Posts Tagged ‘shivaraj kumar’

‘ಕಡ್ಡಿಪುಡಿ’ ಚಿತ್ರದ ‘ಬೇರೇ… ಯಾರೋ… ಬರೆದಂತಿದೆ… ಸಾಲನೂ’ ಧಾಟಿಯಲಿ ನನ್ನ ಸ್ಮೃತಿ ಸಾಲುಗಳು


 
ಏಕೋ… ಏನೋ…
ಸ್ಮರಿಸುತ್ತಿಹೆ …
ನಿನ್ನನು

ವರ್ಷ… ಸ್ಪರ್ಷ…
ಹನಿಸುತ್ತಿದೆ…
ಕಣ್ಣನು

ಮೊಲ್ಲೆಯ ಹೂವೊಂದು…
ಮೆಲ್ಲನೆ ಅರಳುತಾ…
ನರುಗಂಪು…
ಬೀರೋ.. ತರಾ

ಆವರಿಸುತಿಹೆ…
ನನ್ನನು
ನಾ ಮರೆತಿಹೆ …
ನನ್ನನೇ

ಏಕೋ… ಏನೋ…

ಯಾವುದೋ…
ಹಾಡಲೀ…
ಲೀನ ಆಗುವಂತೆ…

ಸೇರಿದೇ …
ನನ್ನೆದೇ…
ಗೊತ್ತೇ ಆಗದಂತೇ…

ನಿನೊಂತರಾ…
ಸೋನೆ ತರಾ…
ಬಂದ್ಹೋಗು ಇಲ್ಲಾ…
ಅಭ್ಯಂತರ…

ಪದಗಳಲ್ಲಿಯೂ…
ಬಂಧಿಸಲಾಗದ…
ಕನ್ನಿಕೆಯೇ…
ಇಗೋ..ತಗೋ….

ಸೆರೆಯಾಗುವೆ …
ನಿಂಗೇ ನಾ
ಮರೆಯಾಗುವೆ …
ಹಿಂಗೇ ನಾ

ಏಕೋ… ಏನೋ…
ಸ್ಮರಿಸುತ್ತಿಹೆ …
ನಿನ್ನನು
ಹನಿಸುತ್ತಿದೆ…
ಕಣ್ಣನು

——————————————————————————–
ಮೂಲ ಹಾಡು: ‘ಕಡ್ಡಿಪುಡಿ’ ಚಿತ್ರದ ‘ಬೇರೇ… ಯಾರೋ… ಬರೆದಂತಿದೆ… ಸಾಲನೂ’
ಕೃಪೆ: kannadalyrics.com
——————————————————————————–
ಬೇರೇ… ಯಾರೋ…
ಬರೆದಂತಿದೆ…
ಸಾಲನು

ಬೀಸೋ… ಗಾಳಿ…
ಮರೆತಂತಿದೆ…
ಮಾತನು

ಬೆಲ್ಲದ ಹಾಗೆಯೂ…
ಕಲ್ಲೆದೆ ಕರಗುವಾ…
ಬೇಗುದಿಯೂ…
ಇದೇ..ತಕೋ

ತಡೆದಂತಿದೆ…
ನಿನ್ನನು
ತಡೆದಂತಿದೆ…
ನಿನ್ನನು

ಬೇರೇ… ಯಾರೋ…

ಜೀವವೇ…
ಪ್ರೀತಿಸು…
ಜೀವ ಹೋಗುವಂತೇ…

ಸಂತೆಯಾ…
ಮಧ್ಯವೇ…
ಸ್ವಪ್ನ ತಾಗುವಂತೆ…

ನಮ್ಮಿಬ್ಬರಾ…
ರೂಪಾಂತರ…
ಆಗಾಗ ಸ…ಣ್ಣಾ…
ಮಧ್ಯಂತರ…

ಕನ್ನಡಿಯಲ್ಲಿಯೂ…
ಕಣ್ಣಿಗೆ ಬೀಳದ…
ಭೂಮಿಕೆಯೂ…
ಇದೇ..ತಕೋ….

ಸೆಳೆದಂತಿದೆ…
ನಿನ್ನನು
ಸೆಳೆದಂತಿದೆ…
ನಿನ್ನನು

ಬೇರೇ… ಯಾರೋ…
ಬರೆದಂತಿದೆ…
ಸಾಲನು
ಮರೆತಂತಿದೆ…
ಮಾತನು

‘ಸತ್ಯ ಈಸ್ ಇನ್ ಲವ್’ ಚಿತ್ರದ ‘ಟೈಟಲ್ ಸಾಂಗ್’ ಹಾಡ್ತಾ ಇರೋದು ಸ್ಕ್ಯಾಮ್ ಗುರು ಸಾಕ್ಷಾತ್ ಮಾಜಿ ಸಿ.ಎಮ್ ಯಡಿಯೂರಪ್ಪ 🙂

ವೀಡಿಯೋ ಜೊತೆಗೆ ಓದಿ ನೋಡಿ… ಇನ್ನೂ ಮಜಾ ಇರುತ್ತೆ 🙂

ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಹೊರ ಹೋದೆನು… ಹೊರ ಹೋದೆನು… ಮೊನ್ನೆ ತಾನೇ
ನನ್ನ ಡೀಲಿಗೆ… ನನ್ನ ಗಾದಿಗೆ… ಮುಳ್ಳಾದ್ರು ಹೆಗ್ಡೆ

ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್
ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್

ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಹೊರ ಹೋದೆನು… ಹೊರ ಹೋದೆನು… ಮೊನ್ನೆ ತಾನೇ

ದೋಚಿದೆ ಬಾಚಿದೆ… ನಾ ಲೂಟಿಯ ಮಾಡಿದೆ
ಡೆಲ್ಲಿಗೂ ಹೋಗಿದೆ… ಎಮ್ಮೆಲ್ಲೆ ಪಾಲೂ ಇದೆ
ಲ್ಯಾಂಡಲೂ ಮೈನ್ಸಲೂ… ಗುಟ್ಟಾಗಿ ಗಂಟ್‌ಮಾಡಿದೆ
ಆಯಿತು ಮುಗೀತು… ಈ ಸುದ್ದಿ ಲೀಕಾಗಿದೆ

ಯಾವ್ದ್ಯಾವ್ದೋ ದಂಧೆ… ಎಷ್ಟೆಷ್ಟೋ ತಿಂದೆ
ನನಗೀಗ… ಜೈಲಿಗೋಗೋ… ಕಾಲ ಬಂದಿತಾ?

ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಹೊರ ಹೋದೆನು… ಹೊರ ಹೋದೆನು…. ಮೊನ್ನೆ ತಾನೇ
ಹೊರ ಹೋದೆನು… ಹೊರ ಹೋದೆನು…. ಮೊನ್ನೆ ತಾನೇ
ನನ್ನ ಡೀಲಿಗೆ… ನನ್ನ ಗಾದಿಗೆ… ಮುಳ್ಳಾದ್ರು ಹೆಗ್ಡೆ

ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್
ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್

ಸುಮ್ಮನೇ ಸುಮ್ಮನೇ… ನನ್ನೇತಕೆ ದೂರುವೆ
ಕೇಂದ್ರ ಸರ್ಕಾರವೇ… ಹಗರಣದ ತೌರ್-ಮನೆ
ಸ್ವಲ್ಪವೇ… ಸ್ವಲ್ಪವೇ… ಈ ರಾಜ್ಯವ ದೋಚಿದೆ
ಅದಕೆ… ಮೊನ್ನೆನೆ… ನಾ ಕುರ್ಚಿ ಬಿಟ್ಟಾಗಿದೆ

ಆ ದೇವರಾಣೇ… ಸೀಯೆಮ್ಮು ನಾನೇ
ಸದಾನಂದ… ನೆಪ ಮಾತ್ರ… ನನ್ನ ಚೋರಿಯೇ

ಮುಳುಗೋದೆನು… ಮುಳುಗೋದೆನು… ಸ್ಕ್ಯಾಮ್ಮಲ್ಲೆನೇ
ಹೊರ ಹೋದೆನು… ಹೊರ ಹೋದೆನು… ಮೊನ್ನೆ ತಾನೇ

ನನ್ನ ಡೀಲಿಗೆ… ನನ್ನ ಗಾದಿಗೆ… ಮುಳ್ಳಾದ್ರು ಹೆಗ್ಡೆ

ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್
ಯಡ್ಡಿ ಈಸ್ ಇನ್ ಸ್ಕ್ಯಾಮ್… ಯಡ್ಡಿ ಈಸ್ ಇನ್ ಸ್ಕ್ಯಾಮ್