ಮನಸು ಮುಂಗಾರು.. ಕಣ್ಣಂಚಿನಲಿ ಸೋನೆ..!!

Posted: ಜೂನ್ 7, 2010 in ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ
ಟ್ಯಾಗ್ ಗಳು:,

ನೀ ಬಳಿಯಲಿರಲು ಗೆಳತಿ

ಈ ಬದುಕಲಿ ಅಷ್ಟೇ ಸಾಕು

ನೀ ದೂರವಾದರೆ…

ಈ ಬದುಕು ಸಾಕು ಅಷ್ಟೇ..!!

– – – – – – – – – – – – – – – – – — – – – – – – – – – – – – – – –

ನಿನ್ನ ಮರೆಯಬೇಕೆಂಬ ಮನಸಿನ ಮನವಿಯ

ಮನ್ನಿಸಿ ನಾ ಮರೆತೇಬಿಟ್ಟೆ

ಮರುಘಳಿಗೆಯಲೇ ಮಧುರ ನೆನಪುಗಳ ಆಲಾಪವ

ಆಲಿಸುತ ಮೈ ಮರೆತೇಬಿಟ್ಟೆ

– – – – – – – – – – – – – – – – – — – – – – – – – – – – – – – – –

ಬದುಕಿನ ಕವನ ಸಂಕಲನದಲಿ..

ನೀನೊಂದು ಪುಟ್ಟ ಕವಿತೆ

ಬಾಳಿನ ಭಾವಗೀತೆಯಲಿ ನೀ

ಸ್ವರವಾಗಿ ಕುಳಿತೆ

ಪ್ರೇಮದ ಪಿಸುಮಾತಲಿ ನೀ

ಪದವಾಗಿ ಅವಿತೆ

ಬರುವೆಯ ನನ್ನ ತಮದ ಬಾಳಿಗೆ

ನೀನಾಗಿ ಒಂದು ಪುಟ್ಟ ಹಣತೆ?

– – – – – – – – – – – – – – – – – — – – – – – – – – – – – – – – –

ಚಿತ್ತ ಭಿತ್ತಿಯ ನಡುವೆ.. ಕನಸುಗಳ ಕೋಣೆಯಲಿ

ನಿನ್ನ ನೆನಪುಗಳ ಚಾದರವ ಬಿಚ್ಚಿಟ್ಟಿರುವೆ…

ಮಧುರ ಸ್ಮೃತಿಗಳ ಸುಂದರ ಮೆಲ್ವಾಸಿನಡಿಯಲಿ

ಕಣ್ಣೀರ ಕರೆಗಳನೆಲ್ಲ ಬಚ್ಚಿಟ್ಟಿರುವೆ

– – – – – – – – – – – – – – – – – — – – – – – – – – – – – – – – –

ಮರೆತೂ ಕೂಡ ಕಾಲಿಡಬೇಡ ಗೆಳತಿ

ನನ್ನೆದೆಯ ಅಂಗಳದಲಿ ..

ಹಾಳಾದೀತು ಎಂದೋ ನೀನೇ ಬಿಡಿಸಿಟ್ಟ

ಒಲವಿನ ರಂಗವಲ್ಲಿ

– – – – – – – – – – – – – – – – – — – – – – – – – – – – – – – – –

ಭಾವ ಬಿಂದಿಗೆಯ ತುಂಬೆಲ್ಲಾ ನಿನ್ನೊಲವಿನ ತಿಳಿ ನೀರು

ಸ್ಪೂರ್ತಿ ಪಾತ್ರೆಯಲೂ ಗೆಳತಿ ಭರ್ತಿ ನೀನೇ ನೀನು

ಕಣ್ಮುಚ್ಚಿಕೊಂಡರೆ ಕನಸಲಿ ಬರ್ತಿ ನೀನು

ಕಣ್ತುಂಬಿ ಬಂದಾಗ ಕಣ್ಣಂಚಿನ ಹನಿಯಲೂ ಇರ್ತಿ ನೀನು

– – – – – – – – – – – – – – – – – — – – – – – – – – – – – – – – –

ಟಿಪ್ಪಣಿಗಳು
  1. sushma sindhu ಹೇಳುತ್ತಾರೆ:

    ವಿಜಯ್ ರವರೇ,
    ಅರ್ಥವತ್ತಾದ ಕವಿತೆಗಳು.. ಇಷ್ಟವಾಯಿತು..

  2. Tanuja ಹೇಳುತ್ತಾರೆ:

    Kavithegalella bhavapoornavagive……artha garbithavagive….

    ಮರೆತೂ ಕೂಡ ಕಾಲಿಡಬೇಡ ಗೆಳತಿ

    ನನ್ನೆದೆಯ ಅಂಗಳದಲಿ ..

    ಹಾಳಾದೀತು ಎಂದೋ ನೀನೇ ಬಿಡಿಸಿಟ್ಟ

    ಒಲವಿನ ರಂಗವಲ್ಲಿ

    E kavithe bahala chennagide

  3. ರಾಘವೇಂದ್ರ ಹೆಗಡೆ ಹೇಳುತ್ತಾರೆ:

    ತುಂಬಾ ಸುಂದರ, ಭಾವಪೂರ್ಣ ಕವಿತೆಗಳು ಸರ್…

    ಬದುಕಿನ ಕವನ ಸಂಕಲನದಲಿ..
    ಕವಿತೆಯಲ್ಲಿ ಬರುವ

    “ಬರುವೆಯ ನನ್ನ ತಮದ ಬಾಳಿಗೆ
    ನೀನಾಗಿ ಒಂದು ಪುಟ್ಟ ಹಣತೆ?”

    ಸಾಲು ತುಂಬಾ ಇಷ್ಟವಾಯಿತು.

ನಿಮ್ಮ ಅನಿಸಿಕೆ ಹೇಳಿ