‘ವಿಕ್ಟರಿ’ಯ ಯೋಗರಾಜ್ ಭಟ್ರ ಕಿಕ್-(ಸ್ಟೋ)ರೀ ಹಾಡು ಇಲ್ಲಿ IT ಉದ್ಯೋಗಿಯ ‘ಹಿಸ್-ಸ್ಟೋರಿ’ ಆಗಿದೆ 🙂


ಯಾವತ್ತೂ ಕೆಲ್ಸಾ… ಕ್ಲೈಂಟು ಪಿಸಾಚಿ ಅಲ್ವಾ?
ಟೀ..ಮ್ ಮ್ಯಾನೇಜರ್ಸು ಅಂತೂ… ಸೊಳ್ಳೇ ತಿಗಣೆ… ಎಲ್ಲಾ … ಸೊಳ್ಳೇ ತಿಗಣೆ… ಎಲ್ಲಾ…

ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು
ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು

ಬಾಸ್ತುಂಬಾ ಜೋರು… ಕ್ಲೈಂಟಂದ್ರೆ ದೇವ್ರು
ಬಾಸ್ತುಂಬಾ ಜೋರು… ಕ್ಲೈಂಟಂದ್ರೆ ದೇವ್ರು

ನಿಜ್ವಾಗ್ಲೂ… ನಿಜ್ವಾಗ್ಲೂ… ನಿಜ್ವಾಗ್ಲೂ ಜೋರು ಡೆಡ್ಲೈನ್ ಪ್ರೆಷರು
ಡೆಡ್ಲೈನ್ ಪ್ರೆಷರು… ಡೆಡ್ಲೈನ್ ಪ್ರೆಷರು
ಡೆಡ್ಲೈನ್ ಪ್ರೆಷರು… ಡೆಡ್ಲೈನ್ ಪ್ರೆಷರು

ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು
ಕಟ್ಟು ಮಾಡವ್ರೇ… ನಮ್ ಹೈಕು…ಉ

ಕೆಲಸಾ…ಮಾಡದೇ ಇದ್ರೂ ಉಗಿತಾರೆ
ಸ್ವಲುಪಾ… ತಪ್ಪಾದ್ರೂನೂ ಉಗಿತಾರೆ
ಮುಚ್ಕೊಂಡೇ ಇರ್ತೀನ್ ನಾನು…ಉಗದ್ರೂನೇ
ಕೆಲಸಾ… ಕೆಲಸಾ…ಕೆಲಸಾ…ಕೆಲಸಾ

ಕೋಡಿಗ್-ಕೋಡೇ ಬದಲಾಯ್ಸು
ಕೋಡಿಗ್-ಕೋಡೇ ಬದಲಾಯ್ಸು
ಎಂಡು ಆದ ಮೇಲೆ…ಸಾವಿರಾರು ಚೇಂಜು

ಮಾಡಿ ಫ್ರೀಜು ದಯವಿಟ್ಟು
ಹೇ ಮಾಡಿ ಫ್ರೀಜು ದಯವಿಟ್ಟು
ಡೆಲಿವರಿ ಟೈಮಲ್ಲೂ…ಕೇಳಬೇಡಿ ಚೇಂಜಸು

ಕಂಪನಿ ಒಳ್ಳೇದು…ಡ್ಯೂಟಿ ತುಂಬಾ ಕಷ್ಟದ್ದು
ಹಿಂಗೆ ದುಡಿಯೋದು…ತಮ್-ಹೆಲ್ತ್ಗೆ ಕೆಟ್ಟದ್ದು

ವರ್ಷಕ್ಕೆ ಮೂರು… ಕಂಪನೀಗೆ ಹಾರು
ವರ್ಷಕ್ಕೆ ಮೂರು… ಕಂಪನೀಗೆ ಹಾರು

ನಿಜ್ವಾಗ್ಲೂ…ಗುರುವೇ… ನಿಜ್ವಾಗ್ಲೂ… ನಿಜ್ವಾಗ್ಲೂ ಓಲ್ದು ಕಂಪ್ನೀನೆ ಬೆಟ್ರು
ಕಂಪ್ನೀನೆ ಬೆಟ್ರು… ಕಂಪ್ನೀನೆ ಬೆಟ್ರು
ಕಂಪ್ನೀನೆ ಬೆಟ್ರು… ಕಂಪ್ನೀನೆ ಬೆಟ್ರು

ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು…ಉ

ಹೈಕು-ಭಡ್ತಿ ಎರಡೂ
ಅವ್ಳಿ-ಜವ್ಳಿ ಇದ್ದಂಗೆ
ಅಪ್ರೈಸಲ್ಲು ಇತ್ಯಾದಿ
ಮೂಗಿಗ್ ತುಪ್ಪ ಹಚ್ದಂಗೆ

ಟ್ಯಾಕ್ಸು ಹೋದ್ರೆ ಅದೇ ಸ್ಯಾಲ್ರಿ
ಹೆಸ್ರು ಬದಲು ಹಳೇ ಡ್ಯೂಟಿ
ಹೊಸ ಟೀಮು ಅದೇ ಕ್ಲೈಂಟು
ಕಿತ್ತೋಗಿರೋ ಹಳೇ ಬಾಸು

ಅದೇ ಪ್ರೆಷರ್ ದಿನಾ ಲೇಟು
ವೀಕೆಂಡಲ್ಲೂ ನೈಟು-ಔಟು
ಕ್ಲೈಂಟು ಕಾಲ್ಸು ಮಧ್ಯೆ ಮೀಟಿಂಗ್
ಮೀಟಿಂಗಲ್ಲಿ ಬಾಸಿನ್ ಲೆಕ್ಚರ್

ಗೋಳು ಎಲ್ಲಾ ಯಾರ ಹತ್ರ ಹೇಳಲಿ?
ಪ್ರೋಮೋಶನ್ನೇ ಇಲ್ದೇ ಹಿಂಗೇ ಸಾಯಲೇ?

ಸಿಕ್ಕಲ್ವೆ ಬೇರೆ… ನೌಕ್ರಿ ಆಫರ್ರು
ಬಿಟ್ಟು ಹೋಗೋಕೆ… ಮನ್ಸ್-ಮಾಡಿ ಚೂರು

ನಿಜ್ವಾಗ್ಲೂ…ನಿಜ..ವಾಗ್ಲೂ… ನಿಜ್ವಾಗ್ಲೂ ಹುಡ್ಕಿದ್ರೆ ಬೇಜಾನೈತೆ ಆಫರು
ಬೇಜಾನೈತೆ ಆಫರು… ಬೇಜಾನೈತೆ ಆಫರು
ಬೇಜಾನೈತೆ ಆಫರು… ಬೇಜಾನೈತೆ ಆಫರು

ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು
ಹೇ…ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು
ಕಡಿಮೆ ಹಾಕವ್ರೇ ಬಾಸು
ಕಟ್ಟು ಮಾಡವ್ರೇ… ನಮ್ ಹೈ….ಕು…ಉ

___________________________________________________________
ಮೂಲ ಹಾಡು ‘ವಿಕ್ಟರಿ’ ಚಿತ್ರಕ್ಕೆ ಯೋಗರಾಜ್ ಭಟ್ ಬರೆದ ‘ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು’

ಯಾವತ್ತೂ ಮನ್ಸಾ…. ಒಂಟಿ ಪಿಸಾಚಿ ಅಲ್ಲ
ಬಾ..ರ್ ಸಪ್ಲೈಯರಿಗಿಂತ… ಒಳ್ಳೇ ಗೆಳೆಯಾ…ಇಲ್ಲಾ… ಒಳ್ಳೇ ಗೆಳೆಯಾ… ಇಲ್ಲಾ….

ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು
ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು

ಕಣ್ತುಂಬಾ ನೀರು… ಬಾಯ್ತುಂಬಾ ಬೀರು
ಕಣ್ತುಂಬಾ ನೀರು… ಬಾಯ್ತುಂಬಾ ಬೀರು

ನಿಜ್ವಾಗ್ಲೂ… ನಿಜ್ವಾಗ್ಲೂ… ನಿಜ್ವಾಗ್ಲೂ ಬಾರು ಗಂಡ್ಮಕ್ಳ ತವರು
ಗಂಡ್ಮಕ್ಳ ತವರು…ಗಂಡ್ಮಕ್ಳ ತವರು
ಗಂಡ್ಮಕ್ಳ ತವರು…ಗಂಡ್ಮಕ್ಳ ತವರು

ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು
ಒದ್ದು ಓಡ್ಸವ್ಳೇ… ನಮ್ ವೈಫು…ಉ

ಕುಡುಕಾ…ಕುಡಿದೇ ಇದ್ರೂ ಕುಡುಕಾನೇ
ಕುಡುಕಾ…ಕುಡ್ಕೊಂಡಿದ್ರೂ ಕುಡುಕಾನೇ
ಕುಡ್ಕೊಂಡೇ ಇರ್ತೀನ್ ನಾನು…ಕುಡುಕಾನೇ
ಕುಡುಕಾ… ಕುಡುಕಾ…ಕುಡುಕಾ…ಕುಡುಕಾ

ಊರಿಗ್-ಊರೇ ಸುಡುಗಾಡು
ಊರಿಗ್-ಊರೇ ಸುಡುಗಾಡು
ಎಣ್ಣೇ ಅಂಗ್ಡಿ ಒಂದೇ…ಸಾವಿಲ್ಲದ ಪ್ಲೇಸು

ಬಾರು ಬಾಗ್ಲು ದಯವಿಟ್ಟು
ಹೇ ಬಾರು ಬಾಗ್ಲು ದಯವಿಟ್ಟು
ಟ್ವೆಂಟಿಫೋರು ಹವರ್ಸು…ಮುಚ್ಚಬೇಡಿ ಪ್ಲೀಸು

ಕುಡುಕ್ರು ಒಳ್ಳೇವ್ರು…ಎಣ್ಣೆ ತುಂಬಾ ಕೆಟ್ಟದ್ದು
ಡೈಲಿ ಕುಡಿಯೋದು…ತಮ್-ತಮ್ಗೇ ಬಿಟ್ಟಿದ್ದು

ದುಃಖಕ್ಕೆ ನೀರು…ಕುಡಿತಾರೆ ಯಾರು
ದುಃಖಕ್ಕೆ ನೀರು…ಕುಡಿತಾರೆ ಯಾರು

ನಿಜ್ವಾಗ್ಲೂ…ಗುರುವೇ… ನಿಜ್ವಾಗ್ಲೂ… ನಿಜ್ವಾಗ್ಲೂ ಬಿಲ್ಲು ಕಟ್ಟೋನೇ ದೇವ್ರು
ಕಟ್ಟೋನೇ ದೇವ್ರು…ಕಟ್ಟೋನೇ ದೇವ್ರು
ಕಟ್ಟೋನೇ ದೇವ್ರು…ಕಟ್ಟೋನೇ ದೇವ್ರು

ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು…ಉ

ಲವ್ವು-ನೋವು ಎರಡೂ
ಅವ್ಳಿ-ಜವ್ಳಿ ಇದ್ದಂಗೆ
ಮದುವೆ-ಮಕ್ಳು ಇತ್ಯಾದಿ
ಹಾವು ಬಿಟ್ಟುಕೊಂಡಂಗೆ

ಮನೆಗೋದ್ರೆ ಅದೇ ಹೆಂಡ್ತಿ
ಹಸ್ರು ಕಲರ್ ಹಳೇ ನೈಟಿ
ಬ್ಯಾಂಕು ಸಾಲ ಕಾರು ಗ್ಯಾಸು
ಮನೆ ಬಾಡ್ಗೆ ಮಕ್ಳು ಫೀಸು

ಅದೇ ಕುಕ್ಕರ್ ಅನ್ನ ಸಾರು
ಮಕ್ಳ ಕೈಲಿ ಪ್ಲಾಸ್ಟಿಕ್ ಕಾರು
ಮಿಡಲ್ ಕ್ಲಾಸು ಹಳೇ ಸ್ಕೂಟರ್
ಯಾವಾಗಂದ್ರೆ ಆವಾಗ್ ಪಂಕ್ಚರ್

ಬಾಳು ಅಂದ್ರೆ ಏನು ಅಂತ ಹೇಳಲೇ
ಮೆಡಿಸನ್ನೇ ಇಲ್ದೇ ಇರೋ ಖಾಯಿಲೇ

ಇಲ್ಲಿಲ್ಲ ಯಾರೂ…ಔಷ್ದಿ ಕೋಡೋರು
ಬಿಟ್ಟುಕೊಂಡೋರು…ಬಿಟ್ಟೇಳಿ ಚೂರು

ನಿಜ್ವಾಗ್ಲೂ…ನಿಜ..ವಾಗ್ಲೂ… ನಿಜ್ವಾಗ್ಲೂ ಕುಡುಕ್ರೇ ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು…ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು…ಸಮಾಜಕ್ಕೆ ಡಾಕ್ಟ್ರು

ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು
ಹೇ…ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು
ಆಚೇಗ್ ಹಾಕವ್ಳೇ ವೈಫು
ಒದ್ದು ಓಡ್ಸವ್ಳೇ… ನಮ್ ವೈ….ಫು…ಉ

ಟಿಪ್ಪಣಿಗಳು
 1. J.Dinakara Adiga ಹೇಳುತ್ತಾರೆ:

  Haali quartru…. super aagide kannanthare

 2. Sugunamahesh ಹೇಳುತ್ತಾರೆ:

  hahaha…chennagide… kelasada ottadave namma lifeu.. nimma boss sari illa bidi 🙂

 3. Ishwara Bhat K ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ.. ಲೈಕ್ಡ್ ಇಟ್

 4. ಮಂಜುನಾಥ ಮರವಂತೆ ಹೇಳುತ್ತಾರೆ:

  ಕೆಲಸದೊತ್ತಡದ ಅಭಿವ್ಯಕ್ತಿಯನ್ನ ಚನ್ನಾಗಿ ಬಿಂಬಿಸಿದ್ದೀರಿ.

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s