ಅರಮನೆ ಚಿತ್ರ ಇಲ್ಲಿ ಸಾಫ್ಟ್‌ವೇರ್-ಮನೆ ಯಾಗಿದೆ.

ಅದರ ಪಂಚ್‌ಲೈನು ಪ್ರೀತಿ ತುಂಬಿದ ಪ್ರತೀ ಗೂಡೂ ಅರಮನೆ ಅನ್ನೋದು ಇಲ್ಲ ಸ್ವಲ್ಪ ಬದಲಾಯಿಸಿ.. ಬಗ್ಸ್ ತುಂಬಿದ ಪ್ರತೀ ಕೋಡೂ ಕರಮಾನೇ ಅಂತಾಗಿದೆ J

 

ಅರಮನೆ ಚಿತ್ರದ ಪತ್ರ ಬರೆಯಲಾ….ಇಲ್ಲಾ ಚಿತ್ರ ಬಿಡಿಸಲಾ ಹಾಡು ಕೇಳಿದ್ದೀರಲ್ಲಾ…? ಅದೇ ಹಾಡನ್ನು ನಮ್ ಸಾಫ್ಟ್‌ವೇರ್ ಡೆವಲಪರ್ ಹಾಡಿದ್ರೆ ಹೇಗಿರುತ್ತೆ ಅಂತಾ ನೋಡಿ…!!

 

ನಿಮ್ಮ ಅನುಕೂಲಕ್ಕೆ ಒರಿಜಿನಲ್ ಹಾಡನ್ನು ಪಕ್ಕದಲ್ಲೇ ಕೊಟ್ಟಿದ್ದೀನಿ ನೋಡಿ…

 

ಟೆಸ್ಟ್ ಮಾಡಲಾ… ಇಲ್ಲಾ ಡಿಬಗ್ ಮಾಡಲಾ…

ಹೇಗೆ ಹುಡುಕಲಿ ನನ್ನ ಮಾಡ್ಯುಲ್ ಬಗ್‌ಗಳಾ…

 

ಪ್ರೊಫೈಲರ್ ಹಾಕಲಾ… ಇಲ್ಲಾ ಬ್ರೇಕ್‌ಪಾಯಂಟ್ ಹಾಕಲಾ…

ಹೇಗೆ ತಿಳಿಯಲಿ ನಾನು ಎರರ್ ಮೂಲಗಳಾ…

ಟೆಸ್ಟ್ ಮಾಡಲಾ……..

 

ಮುಗಿದಾದ ಮಾಡ್ಯುಲನ್ನ… ಬದಲಾಯ್ಸಿ ಹಾಕುವ ಮುನ್ನ…

ತೆಗೆದಿಟ್ಟು ಬ್ಯಾಕಪ್ಪನ್ನ… ಸೇವ್ ಮಾಡಬೇಕು…

ತಪ್ಪಿರೋದು ಬ್ಯಾಕೆಂಡಲ್ಲಾ… ಬಗ್ ಇರೋದು ಫ್ರಂಟೆಂಡಲ್ಲಾ…

ಜಾಲಾಡಿ ಹುಡುಕಿ ಬೇಗ… ಬಗೆಹರಿಸುವಾಸೆ

 

ನಾನೇ ಮಾಡಲಾ… ಕಲೀಗ್ನ ಕೇಳಲಾ..ನೆಟ್‌ನಲ್ಲಿ ಹುಡುಕಲಾ….

ನಾ ಏನು ಏನು ಏನು ಮಾಡಲೀ….

 

ಟೆಸ್ಟ್ ಮಾಡಲಾ… ಇಲ್ಲಾ ಡಿಬಗ್ ಮಾಡಲಾ… ||

  

ಒಂದು ಬಗ್ ಫಿಕ್ಸ್ ಆಗೋ ಮುನ್ನ… ಮತ್ತೆರಡು ಬಂತಲ್ಲಣ್ಣ…

ಮನೆ ಸೇರಿ ರಾತ್ರಿಗೆ ಮುನ್ನ… ಮಲಗೋಕೆ ಆಸೆ…

ರಿಕ್ವಾಯರ್‌ಮೆಂಟು ಫ್ರೀಜಾಗಿಲ್ಲ… ಬಫರ್ ಟೈಮು ಮೊದಲೇ ಇಲ್ಲ…

ಡೆಡ್‌ಲೈನು ಹತ್ರ ಬಂತಲ್ಲಾ… ಮುಗಿಸೋದು ಹ್ಯಾಗೆ…

 

ನೈಟ್‌ಔಟ್ ಮಾಡಲಾ… ವೀಕೆಂಡ್ ಬರಲಾ.. ಏನ್ ಸಾಯಲೀ…

ನಾ ಏನು ಏನು ಏನು ಮಾಡಲೀ….

 

ಟೆಸ್ಟ್ ಮಾಡಲಾ… ಇಲ್ಲಾ ಡಿಬಗ್ ಮಾಡಲಾ… ||

 

 

Advertisements
Comments
 1. anoo says:

  AMAZING!
  ಡೆಡ್‌ಲೈನು ಹತ್ರ ಬಂತಲ್ಲಾ… ಮುಗಿಸೋದು ಹ್ಯಾಗೆ…

  ನೈಟ್‌ಔಟ್ ಮಾಡಲಾ… ವೀಕೆಂಡ್ ಬರಲಾ.. ಏನ್ ಸಾಯಲೀ…
  ನಾ ಏನು ಏನು ಏನು ಮಾಡಲೀ….

  almost namde paristhiti 😛

 2. lakshmikrishna says:

  Super composing i enjoyed very much

 3. Shishir says:

  ನಂಗ್ ಸ್ವಲ್ಪ ಅರ್ಥ ಆಯ್ತ್….ಆ ಹಾಡನ್ನ ಹಾಡ್ತಾ ಹೊಟ್ಟೆ ಹುಣ್ಣಾಯ್ತು.

 4. sundaranadu says:

  Hi,

  Nimma kalpane thumba chennagide.

  dhanyavadagalondige,

  Rajanna
  Sundaranadu

 5. Anand says:

  Good song vijayraj, odhi thumbane khushiyaithu.

 6. Sriram says:

  ಯಾವ ಸಾಫ್ಠ್ವೇರ್ ಕಂಪೆನಿ ಕರೆಯಿತೋ nodidde… adu heege thumba funny agi ithu… Keep it up 🙂

 7. vijayraj says:

  ಈ ತರಹದ್ದು ಆಗ್ಲೆ 4-5 ಬರ್ದಿದ್ದೀನಿ. ಗೆಳೆಯ ಚಿತ್ರದ ಈ ಸಂಜೆ ಯಾಕಾಗಿದೆ ಧಾಟಿಯಲ್ಲಿ ಈ ಮಂಡೆ ಯಾಕಾಗಿದೆ ಅಂತ, ಹೀರೋ ಹೀರೋ ಧಾಟಿಯಲ್ಲಿ ಕಾವೇರಿ ಗಲಾಟೆಯ ಸಮಯದಲ್ಲಿ ನೀರೋ ನೀರೋ ಅಂತ, ಯಾವ ಮೋಹನ ಮುರಳಿ..ಧಾಟಿಯಲ್ಲಿ ಯಾವ ಸಾಫ್ಠ್ವೇರ್ ಕಂಪೆನಿ ಕರೆಯಿತೋ ಅಂತ, ಹೀಗೆ ಒಂದಿಷ್ಠು ಅಣಕ ಬರ್ದಿದ್ದೀನಿ. ಅದೆಲ್ಲಾ ನನ್ನ ಪುಸ್ತಕ ಅಂತರಂಗದ ಆಪ್ತಸ್ವರದಲ್ಲಿ ಹಾಕಿದ್ದೆ. ವಿಜಯ ಕರ್ನಾಟಕದಲ್ಲೂ ಬಂದಿತ್ತು.

 8. Tina says:

  ವಿಜಯ್,
  very very witty. ಈ ಥರದ ಹಾಡುಗಳನ್ನ ನಾವು ಪೀಯೂಸಿ ದಿನಗಳಿಂದ ಕಾಲೇಜಿನ ಸ್ಕಿಟ್ಟುಗಳಿಗೋಸ್ಕರ ಕಟ್ಟುತ್ತಿದ್ದಿದ್ದುಂಟು. ಮೊನ್ಮೊನ್ನೆ ’ನಂದ ಲವ್ಸ್ ನಂದಿತ’ ಚಿತ್ರದ ’ಜಿಂಕೆಮರೀನಾ’ ಹಾಡನ್ನ ಸಣ್ಣ ಹುಡುಗನೊಬ್ಬ ಹೀಗೇ ಬದಲಾಯಿಸಿ ಹಾಡುತ್ತಿದ್ದ. ನಗು ಬಂದಿತ್ತು. ಇಲ್ಲಿ ಬಂದರೆ ನೀವೂನೂ!! ರಾಗವಾಗಿ ಹಾಡಿಕೊಂಡು ಖುಶಿಪಟ್ಟೆ.

 9. satya says:

  Hi, this is really good ಒಂದು ಬಗ್ ಫಿಕ್ಸ್ ಆಗೋ ಮುನ್ನ… ಮತ್ತೆರಡು ಬಂತಲ್ಲಣ್ಣ…

  ಮನೆ ಸೇರಿ ರಾತ್ರಿಗೆ ಮುನ್ನ… ಮಲಗೋಕೆ ಆಸೆ… I like these lines very much, shows the Engineers problems.

 10. ನೈಟ್‌ಔಟ್ ಮಾಡಲಾ… ವೀಕೆಂಡ್ ಬರಲಾ.. 🙂

  ಹ್ಹ ಹ್ಹ ಹ್ಹ.

  ವಿಜಯ್, ನೀವು ಅಣಕುಹಾಡುಗಳನ್ನು ಚೆನ್ನಾಗಿ ಬರೀತಿರ.

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s