದದಂಗಾಯ್ತು… ಎದೆಯಲ್ಲಿ

ಆಮೇಲೇನು ಆಯ್ತು… ನಮ್ಮಪ್ಪನ್ನ ಕೇಳ್ರಿ
ಡಾಟು ಬಾಲಿಗಿಂತ… ಬೌಂಡ್ರಿ ಸಿಕ್ಸೇ ಹೆಚ್ಚ್ರಿ
ಮ್ಯಾಚ್ ಆದಮೇಲೆ… ಬೆಡ್ ಶೀಟು ಹಾಸಿ
ಮುಚ್ಚಾಕಿಕೊಂಡು… ಮಲ್ಕಂಬಿಟ್ಟೇ

ಇಂತ ಟೈಮಲ್ಲಿ… ಕನಸು ಬಿದ್ದಿತ್ತಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಕನಸಿನಲ್ಲೂನೂ… ಬೆಚ್ಚಿ ಬಿದ್ದಿದ್ನಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಬಾಲಲ್ಲಿ ಔಟು ಮಾಡೋಕ್… ಆಗ್ಲಿಲ್ಲ
ಯಾರ್ಕರು ಹಾಕಿದ್ರೂ ಔಟು… ಆಗ್ಲಿಲ್ಲ
ಬೌನ್ಸರು ಹಾಕಿದ್ರು ಸಿಕ್ಸು… ಹೊಡದ್ನಲ್ಲ
ನಿಮ್ಗೆ ಗೊತ್ತಲ್ವಾ… ನಾನು ಮುಟ್ಟಾಳ

ಮತ್ತೆ ಮತ್ತೆ ಬಂತು… ಬಾಲಿಗೊಂದು ಬೌಂಡರಿ
ತುಂಬಾ ಒಳ್ಳೇ ಆಡಿದ… ಬೌಲಿಂಗ್ ಮಾಡೋದ್ ಹೆಂಗ್ರಿ
ಮಂಡೆ ಪೆಟ್ಟಾಗಿ… ಮಾತಾಡ್ದೆ ನಾನು
ಸುಮ್ಮನೆ ಮನೇಲಿ… ಇರಾಬೌದಿತ್ತು

ನನ್ನ ಕಚ್ಚಿದ… ನಾಯಿ ಇರಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರು… ಸತ್ತು ಬಿದ್ದಿತ್ತಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಮೂಲ ಸಾಹಿತ್ಯ : ಪರಮಾತ್ಮ ಚಿತ್ರದ ‘ಯಾವನಿಗ್ ಗೊತ್ತು… ಯಾವನಿಗ್ ಗೊತ್ತು’
ಕೃಪೆ: kannadalyrics.com

ನಾನೇ ಜೀನಿಯಸ್ಸಾ… ಹ್ರುದೆಸೀರಿಸೇಲಾತಿ… ಲಬಬಾವೂ
ಎಬಿಸೀಡಿನಾ… ಆಲೂಗಡ್ದೆನಾ
ಗೋಡೆ ಹಲ್ಲೀನಾ… ಯಾವಾನಿಗ್ ಗೊತ್ತು

ಏನು ಮಾಡೋದು… ಒಂಟಿ ಹೂವೊಂದು
ರೋಡಲ್ಲಿ ಸಿಕ್ತು… ರೋಡಲ್ಲಿ ಸಿಕ್ತು
ಏನು ಹೇಳೋದು… ಇಂಥಾ ಟೈಮಲ್ಲಿ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಎದೆಯಂಬ ಖಾಲಿ… ಡಬಕ್ಕೆ ಒಂದು
ಸಣ್ಣ ಕಲ್ಲು… ಬಿದ್ದಂಗಾಯ್ತು

ಡಬ್ಬ ಯಾತಕ್ಕೆ… ಸೌಂಡು ಮಾಡುತ್ತೊ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಇವ್ಳು ಸಿಕ್ತಾಳ… ಕೈ ಕೊಡ್ತಾಳ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಅದು ಯಾವ್ದೋ ಒಂಟಿ ಹಕ್ಕಿ… ಸದ್ದನ್ನಾ
ಕೇಳುತ್ತಾ ಮಲ್ಕೊಂಡಿದ್ದೆ… ಮಧ್ಯಾಹ್ನ
ಕಾಲ್ ಕೇಜಿ ಪ್ರೀತಿಗೊಂದು… ಪದ್ಯಾನಾ
ಬರೆದಿಟ್ಟು ಕೆರೆದುಕೊಂಡೆ… ಗಡ್ಡಾನಾ

ಕಾಳಿದಾಸ ಕಾವ್ಯ… ನಮಪ್ಪನ್ನ ಕೇಳ್ರಿ
ಕಾಲಿ ಹಾಳೆಗಿಂತ… ಒಳ್ಳೆ ಕಾವ್ಯ ಇಲ್ರಿ
ಹೃದಯದ ಮೇಲೆ… ಹೈ-ಹೀಲ್ಡು ಹಾಕಿ
ರಾಜಕುಮಾರಿ… ನಿಂತಂಗಾಯ್ತು

ಇಂಥಾ ಟೈಮಲ್ಲಿ… ಹಾಡು ಬೇಕಿತ್ತಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ದೇವ ದಾಸಾನೂ… ಎಣ್ಣೆ ಬಿಟ್ಟಿದ್ನಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಕನಸಲ್ಲಿ ಯಾಕೊ ಯಾವ್ದೂ… ಸಾಲಲ್ಲ
ಮೋಡಾನ ಮುದ್ದು ಮಾಡೋ… ಕಾಗಲ್ಲಾ
ಚಿಟ್ಟೆಗೆ ಚಡ್ಡಿ ಹಾಕೋ… ಕಾಗ್ಲಿಲ್ಲ
ನಿಮ್ಗೆ ಗೊತ್ತಲ್ವಾ ನಾನು… ಮುಟ್ಟಾಳ

ಮತ್ತೆ ಮತ್ತೆ ಬಂತು… ಎದೆಯಲ್ಲೊಂದು ಲಹರಿ
ತುಂಬಾ ಒಳ್ಳೆ ಕನ್ನಡ… ಮಾತಾಡ್ಬಿಟ್ಟೆ ಕಣ್ರಿ
ಮೂಗು ಬೊಟ್ಟಾಗಿ… ಹುಟ್ಟಿದ್ರೆ ನಾನು
ಇವಳ ಮೂತೀಲೆ… ಇರಬೌದಿತ್ತು

ನನ್ನ ಆಸೆಗೂ… ಮೀನಿಂಗ್ ಇರಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರು… ತಿಂಡಿ ಸಿಗಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಕ್ರಿಕೇಟ್ ಪ್ರೇಮಿಗಳಿಗೆಲ್ಲರಿಗೂ ಚಿರಪರಿಚಿತ ಈ ನೆಲ್ಸನ್ ನಂಬರ್. ಸ್ಕೋರ್ 111 ಆದಾಗ ಡೇವಿಡ್ ಶೆಫರ್ಡ್ ಕುಪ್ಪಳಿಸುತ್ತಿದ್ದ ಚಿತ್ರವೂ ಕಣ್ಣಿಗೆ ಕಟ್ಟಿದಂತಿದೆಯಲ್ಲವೇ? ಈ ನಂಬರಿನ ವೈಶಿಷ್ಟ್ಯವಾದರೂ ಏನು? ಯಾಕೆ ಇದು ಅನ್‌ಲಕ್ಕಿ?

 

ಕೆಲವರು ಪ್ರತಿಪಾದಿಸುವ ಪ್ರಕಾರ ಈ ನಂಬರ್‌ನೊಂದಿಗೆ ಜೋಡಿಸಲ್ಪಡುವ ನೆಲ್ಸನ್ ಅನ್ನುವಾತ – ಬ್ರಿಟಿಷ್ ಸೇನೆಯಲ್ಲಿದ್ದ ವೈಸ್ ಅಡ್ಮಿರಲ್ ನೆಲ್ಸನ್. ಅವನಿಗೆ ಕೇವಲ ಒಂದು ಕಣ್ಣು, ಒಂದು ಕೈ, ಒಂದು ಕಾಲು ಮಾತ್ರ ಇತ್ತು. ಹಾಗಾಗಿ ಅವನ ದುರಾದೃಷ್ಟದ ಸಂಕೇತವಾಗಿ ಅದನ್ನು ಸೂಚಿಸಲು 111 ಬಳಸುವ ಕ್ರಮ ಮೊದಲುಗೊಂಡಿತು.ಆದರೆ ವಾಸ್ತವದಲ್ಲಿ ನೆಲ್ಸನ್‌ಗೆ ಒಂದು ಕಣ್ಣು ಒಂದು ಕೈ ಇಲ್ಲವಾಗಿದ್ದರೂ ಕೂಡಾ ಅವನ ಎರಡೂ ಕಾಲುಗಳು ಸರಿಯಿದ್ದವಂತೆ.

 

ಇನ್ನೊಂದು ಮೂಲದ ಪ್ರಕಾರ ನೆಲ್ಸನ್ ಗೆದ್ದ ಮೂರು ನೌಕಾಪಡೆಯ ಯುದ್ಧಗಳ (ಕೋಪನ್‌ಹೇಗನ್, ನೈಲ್, ಟ್ರಫಾಲ್ಗರ್) ಗೌರವಾರ್ಥ won-won-won” ಅನ್ನುವುದನ್ನು ಸಾಂಕೇತಿಕವಾಗಿ 111 ಅಂತ ಬಳಸಲಾಯ್ತು. ಕ್ರಮೇಣ ಇದು ಅನ್‌ಲಕ್ಕಿ ಅನ್ನುವ ಮೂಢನಂಬಿಕೆ ಇದರೊಂದಿಗೆ ಸೇರಿಕೊಂಡಿತು.

 

ಇನ್ನೂ ಒಂದು ವಾದವಿದೆ. 111 ಅನ್ನುವ ಸಂಖ್ಯೆ ಬೇಲ್ಸ್ ಇಲ್ಲದ ಮೂರು ಸ್ಟಂಪ್‌ಗಳನ್ನು ಸೂಚಿಸುತ್ತದೆ. ಅದು ವಿಕೇಟ್ ಉರುಳುವ ಸಂಕೇತ ಅಂತ ಅಂತ ಹೇಳುತ್ತದೆ ಈ ವಾದ. ಏನೇ ಇರಲಿ 111 ಅನಿಷ್ಟದ ಸಂಕೇತ ಅನ್ನುವ ನಂಬಿಕೆ ಅದು ಹೇಗೋ ಬಹುತೇಕರಲ್ಲಿ ಮನೆಮಾಡಿದೆ. ಜೊತೆಗೆ 222 ಡಬಲ್ ನೆಲ್ಸನ್, 333- ಟ್ರಿಪಲ್ ನೆಲ್ಸನ್… ಹೀಗೆ ಇವೂ ಕೂಡಾ ದುರದೃಷ್ಟ ತರುತ್ತದೆ ಅಂತ ಬಲವಾಗಿ ನಂಬುವವರಿದ್ದಾರೆ. ಸ್ಕೋರ್ ನೆಲ್ಸನ್ ನಂಬರನ್ನು ದಾಟುವವರೆಗೂ ಒಂಟಿ ಕಾಲಲ್ಲಿ ನಿಂತರೆ ಅಶುಭ ಸಂಭವಿಸದು ಅನ್ನುವ ನಂಬಿಕೆಯೇ ಶೆಫರ್ಡ್ ಕುಪ್ಪಳಿಸುವುದರ ಹಿಂದಿನ ರಹಸ್ಯ.

 

ಆಸ್ಟ್ರೇಲಿಯನ್ ಕ್ರಿಕೇಟ್‌ನಲ್ಲಿ 87ನ್ನು ಡೆವಿಲ್ಸ್ ನಂಬರ್ ಎಂದು ಕರೆಯುತ್ತಾರೆ. ಇದು 100 ರನ್‌ಗಳಿಗೆ 13 ರನ್ ಕಡಿಮೆ ಇರುವುದರಿಂದ , 13 ಅನ್ನುವುದು ದುರಾದೃಷ್ಟದ ಸಂಖ್ಯೆ ಅಂತ ಅವರು ಭಾವಿಸುವುದೇ ಈ ನಂಬಿಕೆಯ ಹಿಂದಿನ ಮರ್ಮ.

 

ಒಟ್ಟಿನಲ್ಲಿ ಈ ನೆಲ್ಸನ್ ನಂಬರ್, ಡೆವಿಲ್ಸ್ ನಂಬರ್ ದುರದೃಷ್ಟ ತರುತ್ತೋ ಅಥವಾ ಆ ಭೀತಿಯಿಂದಲೇ ವಿಕೇಟ್ ಉರುಳುತ್ತೋ, ನೋಡುವವರಿಗಂತೂ ಇದನ್ನು ನಂಬುವವರ ಕುಣಿದಾಟ ನಗು ತರಿಸುತ್ತೆ.

ಕ್ರಿಕೇಟ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್ ಸೊನ್ನೆಗೆ ಔಟ್ ಆದಾಗ ಅವನ ಸ್ಕೋರ್ ಡಕ್ ಅಂತ ಹೇಳೋದು ನಮಗೆಲ್ಲಾ ಗೊತ್ತು. ಆದ್ರೆ ಈ ಡಕ್‌ನಲ್ಲಿ ಎಷ್ಟೊಂದು ವೆರೈಟಿ ಇದೆ ಅಂತ ಗೊತ್ತೇ ಇರ್ಲಿಲ್ಲ. ಇಲ್ಲಿದೆ ನೋಡಿ ಕೆಲವು ಅಂತಹ ಡಕ್‌ಗಳ ಸುದ್ದಿ

 

ಸಿಲ್ವರ್ ಡಕ್ ಒಬ್ಬ ಬ್ಯಾಟ್ಸ್‌ಮನ್ ತಾನಾಡಿದ ಎರಡನೆ ಬಾಲ್‌ಗೆ ಒಂದೂ ರನ್ ಗಳಿಸದೆ ಔಟಾಗೋದು

ಗೋಲ್ಡನ್ ಡಕ್ – ಒಬ್ಬ ಬ್ಯಾಟ್ಸ್‌ಮನ್ ತಾನಾಡಿದ ಮೊದಲನೇ ಬಾಲ್‌ಗೆ ಒಂದೂ ರನ್ ಗಳಿಸದೆ ಔಟಾಗೋದು

ಡೈಮಂಡ್ ಡಕ್ – ಒಬ್ಬ ಬ್ಯಾಟ್ಸ್‌ಮನ್ ಒಂದೂ ಎಸೆತವನ್ನು ಎದುರಿಸದೇ ಔಟಾಗೋದು ( ಸಾಮಾನ್ಯವಾಗಿ ರನ್ ಔಟ್)

ಪ್ಲಾಟಿನಂ ಡಕ್ ಒಂದು ಮ್ಯಾಚ್‌ನ ಮೊದಲನೇ ಬಾಲ್‌ಗೆ ಒಂದೂ ರನ್ ಗಳಿಸದೆ ಔಟಾಗೋದು

 

ಪೇರ್ (pair) – ಒಬ್ಬ ಬ್ಯಾಟ್ಸ್‌ಮನ್ ಟೆಸ್ಟ್ ಮ್ಯಾಚ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಸೊನ್ನೆಗೆ ಔಟಾಗೋದು

ಕಿಂಗ್ಸ್ ಪೇರ್ (kings pair) – ಒ ಬ್ಬ ಬ್ಯಾಟ್ಸ್‌ಮನ್ ಟೆಸ್ಟ್ ಮ್ಯಾಚ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್‌ಗೆ ಔಟಾಗೋದು

 

ನಮ್ಗೆ ಕ್ರಿಕೆಟ್ ಬಗ್ಗೆ ಎಲ್ಲಾ ಗೊತ್ತು ಅಂದ್ಕೊಂಡು ಬೀಗ್ತಾ ಇರ್ತೀವಿ..ಅದ್ರೆ ಗೊತ್ತಿಲ್ದೇ ಇರೋದು ಎಷ್ಟು ಇರುತ್ತೆ ಅಂತ ವಿಕಿಪಿಡಿಯಾದಲ್ಲಿ ಈ ಮಾಹಿತಿ ಸಿಕ್ಕ ಮೇಲೆ ಗೊತ್ತಾಗಿದ್ದು.