ಒಂದಿಷ್ಟು ಹೊಸ ಪುಸ್ತಕಗಳು…ಒಮರ್ಟಾ,ಒಂದು ಫೋಟೋದ ನೆಗೆಟಿವ್,ರಾಯಭಾಗದ ರಹಸ್ಯ ರಾತ್ರಿ,ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ

Posted: ನವೆಂಬರ್ 17, 2008 in ಪುಸ್ತಕಗಳು
ಟ್ಯಾಗ್ ಗಳು:, , , ,

ಕಳೆದ ಹತ್ತು ದಿನಗಳಲ್ಲಿ ಒಂದಿಷ್ಟು ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಿದ್ದೆ. ಶ್ರೀಧರ ಬಳೆಗಾರ ಅವರ ಕಥಾ ಸಂಕಲನ ಒಂದು ಫೋಟೋದ ನೆಗೆಟಿವ್, ಜೋಗಿಯ ರಾಯಭಾಗದ ರಹಸ್ಯ ರಾತ್ರಿ, ಬೆಳಗೆರೆಯ ಒಮರ್ಟಾ ಸುಮಿತ್ರಾ ಅವರ ಕಥಾಸಂಕಲನ ಗುಬ್ಬಿ ಹಳ್ಳದ ಸಾಕ್ಷಿಯಲ್ಲಿವುಗಳಲ್ಲಿ ಮುಖ್ಯವಾದ ಕೆಲವು ಪುಸ್ತಕಗಳು.

 

ನನಗೆ ತುಂಬಾ ಹಿಡಿಸಿದ್ದು ಒಂದು ಫೋಟೋದ ನೆಗೆಟಿವ್. ವಿಮರ್ಶೆ ಮಣ್ಣು ಮಸಿ ಅಂತ ಮಾಡೋಕೆ ನಂಗಂತೂ ಬರೊಲ್ಲ… ಕಥೆಯ ವಸ್ತು ಧ್ವನಿ, ಒಳನೋಟ, ರೂಪಕ, ತಂತ್ರಗಾರಿಕೆ ಮಂತ್ರಗಾರಿಕೆ ಅಂತೆಲ್ಲ ಬರೆದು-ಕೊರೆದು ನಿಮ್ಮ ತಲೆಗೆ ತ್ರಾಸ ಕೋಡುವಷ್ಟು ಸಾಮರ್ಥ್ಯ ದೇವರಾಣೆಗೂ ನನಗಿಲ್ಲ. ಹಾಗಾಗಿ ನೀವು ಬಚಾವ್!! ಆದ್ರೆ ಇಲ್ಲಿನ ಕಥೆಗಳು ಸೊಗಸಾಗಿದ್ದು ಸಲೀಸಾಗಿ ಓದಿಸಿಕೊಂಡು ಹೊಗುತ್ತವೆ, ಖುಶಿ ಕೋಡುತ್ತವೆ

 

ಸುಮಿತ್ರ ಅವರ ಗುಬ್ಬಿ ಹಳ್ಳದ ಸಾಕ್ಷಿ ಯಲ್ಲಿ ನನಗೆ ಹಿಡಿಸಿದ್ದು ಎರಡು-ಮೂರು ಕಥೆಗಳು ಮಾತ್ರ. ಕೆಲವೊಂದು ಕಥೆಗಳು ಮುಗಿದ ಮೇಲೆ ಇದರಲ್ಲಿ ಹೇಳೋಕೆ ಹೊರಟಿದ್ದು ಹಾಗು ಹೇಳಿರುವುದರ ಮಧ್ಯೆ ಏನೋ ಕೋಂಡಿ ಕಳಿಚಿದಂತೆ ಭಾಸವಾಗ್ತಾ ಇತ್ತು ಅಂತ ನನ್ನ ಅನಿಸಿಕೆ. ಹಾಗಂತ ಅದನ್ನು ನೀವು ನಂಬಬೇಕಾಗಿಲ್ಲ. ಯಾಕಂದ್ರೆ ನಾನು ಮೊದಲೇ ಹೇಳಿದ ಹಾಗೆ ವಿಮರ್ಶಕ ಅಲ್ಲ ಬರೇ ಓದುಗ ಅಷ್ಟೇ..

 

ರಾಯಭಾಗದ ರಹಸ್ಯ ರಾತ್ರಿಯ ಕಥೆಗಳಲ್ಲಿ ಹೆಚ್ಚಿನವು ಮೊದಲೇ ಓದಿದ್ದೆ. ಕೆಲವು ಹಳೆಯ ಕಥೆಗಳು ನಾ ಓದಿಲ್ಲದೆ ಇರುವಂತವುಗಳು ಖುಶಿ ಕೊಟ್ಟವು. ಎಡಕು ಮೇರಿಯ ರೈಲ್ವೇ ಸುರಂಗದ ಕಥೆ ತೇಜಸ್ವಿಯವರ ಬರಹದಂತೆ ರಸವತ್ತಾಗಿತ್ತು. ಆಗುಂಬೆಯ ಕಥೆ ಕೂಡಾ ಚೆನ್ನಾಗಿತ್ತು( ಕಥೆಯ ಹೆಸರುಗಳು ನೆನಪಿಲ್ಲ. ಇದನ್ನು ಬರೆಯುವಾಗ ಆ ಪುಸ್ತಕ ನನ್ನೆದುರಿಗಿಲ್ಲ. ಕ್ಷಮೆ ಇರಲಿ). ಇದೇ ಮಾತನ್ನು ಇಲ್ಲಿನ ಎಲ್ಲಾ ಕತೆಗಳ ಬಗ್ಗೆ ಹೇಳಲು ಬರುವಂತಿದ್ದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು

 

ಇನ್ನು ಪ್ರತಿಗಳು ಮುಗಿದು ಬಹು ಕಾಲದ ನಂತರ ಮರುಮುದ್ರಣದ ಸೌಭಾಗ್ಯ ಕಂಡ ಬೆಳಗೆರೆಯ ಒಮರ್ಟಾ ಅರ್ಧ ಓದಿ ಆಯ್ತು. ಇಡೀ ಕತೆ ಬೆಂಗಳೂರಿನ ಭೂಗತ ಲೋಕದ ಸುತ್ತ ಗಿರಕಿ ಹೊಡೆಯುತ್ತದೆ. ಓದೋಕಂತೂ ತುಂಬಾ ರುಚಿಕಟ್ಟಾಗಿದೆ. ಪೂರ್ತಿ ಓದಿದ ಮೇಲೆ ಇದರ ಬಗ್ಗೆ ಇನ್ನೂ ಸವಿಸ್ತಾರವಾಗಿ ಬರೆದೇನು.

 

ಮತ್ತೆ ನೀವು ಹೊಸತಾಗಿ ಏನೇನು ಓದಿದ್ರ್ರಿ?

ಟಿಪ್ಪಣಿಗಳು
  1. Ganesh ಹೇಳುತ್ತಾರೆ:

    ಕಥೆಗಳ ಬಗೆಗಿನ ಒಂದು ಸವಿಸ್ತಾರ ಪೀಠಿಕೆ ಮುಂದಿನ ದಿನಗಳಲ್ಲಿ ಒದಗಿಸಿದರೆ ಒಳ್ಳೆದು ವಿಜಯ್.
    ಪುಸ್ತಕದ ಬಗೆಗೆ ಆಸಕ್ತಿ ಹುಟ್ಟೋದೇ, ಹುಟ್ಟಿಸೋದೇ ಹೀಗೆ.

    ಓದು, ಬರಹದ ಜೊತೆಗೆ ಚಿಂತನವೂ ಚಿರಂತನವಾಗಿರಲಿ ಎಂಬ ಹಾರೈಕೆಯೊಂದಿಗೆ…
    ಗಣೇಶ್.ಕೆ

  2. ಇಂಚರಾ ಹೇಳುತ್ತಾರೆ:

    ನಾನು ನಿಮ್ಮ ಅಭಿಮಾನಿ ಸರ್. ನೀವು ತುಂಬಾ ಓದುತ್ತೀರಿ ಅಲ್ವಾ? ಚೆನ್ನಾಗಿ ಬರೀತೀರಿ ಕೂಡ. ಅದು ಹೌದು ಸರ್ ನಿಮಗೆ ಇಷ್ಟೆಲ್ಲ ಪುಸ್ತಕಗಳನ್ನು ಓದಲು ಸಮಯ ಎಲ್ಲಿ ಸಿಗುತ್ತೇಂತ ನನ್ನನ್ನು ಕಾಡುವ ಪ್ರಶ್ನೆ!!!

ನಿಮ್ಮ ಅನಿಸಿಕೆ ಹೇಳಿ