Posts Tagged ‘IPL spoof’

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ? ಅಲ್ಲಲ್ಲಿ ‘ಸ್ಪಾಟ್ ಫಿಕ್ಸ್’ ಮಾಡಿ ಹೆಣೆದ ಅಣಕ :-)

Posted: ಮೇ 17, 2013 in aNaka, anakavaadu, ಅಣಕ, ಅಣಕವಾಡು, ಇತ್ಯಾದಿ..., ಕನ್ನಡ, ಕನ್ನಡ ಅಣಕ, ಕನ್ನಡ ಅಣಕ ಹಾಡು, ಕನ್ನಡ ಚಲನಚಿತ್ರ ಹಾಡು ಅಣಕ, ಕನ್ನಡ ರೀಮಿಕ್ಸ್, ಕ್ರಿಕೆಟ್, ಕ್ರಿಕೆಟ್ ಫಿಕ್ಸಿಂಗ್, ಗಮ್ಮತ್ತಿನ ಹಾಡು, ರಿಮಿಕ್ಸ್, ರೀಮಿಕ್ಸ್, ಸಿನಿಮಾ, ಸ್ಪಾಟ್ ಫಿಕ್ಸಿಂಗ್, ಹಾಗೆ ಸುಮ್ಮನೆ, cricket, film, gammaththina haadu, IPL, IPL 2013, kannada, kannada anakavadu, kannada film song remix, kannada remix, kannada spoof
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಮೂಲ ಹಾಡನ್ನು ಬಹುತೇಕ ಹಾಗೇ ಅಳಿಸಿಕೊಂಡು… ಅಲ್ಲಲ್ಲಿ ‘ಸ್ಪಾಟ್ ಫಿಕ್ಸ್’ ಮಾಡಿ ಹೆಣೆದ ಅಣಕ 🙂

‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’ ಧಾಟಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಅಣಕ ‘ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ’

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

ಬುಕ್ಕಿ ಮಾರ್ಕೆಟ್ಟು… ಸೇಲಾದೋರ… ರೇಟ್ ಏನಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

ಕೆಲವೊಮ್ಮೆ… ಪ್ಲೆಯರ್ಸ್-ನಾ … ಕೊಂಡಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಬೆಟ್ಟಿಂಗು… ಕಳ್ಕೋ ಬೇಕಾಯ್ತದೆ

ಫಿಕ್ಸಿಂಗ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಚೆಂಡ್ ಚೆಂಡ್ ಚೆಂಡ್ ಚೆಂಡ್

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

ಇಂತಾ ಓವರಲ್ಲಿ … ನಿಮ್ಗೆಷ್ಟು ರನ್ ಬೇಕು
ಕೊಡೋದು ಹೆಂಗೇ… ಹೇಳಿ ಸ್ವಾಮೀ
ಇಂಥಾ ಬಾಲನ್ನು… ನೋಬಾಲು ಹಾಕೋಕೆ
ಎಷ್ಟ್ ಲಕ್ಷ ನಂಗೆ… ಕೊಡ್ತ್ರಿ ಸ್ವಾಮೀ

ನ…ಮ್ಮಾ ಸ್ಪಾಟ್ ಫಿಕ್ಸು… ದಂ…ಧೆ ಹಿಂಗೇನೇ
ಮ್ಯಾ…ಚಿನಲ್ಲೀ ಕ್ಯಾಚು… ಡ್ರಾ…ಪು… ಸುಮ್ನೇನೆ

ಸಂಜ್ಞೆ ಸನ್ನೇಲಿ… ಕಾಸು ಸ್ಪಾಟ್ ಆಯ್ತದೆ
ಪ್ರತೀ ಬಾಲಿನಲಿಯೂ… ಲಕ್ಷ್-ಲಕ್ಷಾ ಸಿಗ್ತದೆ

ಈಜಿ ದುಡ್ಡಿಗೆ… ಆಸೆ ಪಟ್ರೆ… ಜೈಲ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

ಒಂದು ಬಾಲನ್ನು… ಮಾಡಿದರೆ ಸ್ಪಾಟು
ಕೈ ತುಂಬಾ ಕಾಸುಗಳ… ಕೊಡುತಾರೇ
ಫ್ರಾಂಚೈಸಿ ಕೊಡೆಯಾ… ಒಳಗಡೆ ಸುಮ್ನೆ
ನಮ್ಮ ಬುಕ್ ಮಾಡಿ ಯಾರೋ… ಸಿಗ್ಸುತಾರೆ

ಮೂ…ರೇ ಘಂಟೆಯಷ್ಟೇ… ಮ್ಯಾ…ಚು ಆದರೇ
ಆ…ರೂ ಬಾಲಿನಲ್ಲಿ… ಕ್ರೋ…ರು ಬಾಚ್ತಾರೆ

ಬುಕ್ಕೀಸ್ಗೆ ಟೈಮಲ್ಲಿ ಸೈನು… ಬೇಕಾಯ್ತದೆ
ಪ್ಲೆಯರ್ಸು ಸಿಗ್ನಲ್ಸು… ಕಲೀ ಬೇಕಾಯ್ತದೆ

ಇಂಥಾ ಬೆಗ್ಗರ್ಸು… ಆಟಾಡೋದು… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಕ್ರಿಕೆಟ್ ಮ್ಯಾಚಲ್ಲಿ… ಟೋಟಲ್ ಆಗಿ… ಎಷ್ಟು ಸ್ಪಾಟಿದೆ?
ಚೆಂಡ್ ಚೆಂಡ್ ಚೆಂಡ್ ಚೆಂಡ್

______________________________________________

ಮೂಲ ಹಾಡು: ‘ಬಚ್ಚನ್’ ಚಿತ್ರದ ‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’

ಸಾಹಿತ್ಯ : ಯೋಗರಾಜ್ ಭಟ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು… ಚೂಡಿದಾರೂ… ರೇಟ್ ಏನಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಕೆಲವೊಮ್ಮೆ… ಕೆಲವೊಂದು… ತಿಳಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಮರ್ಯಾದೆ… ಕಳ್ಕೋ ಬೇಕಾಯ್ತದೆ

ಜನರಲ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಇಂಟರ್-ನೆಟ್ಟಲ್ಲಿ… ಇಡ್ಲಿ ನಾ ಡವ್ನ್-ಲೋಡ್
ಮಾಡೋದು ಹೆಂಗೇ… ಹೇಳಿ ಸ್ವಾಮೀ
ಇಂಥಾ ಪ್ರಶ್ನೇಗೆ… ಉತ್ತರ ಸಿಗದೇ
ಸತ್ತ್ ಹೋದಾ ನನ್ನಾ… ಹಳೇ ಪ್ರೇಮೀ

ನ…ನ್ನಾ ಪ್ರೀತಿ ಪಾಠಾ… ಸ್ವ…ಲ್ಪಾ ಹಿಂಗೇನೇ
ಸ್ಕೂ…ಲಿನಲ್ಲೀ ಲಾಸ್ಟು… ಬೆಂ…ಚು… ನಿಮ್ದೇನೇ

ಸಂಜೇ ಟೈಮಲ್ಲಿ… ಕ್ಲಾಸು ಸ್ಟಾರ್ಟ್ ಆಯ್ತದೆ
ಬರೀ ಹುಡುಗರಿಗೆ… ಪ್ರವೆಸಾ ಇರ್ತದೆ

ಎಜುಕೇಸನ್ನೇ… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ವಿಂಡೋ ಕರ್ಟನ್ನು… ತೆಗೆದರೆ ಸಾಕು
ಕೈ ಕೊಟ್ಟ ಹುಡುಗರೇ… ಕಾಣುತಾರೇ
ಕಾಫಿಡೇ ಕೊಡೆಯಾ… ಕೆಳಗಡೆ ಸುಮ್ನೆ
ನಮ್ಗೆ ಫ್ರೆಶ್ ಆಗಿ ಯಾರೋ… ಸಿಗುತಾರೆ

ಮೂ…ರೂ ಘಂಟೆಯಲ್ಲಿ… ಪ್ಯಾ…ರೂ ಆದರೇ
ಆ…ರೂ ಘಂಟೆಗೆಲ್ಲಾ… ಬೋ…ರೂ ಆಯ್ತದೆ

ಲೇಡೀಸ್ಗೆ ಲವ್ವಲ್ಲಿ… ಟೈಮು… ಬೇಕಾಯ್ತದೆ
ಗಂಡಸ್ರು ಪೇಷೆನ್ಸು… ಕಲೀ ಬೇಕಾಯ್ತದೆ

ತುಂಬಾ ಅರ್ಜೆಂಟು… ಆರೋಗ್ಯಕ್ಕೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

IPL ನಲ್ಲಿ ಸೋತು ಸುಣ್ಣವಾದ ಪುಣೆ ವಾರಿಯರ್ಸ್ ಪು(ಹಣೆ)ಬರಹ 🙂 ‘ಬಂಧನ’ ಚಿತ್ರದ ‘ಪ್ರೇಮದಾ ಕಾದಂಬರಿ’ ಧಾಟಿಯಲ್ಲಿ ‘ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ’ 🙂

ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ

ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ

ಮೊದಲ ಪ್ಲೇಸಿಗೂ… ಕೊನೆಯ ಪ್ಲೇಸಿಗೂ
ನಡುವೆ ಏಳೈತೆ ಅಂತರ
ಮೊದಲ ಪ್ಲೇಸಿಗೂ… ಕೊನೆಯ ಪ್ಲೇಸಿಗೂ
ನಡುವೆ ಏಳೈತೆ ಅಂತರ

ನೊಂದು ಹೋಗಿದೆ ಸೋತು ಸಾಲಲಿ
ನಮ್ಮ ತಂಡ ನಿರಂತರ

ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ

ನಮ್ಮ ಸೋಲಿಗೆ ಅಂತ್ಯ ದೊರೆತು
ಯುವಿಯು ಗೆಲ್ಲಿಸಲಿ ನಮ್ಮನು
ನಮ್ಮ ಸೋಲಿಗೆ ಅಂತ್ಯ ದೊರೆತು
ಯುವಿಯು ಗೆಲ್ಲಿಸಲಿ ನಮ್ಮನು

ಕೊನೆಯ ಮ್ಯಾಚುಗಳ… ಗೆಲ್ಲೋ ಆಸೆ
ದಿಂಡಾ ಗೆಲ್ಲಿಸಲಿ ನಮ್ಮನು 🙂

ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ
ವಿಜಯಸಿಗಲಿ ಹಂಬಲ
ವಿಜಯಸಿಗಲಿ ಉಹ್ಮ್… ಉಹ್ಮ್… ಹಂಬಲ

ಮೂಲ ಹಾಡು  ಬಂಧನ   ಚಿತ್ರದ ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ…

ಕೃಪೆ: kannadalyrics.com

ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ…ಮುಗಿಯದಿರಲೀ ಬಂಧನ

ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ… ಮುಗಿಯದಿರಲೀ ಬಂಧನ

ಮೊದಲ ಪುಟಕೂ… ಕೊನೆಯ ಪುಟಕೂ
ನಡುವೆ ಏನಿತು ಅಂತರ
ಮೊದಲ ಪುಟಕೂ… ಕೊನೆಯ ಪುಟಕೂ
ನಡುವೆ ಏನಿತು ಅಂತರ

ಬಂದು ಹೋಗುವ ಸ್ನೇಹ ಸಾವಿರ
ನಿಮ್ಮ ಬಂಧ ನಿರಂತರ

ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ… ಮುಗಿಯದಿರಲೀ ಬಂಧನ

ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು

ಕೊನೆಯ ಉಸಿರಲಿ… ಒಂದೇ ಆಸೆ
ದೈವ ಹರಸಲಿ ನಿಮ್ಮನು

ಪ್ರೇಮದಾ ಕಾದಂಬರಿ
ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ
ಮುಗಿಯದಿರಲೀ ಬಂಧನ

ಮುಗಿಯದಿರಲೀ ಉಹ್ಮ್… ಉಹ್ಮ್… ಬಂಧನ