Posts Tagged ‘kannada remix’

IPL ನಲ್ಲಿ ಸೋತು ಸುಣ್ಣವಾದ ಪುಣೆ ವಾರಿಯರ್ಸ್ ಪು(ಹಣೆ)ಬರಹ 🙂 ‘ಬಂಧನ’ ಚಿತ್ರದ ‘ಪ್ರೇಮದಾ ಕಾದಂಬರಿ’ ಧಾಟಿಯಲ್ಲಿ ‘ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ’ 🙂

ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ

ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ

ಮೊದಲ ಪ್ಲೇಸಿಗೂ… ಕೊನೆಯ ಪ್ಲೇಸಿಗೂ
ನಡುವೆ ಏಳೈತೆ ಅಂತರ
ಮೊದಲ ಪ್ಲೇಸಿಗೂ… ಕೊನೆಯ ಪ್ಲೇಸಿಗೂ
ನಡುವೆ ಏಳೈತೆ ಅಂತರ

ನೊಂದು ಹೋಗಿದೆ ಸೋತು ಸಾಲಲಿ
ನಮ್ಮ ತಂಡ ನಿರಂತರ

ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ

ನಮ್ಮ ಸೋಲಿಗೆ ಅಂತ್ಯ ದೊರೆತು
ಯುವಿಯು ಗೆಲ್ಲಿಸಲಿ ನಮ್ಮನು
ನಮ್ಮ ಸೋಲಿಗೆ ಅಂತ್ಯ ದೊರೆತು
ಯುವಿಯು ಗೆಲ್ಲಿಸಲಿ ನಮ್ಮನು

ಕೊನೆಯ ಮ್ಯಾಚುಗಳ… ಗೆಲ್ಲೋ ಆಸೆ
ದಿಂಡಾ ಗೆಲ್ಲಿಸಲಿ ನಮ್ಮನು 🙂

ಪೂನಾದಾ contest-ರೀ… ಮುಗಿಯಿತು ಐಪಿಎಲ್ಲಲಿ
ಟೂರ್ನಿಯು ಕೊನೇಲಿ ಆದರೂ… ವಿಜಯಸಿಗಲಿ ಹಂಬಲ
ವಿಜಯಸಿಗಲಿ ಹಂಬಲ
ವಿಜಯಸಿಗಲಿ ಉಹ್ಮ್… ಉಹ್ಮ್… ಹಂಬಲ

ಮೂಲ ಹಾಡು  ಬಂಧನ   ಚಿತ್ರದ ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ…

ಕೃಪೆ: kannadalyrics.com

ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ…ಮುಗಿಯದಿರಲೀ ಬಂಧನ

ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ… ಮುಗಿಯದಿರಲೀ ಬಂಧನ

ಮೊದಲ ಪುಟಕೂ… ಕೊನೆಯ ಪುಟಕೂ
ನಡುವೆ ಏನಿತು ಅಂತರ
ಮೊದಲ ಪುಟಕೂ… ಕೊನೆಯ ಪುಟಕೂ
ನಡುವೆ ಏನಿತು ಅಂತರ

ಬಂದು ಹೋಗುವ ಸ್ನೇಹ ಸಾವಿರ
ನಿಮ್ಮ ಬಂಧ ನಿರಂತರ

ಪ್ರೇಮದಾ ಕಾದಂಬರಿ… ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ… ಮುಗಿಯದಿರಲೀ ಬಂಧನ

ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು

ಕೊನೆಯ ಉಸಿರಲಿ… ಒಂದೇ ಆಸೆ
ದೈವ ಹರಸಲಿ ನಿಮ್ಮನು

ಪ್ರೇಮದಾ ಕಾದಂಬರಿ
ಬರೆದನು ಕಣ್ಣೀರಲಿ
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ
ಮುಗಿಯದಿರಲೀ ಬಂಧನ

ಮುಗಿಯದಿರಲೀ ಉಹ್ಮ್… ಉಹ್ಮ್… ಬಂಧನ

‘ಬಚ್ಚನ್’ ಚಿತ್ರದ ‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’ ಹಾಡಿನ ಧಾಟಿಯಲ್ಲಿ ಅಣಕ… ಬೆಂಗಳೂರಿನ ಟ್ರಾಫಿಕ್ ಗೋಳಿನ ಕುಹಕ… ‘ಮೈಸೂರ್ ರೋಡಲ್ಲಿ… ಸಾಲಿಡ್ಡಾಗಿ… ಜಾಮ್ ಆಗಿದೆ’ 🙂

 

ಮೈಸೂರ್ ರೋಡಲ್ಲಿ… ಸಾಲಿಡ್ಡಾಗಿ… ಜಾಮ್ ಆಗಿದೆ
ಟುಂಗ್ ಟುಂಗ್ ಟುಂಗ್ ಟುಂಗ್
ಕೆಆರ್ ಮಾರ್ಕೆಟ್ಟು… ರೋಡು ಕೂಡಾ… ಬ್ಲಾಕ್ ಆಗಿದೆ
ಟುಂಗ್ ಟುಂಗ್ ಟುಂಗ್ ಟುಂಗ್

ಕೆಲವೊಮ್ಮೆ… ಶಾರ್ಟ್-ಕಟ್ಟು… ಹುಡ್ಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಸಮ್ಯಾನಾ… ತಳ್ಳ ಬೇಕಾಯ್ತದೆ

ಟ್ರಾಫಿಕ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ರೋಡಲ್ಲಿ… ಸಾಲಿಡ್ಡಾಗಿ… ಜಾಮ್ ಆಗಿದೆ
ಟುಂಗ್ ಟುಂಗ್ ಟುಂಗ್ ಟುಂಗ್

ಇಂಟರ್-ಸಿಟಿಲಿ… ಸಿಗ್ನಲ್ಲು ಲೈಟ್-ಜಂಪ್
ಮಾಡ್ಬಾರ್ದು ಹಿಂಗೆ… ಕೇಳಿ ಸ್ವಾಮೀ
ಇಂಥಾ ಟೈಮಲ್ಲೇ… ಸಿಗ್ನಲು ದಾಟಿದ
ಸತ್ತ್ ಹೋದಾ ನನ್ನ… ಗೆಳ್ಯಾ ಸ್ವಾಮೀ

ನ…ಮ್ಮಾ ಸಿಟಿ ರೂಟು… ಸ್ವ…ಲ್ಪಾ ಹಿಂಗೇನೇ
ಮಾ…ರ್ನಿಂಗೇ ಬೆಸ್ಟು… ಸಂ…ಜೇ… ಜಾಮೇನೆ

ಪೀಕು ಟೈಮಲ್ಲಿ… ರೋಡು ಜಾಮ್ ಆಯ್ತದೆ
ಆಟೋ ಟೂವಿಲರೂ… ಎಂಗೆಂಗೋ ನುಗ್ತವೇ

ಕಾಮನ್ ಸೆನ್ಸೇನೇ… ಇಲ್ದೆ ಹೋದ್ರೆ… ಹಿಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ರೋಡಲ್ಲಿ… ಸಾಲಿಡ್ಡಾಗಿ… ಜಾಮ್ ಆಗಿದೆ
ಟುಂಗ್ ಟುಂಗ್ ಟುಂಗ್ ಟುಂಗ್

ವಿಂಡೋ ಕಾರಲ್ಲಿ… ತೆಗೆದರೆ ಸಾಕು
ಧೂಳ್-ಕೆಟ್ಟ ಹೊಗೆ ನಮ್ಮ… ಸುತ್ತುತಾವೆ
ಹಾಲಿಡೇ ರಜೆಯ… ದಿನಗಳು ಮಾತ್ರ
ನಮ್ಗೆ ಫ್ರೆಶ್ ಆಗಿ air-ಉ… ಸಿಗುತಾದೆ

ಮೂ…ರೂ ಘಂಟೆಯಲ್ಲಿ… ಕ್ಲೀ…ಯರ್ ಆದರೇ
ಆ…ರೂ ಘಂಟೆಗೆಲ್ಲಾ… ಜಾ…ಮು ಆಯ್ತದೆ

ಆಫಿಸ್ಗೆ ಟೈಮಲ್ಲಿ… ಎಲ್ಲಿ… ಹೋಗೋಕಾಯ್ತದೆ
ಸಿಗ್ನಲ್ಲು ನ್ಯೂಸೆನ್ಸು… ಕಾಯ ಬೇಕಾಯ್ತದೆ

ತುಂಬಾ ಬಿಸ್ಲುಂಟು… ಟ್ರಾಫಿಕ್ಕಲ್ಲಿ… ಸುಸ್ತ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ರೋಡಲ್ಲಿ… ಸಾಲಿಡ್ಡಾಗಿ… ಜಾಮ್ ಆಗಿದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೂಲ ಹಾಡು: ‘ಬಚ್ಚನ್’ ಚಿತ್ರದ ‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’
ಮೂಲ ಸಾಹಿತ್ಯ : ಯೋಗರಾಜ್ ಭಟ್
ಕೃಪೆ: ಇಂಟರ್ನೆಟ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು… ಚೂಡಿದಾರೂ… ರೇಟ್ ಏನಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಕೆಲವೊಮ್ಮೆ… ಕೆಲವೊಂದು… ತಿಳಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಮರ್ಯಾದೆ… ಕಳ್ಕೋ ಬೇಕಾಯ್ತದೆ

ಜನರಲ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಇಂಟರ್-ನೆಟ್ಟಲ್ಲಿ… ಇಡ್ಲಿ ನಾ ಡವ್ನ್-ಲೋಡ್
ಮಾಡೋದು ಹೆಂಗೇ… ಹೇಳಿ ಸ್ವಾಮೀ
ಇಂಥಾ ಪ್ರಶ್ನೇಗೆ… ಉತ್ತರ ಸಿಗದೇ
ಸತ್ತ್ ಹೋದಾ ನನ್ನಾ… ಹಳೇ ಪ್ರೇಮೀ

ನ…ನ್ನಾ ಪ್ರೀತಿ ಪಾಠಾ… ಸ್ವ…ಲ್ಪಾ ಹಿಂಗೇನೇ
ಸ್ಕೂ…ಲಿನಲ್ಲೀ ಲಾಸ್ಟು… ಬೆಂ…ಚು… ನಿಮ್ದೇನೇ

ಸಂಜೇ ಟೈಮಲ್ಲಿ… ಕ್ಲಾಸು ಸ್ಟಾರ್ಟ್ ಆಯ್ತದೆ
ಬರೀ ಹುಡುಗರಿಗೆ… ಪ್ರವೆಸಾ ಇರ್ತದೆ

ಎಜುಕೇಸನ್ನೇ… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ವಿಂಡೋ ಕರ್ಟನ್ನು… ತೆಗೆದರೆ ಸಾಕು
ಕೈ ಕೊಟ್ಟ ಹುಡುಗರೇ… ಕಾಣುತಾರೇ
ಕಾಫಿಡೇ ಕೊಡೆಯಾ… ಕೆಳಗಡೆ ಸುಮ್ನೆ
ನಮ್ಗೆ ಫ್ರೆಶ್ ಆಗಿ ಯಾರೋ… ಸಿಗುತಾರೆ

ಮೂ…ರೂ ಘಂಟೆಯಲ್ಲಿ… ಪ್ಯಾ…ರೂ ಆದರೇ
ಆ…ರೂ ಘಂಟೆಗೆಲ್ಲಾ… ಬೋ…ರೂ ಆಯ್ತದೆ

ಲೇಡೀಸ್ಗೆ ಲವ್ವಲ್ಲಿ… ಟೈಮು… ಬೇಕಾಯ್ತದೆ
ಗಂಡಸ್ರು ಪೇಷೆನ್ಸು… ಕಲೀ ಬೇಕಾಯ್ತದೆ

ತುಂಬಾ ಅರ್ಜೆಂಟು… ಆರೋಗ್ಯಕ್ಕೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಎಸ್ಸೆಸ್ಸೆಲ್ಸಿ ಎಕ್ಸಾಮಲ್ಲಿ ಪವಾಡಸದೃಶವಾಗಿ ಪಾಸಾದ ಪಪ್ಪು… ಪರಮಾತ್ಮ ಚಿತ್ರಕ್ಕೆ ಭಟ್ಟರು ಬರೆದ ಯಾವನಿಗೊತ್ತು ಹಾಡನ್ನು ಹಿಂಗೆ ಹಾಡ್ತಾ ಇದ್ದಾನೆ ನೋಡಿ…… 🙂 🙂

ನಾನೆ ಜೀನಿಯಸ್ಸಾ….. ಎದೆಸೀಳಿದ್ರೆರ್ಡ್ಅಕ್ಷರವಿಲ್ವೋ
ಎಬಿಸಿಡಿ ನು…. ನಂಗೆ ಗೊತ್ತಿಲ್ಲ
ಹೆಂಗೆ ಪಾಸಾದೆ….. ಯಾವಾನಿಗ್ ಗೊತ್ತು

ಏನು ಮಾಡೊದು…. ಇನ್ನೂರ್ ನಲವತ್ತ್ತೊಂದ್
ಎಕ್ಸಾಮಲ್ ಸಿಕ್ತು…. ಎಕ್ಸಾಮಲ್ ಸಿಕ್ತು

ಏನು ಹೇಳೊದು… ಇಂತ ಪವಾಡ
ಯಾವನಿಗ್ ಗೊತ್ತು…. ಯಾವನಿಗ್ ಗೊತ್ತು

ಎಕ್ಸಾಮಲ್ ಖಾಲಿ…. ಕೂತೆದ್ದು ಬಂದೆ
ಎಲ್ಲೋ ಏನೋ…. ಎಡವಟ್ಟಾಯ್ತು

ನನ್ನ ಯಾತಕ್ಕೆ…. ಪಾಸು ಮಾಡಿದ್ರೋ
ಯಾವನಿಗ್ ಗೊತ್ತು…. ಯಾವನಿಗ್ ಗೊತ್ತು

ಪೇಪರ್ ತಿದ್ದತಾರ… ಹಂಗೆ ಕೊಡ್ತಾರ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಅದು ಯಾವ್ದೊ ನೈಂಟಿ ಎಯ್ಟ್….ಎಫ್ಫೆಮ್ನ
ಕೇಳುತ್ತ ಬರೆಯುತ್ತಿದ್ದೆ…. ಎಕ್ಸಾಮ್ನ
ಕಾಪಿ ಚೀಟಿಗ್ ಹುಡ್ಕುತ್ತಿದ್ದೆ ….ಜೇಬನ್ನು
ಬರೆದಿಟ್ಟಿದ್ ಕಳೆದುಕೊಂಡೆ… ಸಧ್ಯ ನಾ

ಕಾಲೇಜಿನ ಸ್ಕ್ವಾಡು…. ನನ್ನತ್ರಾನೇ ಬಂದ್ರೆ
ಖಾಲಿ ಹಾಳೆ ಬಿಟ್ರೆ… ಬೇರೆ ಏನೂ ಇಲ್ರಿ

ಖಾಲಿಹಾಳೇ ಮೇಲೆ…. ರೋಲ್ ನಂಬ್ರ ಹಾಕಿ
ಪೇಪರು ಕೊಟ್ಟು….. ಬಂದಿದ್ದಾಯ್ತು

ಎಂಥ ಟೈಪಲ್ಲಿ……ನಾನು ಪಾಸಾದ್ನೋ
ಯಾವನಿಗ್ ಗೊತ್ತು…. ಯಾವನಿಗ್ ಗೊತ್ತು

ಪೇಪರ್ ತಿದ್ದೋರು…. ಕಣ್ಣು ಮುಚ್ಚಿದ್ರಾ
ಯಾವನಿಗ್ ಗೊತ್ತು…. ಯಾವನಿಗ್ ಗೊತ್ತು

ಎಕ್ಸಾಮಲ್ಲಿ ನಂಗೆ ಟೈಮು….ಹೋಗೊಲ್ಲ
ಹಾಲಲ್ಲಿ ನಿದ್ದೆ ಮಾಡೋಕ್…..ಆಗೊಲ್ಲ
ಕಾಪಿ ಚೀಟಿ ತಕ್ಕೊಂಡೋಗೋಕ್…ಧಮ್ಮಿಲ್ಲ
ಮನೆಯವರ್ಗೆ ಗೊತ್ತು…. ನಾನು ಮುಟ್ಟಾಳ

ಮತ್ತೆ ಮತ್ತೆ ಬರ್ದೆ… ವರ್ಷಕ್ಕೆರಡು ಬಾರಿ
ತುಂಬಾ ರಗಳೆ ಆಯ್ತು… ಪಾಸಾಗ್ ಬಿಟ್ಟೆ ಕಣ್ರಿ

ಮತ್ತೆ ಫೇಲಾಗಿ…. ಬಿಟ್ಟಿದ್ರೆ ನಾನು
ಸುಮ್ನೆ ಮನೇಲೆ…. ಇರಬೌದಿತ್ತು

ಮುಂದೆ ಕಾಲೇಜ್ಗೆ… ನನ್ನ ಸೇರ್ಸಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಕಾಲೇಜ್ ಎಕ್ಸಾಮು… ಹಿಂಗೆ ಇರಬೌದಾ
ಯಾವನಿಗ್ ಗೊತ್ತು…. ಯಾವನಿಗ್ ಗೊತ್ತು

ಮೂಲ ಸಾಹಿತ್ಯ : ಪರಮಾತ್ಮ ಚಿತ್ರದ ‘ಯಾವನಿಗ್ ಗೊತ್ತು… ಯಾವನಿಗ್ ಗೊತ್ತು’
ಕೃಪೆ: kannadalyrics.com

ನಾನೇ ಜೀನಿಯಸ್ಸಾ… ಹ್ರುದೆಸೀರಿಸೇಲಾತಿ… ಲಬಬಾವೂ
ಎಬಿಸೀಡಿನಾ… ಆಲೂಗಡ್ದೆನಾ
ಗೋಡೆ ಹಲ್ಲೀನಾ… ಯಾವಾನಿಗ್ ಗೊತ್ತು

ಏನು ಮಾಡೋದು… ಒಂಟಿ ಹೂವೊಂದು
ರೋಡಲ್ಲಿ ಸಿಕ್ತು… ರೋಡಲ್ಲಿ ಸಿಕ್ತು
ಏನು ಹೇಳೋದು… ಇಂಥಾ ಟೈಮಲ್ಲಿ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಎದೆಯಂಬ ಖಾಲಿ… ಡಬಕ್ಕೆ ಒಂದು
ಸಣ್ಣ ಕಲ್ಲು… ಬಿದ್ದಂಗಾಯ್ತು

ಡಬ್ಬ ಯಾತಕ್ಕೆ… ಸೌಂಡು ಮಾಡುತ್ತೊ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಇವ್ಳು ಸಿಕ್ತಾಳ… ಕೈ ಕೊಡ್ತಾಳ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಅದು ಯಾವ್ದೋ ಒಂಟಿ ಹಕ್ಕಿ… ಸದ್ದನ್ನಾ
ಕೇಳುತ್ತಾ ಮಲ್ಕೊಂಡಿದ್ದೆ… ಮಧ್ಯಾಹ್ನ
ಕಾಲ್ ಕೇಜಿ ಪ್ರೀತಿಗೊಂದು… ಪದ್ಯಾನಾ
ಬರೆದಿಟ್ಟು ಕೆರೆದುಕೊಂಡೆ… ಗಡ್ಡಾನಾ

ಕಾಳಿದಾಸ ಕಾವ್ಯ… ನಮಪ್ಪನ್ನ ಕೇಳ್ರಿ
ಕಾಲಿ ಹಾಳೆಗಿಂತ… ಒಳ್ಳೆ ಕಾವ್ಯ ಇಲ್ರಿ
ಹೃದಯದ ಮೇಲೆ… ಹೈ-ಹೀಲ್ಡು ಹಾಕಿ
ರಾಜಕುಮಾರಿ… ನಿಂತಂಗಾಯ್ತು

ಇಂಥಾ ಟೈಮಲ್ಲಿ… ಹಾಡು ಬೇಕಿತ್ತಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ದೇವ ದಾಸಾನೂ… ಎಣ್ಣೆ ಬಿಟ್ಟಿದ್ನಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು

ಕನಸಲ್ಲಿ ಯಾಕೊ ಯಾವ್ದೂ… ಸಾಲಲ್ಲ
ಮೋಡಾನ ಮುದ್ದು ಮಾಡೋ… ಕಾಗಲ್ಲಾ
ಚಿಟ್ಟೆಗೆ ಚಡ್ಡಿ ಹಾಕೋ… ಕಾಗ್ಲಿಲ್ಲ
ನಿಮ್ಗೆ ಗೊತ್ತಲ್ವಾ ನಾನು… ಮುಟ್ಟಾಳ

ಮತ್ತೆ ಮತ್ತೆ ಬಂತು… ಎದೆಯಲ್ಲೊಂದು ಲಹರಿ
ತುಂಬಾ ಒಳ್ಳೆ ಕನ್ನಡ… ಮಾತಾಡ್ಬಿಟ್ಟೆ ಕಣ್ರಿ
ಮೂಗು ಬೊಟ್ಟಾಗಿ… ಹುಟ್ಟಿದ್ರೆ ನಾನು
ಇವಳ ಮೂತೀಲೆ… ಇರಬೌದಿತ್ತು

ನನ್ನ ಆಸೆಗೂ… ಮೀನಿಂಗ್ ಇರಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರು… ತಿಂಡಿ ಸಿಗಬೌದಾ
ಯಾವನಿಗ್ ಗೊತ್ತು… ಯಾವನಿಗ್ ಗೊತ್ತು