ನೆನಪಿನಾಳದ
ಕಣಿವೆಯೊಳಗೆ
ಸುಪ್ತ ಝರಿಯ
ಜುಳುಜುಳು ನಿನಾದ
ಅಂತರಂಗದ
ಹೂಬನದೊಳಗೆ
ಅರಳಿ ನಗುವ
ಸ್ಮೃತಿ ಸಂವಾದ
ಆಪ್ತಸ್ವರಗಳ
ಆಲಾಪನೆಯೊಳಗೇ
ಲುಪ್ತವಾದ ನಿಷಾದ
ಸ್ವರದ ವಿಷಾದ !!
ನೆನಪಿನಾಳದ
ಕಣಿವೆಯೊಳಗೆ
ಸುಪ್ತ ಝರಿಯ
ಜುಳುಜುಳು ನಿನಾದ
ಅಂತರಂಗದ
ಹೂಬನದೊಳಗೆ
ಅರಳಿ ನಗುವ
ಸ್ಮೃತಿ ಸಂವಾದ
ಆಪ್ತಸ್ವರಗಳ
ಆಲಾಪನೆಯೊಳಗೇ
ಲುಪ್ತವಾದ ನಿಷಾದ
ಸ್ವರದ ವಿಷಾದ !!
ನನನ ನನ ನಾನಾ… ನನನಾನಾ ನನ ನಾನನ ನನ ನನನಾ… ನಕಾರದಲ್ಲಿ ನೆನಪನ್ನು ನೆನೆಯುತ್ತಾ 🙂
ನೆನಪು ನೋವೆಂಬರು
ನೋವು ನವಿರೆಂಬರು
ನವಿಲಗರಿಯೆಂಬರು ನೆಪಮಾತ್ರಕೆ
ನೆನಪಿನೋಣಿಯಲೊಮ್ಮೆ
ನಡೆದಾಡಿ ನೋಡಿದೆ
ನವಿರು-ನೋವು ನವಿಲಿಲ್ಲ… ನೀನಿಲ್ಲದೆ !!
ಮನಸಿನ ಭರಣಿಯೊಳಗೆ
ಕಣ್ಣೀರಿನಲಿ ಉಬ್ಬೆ ಹಾಕಿಟ್ಟ
ನೆನಪಿನ ಮಿಡಿ(ತ)ಗಳನೆಲ್ಲಾ
ಆಗೀಗ ಆರಿಸಿ ಕೊಯ್ದು ಬಡಿಸುತ್ತೇನೆ
ಜೊತೆಗಿಷ್ಟು ಖಾರ ಬೆರಸಿ !
ಚಪ್ಪೆಯಾದೆ ನಾ… ಅದ ಚಪ್ಪರಿಸಿ
ವಾಹ್ ಎನ್ನುವವರ ಲೊಟ್ಟೆ ಸದ್ದಿಗೆ
ಬೆಪ್ಪಾಗಿ ಮನಕೆ ಸಂದಿಗ್ಧವೀಗ…
ಬರಿದೇ ಬೆನ್ನು ತಟ್ಟಿ(ಸಿ)ಕೊಳ್ಳಬೇಕೋ
ಆರದ ಒದ್ದೆ ಕಣ್ಣು ಒರೆಸಿಕೊಳ್ಳಬೇಕೋ!!
ಅಂತರಂಗದ ಆಪ್ತಸ್ವರ ಮನಸಿನಲಿ ಮರ್ಮರಿಸಿದಾಗ
ನನ್ನ ಬ್ಲಾಗ್ ಮತ್ತು ಕವನ ಸಂಕಲನದ ನನ್ನಿಷ್ಟದ ಹನಿಗಳನ್ನು ಆರಿಸಿ ಈ ಕೆಳಗಿನ PDFನಲ್ಲಿ ಪೋಣಿಸಿದ್ದೇನೆ
ಕವನ ಸಂಕಲನ-‘ಅಂತರಂಗದ ಆಪ್ತಸ್ವರ’
ಬ್ಲಾಗ್ ‘ಮನಸಿನ ಮರ್ಮರ’ದ some-ಕವನಗಳು… ಸಂಚಲನಗಳು 😛
ಬೇಕೆನಿಸಿದಾಗ ಓದಲು PDF ಡೌನ್ಲೋಡ್ ಮಾಡಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ 🙂
ಕವಿತೆ ಕುಡಿಯೊಡಯಬೇಕು
ಕಾನನದಿ ಕವಿದ ಕತ್ತಲೆಯೊಳಗೆ
ಕಣ್ದೆರೆದು
ರಾತ್ರಿ ಮೊಗ್ಗಾಗಿದ್ದ ಮಲ್ಲಿಗೆ
ಮುಂಜಾವದ ಮಂಜಲಿ
ಮೆಲ್ಲನೆ ಮುಗುಳ್ನಕ್ಕಂತೆ…
ನಟ್ಟಿರುಳ ನಿದ್ದೆಯಲ್ಲಿಯೂ
ನೆಪವಿಲ್ಲದೆ ನಿನ್ನ
ನಗೆಯ ನೆನಪಾದಂತೆ…
ಬಲವಂತಕೆ ಬಸಿರ ಬಗೆದರೆ
ಬಿಡುಗಡೆಯಲ್ಲವದು…
ಭ್ರೂಣ ಹತ್ಯೆ
ವ್ಯತ್ಯಾಸ ಇಷ್ಟೇ…
ಒಲುಮೆಯ ತುದಿಬೆರಳ
ಸ್ಪರ್ಶದ ನವಿರು ಪುಳಕ
ತೆವಲು-ತೀಟೆಗೆ ತಡಕಾಡುವ
ಕರಗಳ ಚಳಕ