Posts Tagged ‘Yadyoorappa’

‘ಡ್ರಾಮಾ’ ಚಿತ್ರದ ‘ತುಂಡ್ ಹೈಕ್ಳ ಸಾವಾಸ… ಮೂರ್ ಹೊತ್ತೂ ಉಪ್ವಾಸಾ’ ಅನ್ನುವ ಹಾಡು ಅಣಕವಾಗಿ ‘ತುಂಡ್ ಆಯ್ತ್ಲಾ… ಭಾಜಪಾ… ಮೂರ್ ಆಯ್ತು… ಈ ದಪಾ ’ ಆಗಿದೆ 🙂

 

ತುಂಡ್ ಆಯ್ತ್ಲಾ… ಭಾಜಪಾ… ಮೂರ್ ಆಯ್ತು… ಈ ದಪಾ
ಕೋಕೋ ನಟ್ಟು ಯಡ್ಡೀಸಾ… ಫ್ಯಾನು ರಾಮ್ಲು ಆವೇಸಾ

ನುಂಗೋ ಸ್ಕ್ಯಾಮು ಮಾಡಿ… ಬೀಜೇ…ಪಿ ಬಿಟ್ಟವ್ರೆ
ನಮ್ ಸೋಲು ಮುಹೂರ್ತಕ್ಕೆ… ಬ್ಲೂ…ಸ್ಕೆಚ್ಚು ಹಾಕವ್ರೆ

ದುಡ್ಡು ಮಾಡಿಕೊಂಡು… ಕೈ ಎತ್ತವ್ರೆ
ಪಾರ್ಟಿ ಗೆಲ್ಲದಿದ್ರೆ… ಮಾನ ಹೋಯ್ತದೇ
ದುಡ್ಡು ಮಾಡಿಕೊಂಡು… ಕೈ ಎತ್ತವ್ರೆ
ಪಾರ್ಟಿ ಗೆಲ್ಲದಿದ್ರೆ… ಮಾನ ಹೋಯ್ತದೇ

ತುಂಡ್ ಆಯ್ತ್ಲಾ… ಭಾಜಪಾ… ಮೂರ್ ಆಯ್ತು… ಈ ದಪಾ
ಕೋಕೋ ನಟ್ಟು ಯಡ್ಡೀಸಾ… ಫ್ಯಾನು ರಾಮ್ಲು ಆವೇಸಾ

ಇವ್ರು ಪಾರ್ಟಿ ಮಾಡಿಬಿಟ್ರು… ಬುಡಮೇಲು
ಈಗ್ ಇನ್ ವೋಟಲ್ಲಿ… ಯಾವ-ಪಕ್ಷ ಗೆಲ್ಲುತ್-ಹೇಳು
ಹೇ…ಳು…

ಒಂದು ವಾರ ಕಳೆದರೆ… ಬಂತು ವೋಟು
ವ…ಟ್ನಲ್ಲಿ ನೂರದ್ಮೂರು… ಸೀಟು ಬೇಕು

ಹೊರಗೋಗ್ ಬಿಟ್ಟು ಮಧ್ಯಕ್ಕೆ… ಹೊಸ ಪಕ್ಷ ಕಟ್ಟಿ ಬಿಟ್ಟವ್ರೆ
ಸೋಲುತ್ತಿರ್ವ ಕಮ್ಲಕ್ಕೆ… ಬತ್ತಿ ಇಟ್ಟು ಬಿಟ್ಟವ್ರೇ

ಹಣತಿಂದು ಬಿಟ್ರು… ಜೈಲಿಗ್ ಹೋಗವ್ರೆ
ಮುಂದೇನು ಗತಿ ಅಂತ,,, ಕಯ್ಯಿ ಎತ್ತವ್ರೆ
ಹಣತಿಂದು ಬಿಟ್ರು… ಜೈಲಿಗ್ ಹೋಗವ್ರೆ
ಮುಂದೇನು ಗತಿ ಅಂತ,,, ಕಯ್ಯಿ ಎತ್ತವ್ರೆ

ತುಂಡ್ ಆಯ್ತ್ಲಾ… ಭಾಜಪಾ… ಮೂರ್ ಆಯ್ತು… ಈ ದಪಾ
ಕೋಕೋ ನಟ್ಟು ಯಡ್ಡೀಸಾ… ಫ್ಯಾನು ರುಞ್ ಆವೇಸಾ

ಯಡ್ಡೀ……ಸಾಆಆಅ…… ಆವೇಸಾ ಆಅಆ
ಯಡ್ಡೀಸ… ಆವೇಸಾ…ಆಅಆ
ಯಡ್ಡೀ……ಸಾಆಆಅ… ಆವೇಸಾ

ದುಡ್ಡನ್ನು ಚೆಲ್ಲೋದಕ್ಕೆ… ಎಲೆಕ್ಸನ್ನು
ಎಚ್ಚೆತ್ತು ಕೊಳ್ಳದಿರೆ… ಜನರಿನ್ನು
ಜನರೂ… ಇನ್ನೂ… ಉಉಉ

ಬೇಕಿಲ್ಲಾ… ಪ್ರಣಾಳಿಕೆ ಎಲ್ಲಾ ಮಣ್ಣು
ತುಂಡ್ ಮಾಡಿ… ಜಾತಿಗಳಾಗ್ ಜನ್ರನ್ನು

ಭೂಮಿ-ಗೀಮಿ ನುಂಗ್ದಾಗ… ನೋಟಿ-ಫೈ ರಾದ್ಧಾಂತ
ಗಣಿ ಖೆಡ್ಡಾ ಆದಾಗ… ಬಯಲಾಯ್ತಲ್ಲ ವೃತ್ತಾಂತ

ಪ್ರತೀ ಪಾರ್ಟಿಯಲ್ಲೂ… ಸ್ಕ್ಯಾಮು ಇರ್ತಾವೆ
ಪವರಲ್ಲಿ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ
ಪ್ರತೀ ಪಾರ್ಟಿಯಲ್ಲೂ… ಸ್ಕ್ಯಾಮು ಇರ್ತಾವೆ
ಪವರಲ್ಲಿ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ

ತುಂಡ್ ಆಯ್ತ್ಲಾ… ಭಾಜಪಾ… ಮೂರ್ ಆಯ್ತು… ಈ ದಪಾ ಪಾ… ಪಾ… ಪಾ…
ಕೋಕೋ ನಟ್ಟು ಯಡ್ಡೀಸಾ… ಫ್ಯಾನು ರಾಮ್ಲು ಆವೇಸಾ ಸಾ… ಸಾ… ಸಾ…
ಕುಂಞ್…

ಮೂಲ ಹಾಡು: ‘ಡ್ರಾಮಾ’ ಚಿತ್ರದ ‘ತುಂಡ್ ಹೈಕ್ಳ ಸಾವಾಸ…ಮೂರ್ ಹೊತ್ತೂ ಉಪ್ವಾಸಾ’

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ಎಂಗೋ… ಮೊನ್ನೆ ತಾನೇ… ಪೀಯೂ…ಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ… ರೀ…ಸರ್ಚು ನಡ್ಸವ್ರೆ

ಹೆಂಗೇ ಹಾಡಿದರೂ… ಬಾಯ್ ನೋಯ್ತವೆ
ಇನ್ನೂ ಕೇಳಿದರೆ… ಕಿವಿ ಹೋಯ್ತವೆ
ಹೆಂಗೇ ಹಾಡಿದರೂ… ಬಾಯ್ ನೋಯ್ತವೆ
ಇನ್ನೂ ಕೇಳಿದರೆ… ಕಿವಿ ಹೋಯ್ತವೆ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ಇವ್ರು ಕಾಲು ಇಟ್ರು ಅಂದ್ರೆ… ಅದೇ ರೋಡು
ಈ ನನ್ ಮಕ್ಳಿಗೆ… ಬಯೋಡಾಟಾ ಬ್ಯಾರೆ ಕೇಡು
ಕೇ…ಡು…

ಯವ್ವನದ ಹೊಳೆಯಲ್ಲಿ… ಹಳೇ ಬೋಟು
ಬೋಟ…ಲ್ಲಿ ನೂರಾ ಎಂಟು… ಹಳೇ ತೂತು

ಬೆಳಗಾಗ್ ಎದ್ದು ಬೆಟ್ಟಕ್ಕೇ… ಅರೆ ದಾರಾ ಕಟ್ಟಿ ಎಳ್ದವ್ರೇ
ಓಡುತ್ತಿದ್ದ ಕಾಲಕ್ಕೆ… ಕಾಲು ಅಡ್ಡ ಇಟ್ಟವ್ರೇ

ಅನಾಸಿನ್ನು ತಿಂದ್ರೂ… ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ… ಗ್ಯಾಸು ಆಯ್ತದೆ
ಅನಾಸಿನ್ನು ತಿಂದ್ರೂ… ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ… ಗ್ಯಾಸು ಆಯ್ತದೆ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ವೆಂಕ್ಟೇ……ಸಾಆಆಅ…… ಸತೀಸಾಆಅಆ
ವೆಂಕ್ಟೇಆಆಅ… ಸತೀಸಾಆಅಆ
ವೆಂಕ್ಟೇ……ಸಾಆಆಅ… ಸತೀಸಾ

ದೊಡ್ಡೋರು ಕೊಡೋದಿಲ್ಲಾ… ಪರ್ಮಿಸನ್ನು
ಕಾಂಪೌಂಡು ಹಾರುತಿದೆ… ಜನ್ರೇಸನ್ನು
ಜನರೇ…ಶನ್ನು…ಉಉಉ…

ಬೇಕಿಲ್ಲಾ… ಪ್ರಳಯಕೆ ಕಾಯೋದಿನ್ನು
ತುಂಡ್ ಹೈಕ್ಳು… ಮುಳುಗಿಸ್ತಾರೆ ಊರನ್ನು

ಮೀಸೆ-ಗೀಸೆ ಬಂದಾಗ… ಹಗಲು-ರಾತ್ರಿ ರಾದ್ಧಾಂತ
ಬಿಳೀ ಗಡ್ದ ಬಂದಾಗ… ಹೇಳಿದ್ದೆಲ್ಲಾ ವೇದಾಂತ

ಪ್ರತೀ ಎಂಡಿನಲ್ಲೂ… ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ
ಪ್ರತೀ ಎಂಡಿನಲ್ಲೂ… ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ ಸಾ… ಸಾ… ಸಾ…
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ ಸಾ… ಸಾ… ಸಾ…
ಆಞ್…

(ಸಂಜು ಮತ್ತು ಗೀತಾ….ಸೇರಬೇಕು ಅಂತ… ಹಾಡಿನ ಧಾಟಿಯಲ್ಲಿ , ಯಡ್ಯೂರಪ್ಪ ತಮ್ಮ ಗೋಳು ತೋಡಿಕೊಳ್ಳುವ ರೀತಿಯ ಒಂದು ಅಣಕ)

ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು
ರೆಡ್ಡಿ ಬ್ರದರ್ಸಗಿಂತ…ಇವ್ರೆ ದೊಡ್ಡ ಕಂಟಕ…ಉರುಳೋದ್ರೆ ಖುರ್ಚಿ.. ಮುಂದೆ ಏನು?
ಮೊನ್ನೆ ಎಲ್ಲಾ ಸೀಟನ್ನು… ಗೆದ್ವಿ ಆದ್ರೂ ನಿಮ್ದೇನು
ಎಲ್ಲಾ ಶಾಸಕರ ಪತ್ರ..ನೀಡುವೆ ನಿಮ್ಮ ವಶಕಿನ್ನು
ನಾಳೆಯಾಗಲಿ ನಾಡಿದ್-ನಾ ದಿಲ್ಲಿ,, ಸೇರುವೆ
ನೋಡಬಾರದೆ ನೋಡಬಾರದೆ ನಮ್ ಬಲವ?

ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು ||

ಬೀಜೇಪಿಗೊಂದು… ಕಾಂಗ್ರೇಸ್ಸಿಗೊಂದು
ರೂಲ್ಸಂತೆ ಇಂದು..ಸರಿಯೇನು ನಿಮ್ದು
ಏನಾಗಲಿ..ನಮ್ಮ ಗವರ್ನರು ನೀವ್
ನಿಮ್ಮ ದಿಲ್ಲಿ ದರ್ಬಾರು… ಬೇಗ ಕೊನೆಯಾಗಲಿ

ಇಡಿಯ ದೇಶದಲ್ಲಿ…ದೊಡ್ಡ ಸುದ್ದಿಯಾದ್ರಿ ನಿನ್ನೆ
ವಿರೋಧಪಕ್ಷದ ರೀತಿ…. ನೀವು ನಮ್ಗೆ ಕೊಟ್ರಿ ಕೈನಾ
ಇತಿಹಾಸದ… ಪುಟಕಾಣದ… ನಿಲುವೇ. ನಿಮ್ಮದೇ..?
ನಾಳೆಯಾಗಲಿ… ನಾಡಿದ್-ನಾ ದಿಲ್ಲಿ,, ಸೇರುವೆ
ನೋಡಬಾರದೆ… ನೋಡಬಾರದೆ ನಮ್ ಬಲವ?

ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು ||

ನಮ್ಮ್ ಪಾರ್ಟಿಯೋರು… ಒದ್ದಾಡಿ ಹೇಗೋ
ಎಮ್ಮೆಲ್ಲ್ಯೆ ಎಲ್ರೊ..ನಮ್ಮ ಹಿಂದೆ ಬಂದ್ರು
ಪತ್ರ ನೋಡಿದೆ… ಅಳುವೇ ಬರುತಿದೆ
ನಿಮ್ಮ ಹಗೆಯಿಂದಲೇ…ನಮ್ಮ ನಗೆ ನಿಂತಿದೆ
ಎದುರು ಪಾರ್ಟಿ ಸನ್ನೆಗೆ…ನೀವು.. ಕುಣಿಯಬಹುದೆ ಹೀಗೆ
ದೆಹೆಲಿ ಮೇಡಂ ಆಜ್ಞೆಗೆ,,,ನೀವು… ಕಾದು ಕುಳಿತ್ರೆ ಹೇಗೆ
ಉಸಿರಾಡುವ… ಶವವಾಗುವೆ… ನಾ.. ಕುರ್ಚಿ.. ಇಲ್ಲದೆ
ಬೆಂಬಲ ಇದ್ದರೂ.. ಸಸ್ಪೆನ್ಷನು… ತರವೇ
ನಾಳೆ ದಿಲ್ಲಿಗೆ ನಿಮ್ಮಲ್ಲಿಗೆ ನಾ ಬರುವೇ…
ಯಡ್ಡಿ ಗೌರ್ಮೆಂಟ್ ಗೋತ..ಹೊಡೀಬೇಕು ಅಂತ… ಬರೆದಾಗಿದೆ ಇಂದು ಗೌರ್ನರು ||

ಮೂಲ ಹಾಡಿನ ಸಾಹಿತ್ಯ ಇಲ್ಲಿದೆ…

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ.. ನನ್ನ ಸಂಗಾತಿ ನೀ..
ನಿನ್ನ ಈ ಕಣ್ಣಲೀ… ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ… ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ… ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ.. ಪುತ ಕಾಣದ…. ಒಲುಮೆ… ನೀಡುವೇ…
ಮಳೆಯಾ ಹನಿ… ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ತಂಗಾಳಿಯಾಗೋ ಬಿರುಗಾಳಿಯಾಗೋ
ನೀ ಒಮ್ಮೆ ಬಂದು.. ನನ್ನ ಸೋಕಿ ಹೋಗು
ನಿನ್ನ ನೋಡದೇ… ಅಳುವೇ ಬರುತಿದೇ
ನಿನ್ನ ನಗುವಿಲ್ಲದೇ …ಜಗ ನಿಂತಂತಿದೆ..
ನಿದಿರೆ ಬರದ ಕಣ್ಣಿಗೆ… ಬಾರೆ ಹಗಲುಗನಸ ಹಾಗೆ
ಬಳಲಿ ಹೋದ ನನಗೆ…. ಬಾರೆ ಜೀವ ತುಂಬು ಹಾಗೆ
ಉಸಿರಾಡುವ… ಶವವಾದೆ ನಾ… ನೀನು… ಇಲ್ಲದೇ
ಮಳೆ ನಿಂತರೂ..ಮರದಾ ಹನಿ… ತರವೇ
ಬಾ ಇಲ್ಲಿಗೆ… ನನ್ನಲ್ಲಿಗೆ…. ನನ್ನೊಲವೇ..
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…