ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ…

Posted: ಅಕ್ಟೋಬರ್ 7, 2011 in aNaka, ಅಣಕ, ಅಣಕವಾಡು, ಸಿನಿಮಾ, ಹಾಗೆ ಸುಮ್ಮನೆ, gammaththina haadu, spoof
ಟ್ಯಾಗ್ ಗಳು:, , , , , , , ,

ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ…
ಯೆತ್ಲಾಗೆ ನೀವ್ ಕರಿರಿ…ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ…

ಹೊಸಬರಿಗೆ ಆಟೋಲಿ… ಕೆಂಪ್ನಾಮ ಗ್ಯಾರಂಟಿ
ಹಳಬರಿಗೂ ಒಮ್ಮೊಮ್ಮೆ….ಪಂಗನಾಮ ಗ್ಯಾರಂಟಿ

ಒಬ್ರೊಬ್ರೆ ಹೋಗುವಾಗ…ಹುಷಾರಾಗಿರಿ…
ಯಾವ್ದಕ್ಕೂ ಆಟೋ ನಂಬರ್…ಬರ್ಕೊಂಡಿರಿ…

ಯೆತ್ಲಾಗೆ ನೀವ್ ಕರಿರಿ…ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ…
ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ…

ಆಟೋದವರ ಮೀಟರಲ್ಲಿ ಏನೇನಿದೆ….ತಿಳುಕೊಳ್ಳೊ ತಾಕತ್ತು ನಮಗೆಲ್ಲಿದೆ
ಎಡ್ಜೆಸ್ಟು ಇರದ…. ಮೀಟ್ರೇನೆ ಇಲ್ಲ….
ಮೀಟರು ಓಡಬಹುದು ನಿಂತಲ್ಲಿಯೆ…. ನಂಬೋಕೆ ಆಗಲ್ಲ ಡೌಟಿಲ್ಲದೆ…
ಅನುಮಾನ ಪಡದೆ… ಉಳಿಗಾಲ ಇಲ್ಲ…

ಮೀ….ಟ್ರನ್ನು ಎಡ್ಜೆಷ್ಟು ಮಾಡೋದು ಈಝಿ…..
ಡಿಜಿ….ಟಲ್ಲು ಆದ್ ಮೇಲೆ ಹಿಂಗಾಯ್ತು ಸ್ವಾಮಿ

ಮೀಟ್ರಲ್ಲಿ ಜಂಪಿಂಗು ಕಂಪಲ್ಸರಿ…. ಯಾವ್ದಕ್ಕೂ ಮೀಟ್ರನ್ನು ನೋಡ್ತಾ ಇರಿ…

ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ…
ಯೆತ್ಲಾಗೆ ನೀವ್ ಕರಿರಿ…ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ…

ಯಾವೇರ್ಯಾಗ್ ಹೋದ್ರೂನು ಹಿಂಗೆ ಕಣ್ರಿ…. ಬಸ್ಸಲ್ಲಿ ಚೀಪ್-ನಲ್ಲಿ ಹೋಗ್ಬೋದುರೀ
ಆಟೋಗೆ ಸುಮ್ನೆ…ಕಾಯ್ಬಾರ್ದು ಕಣ್ರಿ
ಟೈಮ್ ಇದ್ರೆ ಒಂಚೂರು ನಿಂತ್ಕೊಂಡಿರಿ….ಪುಷ್ಪಕ್ಕು ಬರಬಹುದು ಕಾಯ್ತಾ ಇರಿ
ಆಟೋಗೆ ಕಾಸು…. ಕೊಡಬಾರ್ದು ಕಣ್ರಿ

ಬೆನ್ನಲ್ಲಿ ಬಂತ್-ನೋಡಿ ಮೂರ್ಮೂರು ಬಸ್ಸು
ಯಾವ್ದಾದ್ರು ಒಂದಾದ್ರು ಸಿಗ್ಬೋದು ನೋಡಿ
ಎಲ್ಲಾರ್ನು ಬೈಯೋಕೆ ಹೋಗ್ಬಾರ್ದು ರೀ… ಕೆಲವ್ರಾದ್ರು ಒಳ್ಳೆಯವ್ರು ಇರಬೌದು ರೀ… 🙂

ಕತ್ಲಲ್ಲಿ ಬಾಡಿಗೆಗೆ…ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು..ರೀ…
ಆಟೋ ಸಮಾಚಾರ್….ಬೇಕಾದ್ರೆ ಹೇಳ್ತಿನಿ….. ನನ್ನನ್ನು ಕೇಳ್ಕೊಂಬಿಡಿ….


ಟಿಪ್ಪಣಿಗಳು
 1. Manjunatha maravanthe ಹೇಳುತ್ತಾರೆ:

  ಎಲ್ರನ್ನೂ ಬಯ್ಯುಕೆ ಹೋಗಬಾರ್ದ ಅಂದೇಳಿ ಒಳ್ಳೆ ದ ಮಾಡಿದ್ರಿ.
  ನಮ್ಮೂರ ಬದಿಯಲ್ಲ ಹಾಗಿಲ್ಲ ಪಿಕ್ಸ ರೇಟ್. ಆಟೋ ಬರುದ ತಡ ಆತ್ತ ಅಂಬಾಗಿದ್ರೆ, ಅಲ್ಲೇ ಅಂಗ್ಠಿಯಲ್ಲ ಕೂರ್ಸಕಂಡ “ನೀರ್ ಬೇಕಾ? ಸೆಕಿ ಜೋರಿತ್ತಲ” ಅಂದ ಮಾತಾಡುಕೆ ಸುರು ಮಾಡ್ತ್ರ.

 2. ಪ್ರकवि ಹೇಳುತ್ತಾರೆ:

  ನಿಮಗೆ ಲಿರಿಕ್ಸ್ ರೀಮಿಕ್ಸ್ ರಾಜ ಅಂತ ಬಿರುದು ನೀಡಿದ್ರೆ ತಪ್ಪಾಗೊಲ್ಲ!! 🙂 ಚೆನ್ನಾಗಿದೆ 🙂 🙂

 3. Sachi ಹೇಳುತ್ತಾರೆ:

  Kannathare sumne SLK seri Kannadakke ond Jnanapeeta kammi maadidri.. Master piece…(Sachi)

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s