Posts Tagged ‘ಕನ್ನಡ ಲಿರಿಕ್ಸ್’

‘ಕಡ್ಡಿಪುಡಿ’ ಚಿತ್ರದ ‘ಬೇರೇ… ಯಾರೋ… ಬರೆದಂತಿದೆ… ಸಾಲನೂ’ ಧಾಟಿಯಲಿ ನನ್ನ ಸ್ಮೃತಿ ಸಾಲುಗಳು


 
ಏಕೋ… ಏನೋ…
ಸ್ಮರಿಸುತ್ತಿಹೆ …
ನಿನ್ನನು

ವರ್ಷ… ಸ್ಪರ್ಷ…
ಹನಿಸುತ್ತಿದೆ…
ಕಣ್ಣನು

ಮೊಲ್ಲೆಯ ಹೂವೊಂದು…
ಮೆಲ್ಲನೆ ಅರಳುತಾ…
ನರುಗಂಪು…
ಬೀರೋ.. ತರಾ

ಆವರಿಸುತಿಹೆ…
ನನ್ನನು
ನಾ ಮರೆತಿಹೆ …
ನನ್ನನೇ

ಏಕೋ… ಏನೋ…

ಯಾವುದೋ…
ಹಾಡಲೀ…
ಲೀನ ಆಗುವಂತೆ…

ಸೇರಿದೇ …
ನನ್ನೆದೇ…
ಗೊತ್ತೇ ಆಗದಂತೇ…

ನಿನೊಂತರಾ…
ಸೋನೆ ತರಾ…
ಬಂದ್ಹೋಗು ಇಲ್ಲಾ…
ಅಭ್ಯಂತರ…

ಪದಗಳಲ್ಲಿಯೂ…
ಬಂಧಿಸಲಾಗದ…
ಕನ್ನಿಕೆಯೇ…
ಇಗೋ..ತಗೋ….

ಸೆರೆಯಾಗುವೆ …
ನಿಂಗೇ ನಾ
ಮರೆಯಾಗುವೆ …
ಹಿಂಗೇ ನಾ

ಏಕೋ… ಏನೋ…
ಸ್ಮರಿಸುತ್ತಿಹೆ …
ನಿನ್ನನು
ಹನಿಸುತ್ತಿದೆ…
ಕಣ್ಣನು

——————————————————————————–
ಮೂಲ ಹಾಡು: ‘ಕಡ್ಡಿಪುಡಿ’ ಚಿತ್ರದ ‘ಬೇರೇ… ಯಾರೋ… ಬರೆದಂತಿದೆ… ಸಾಲನೂ’
ಕೃಪೆ: kannadalyrics.com
——————————————————————————–
ಬೇರೇ… ಯಾರೋ…
ಬರೆದಂತಿದೆ…
ಸಾಲನು

ಬೀಸೋ… ಗಾಳಿ…
ಮರೆತಂತಿದೆ…
ಮಾತನು

ಬೆಲ್ಲದ ಹಾಗೆಯೂ…
ಕಲ್ಲೆದೆ ಕರಗುವಾ…
ಬೇಗುದಿಯೂ…
ಇದೇ..ತಕೋ

ತಡೆದಂತಿದೆ…
ನಿನ್ನನು
ತಡೆದಂತಿದೆ…
ನಿನ್ನನು

ಬೇರೇ… ಯಾರೋ…

ಜೀವವೇ…
ಪ್ರೀತಿಸು…
ಜೀವ ಹೋಗುವಂತೇ…

ಸಂತೆಯಾ…
ಮಧ್ಯವೇ…
ಸ್ವಪ್ನ ತಾಗುವಂತೆ…

ನಮ್ಮಿಬ್ಬರಾ…
ರೂಪಾಂತರ…
ಆಗಾಗ ಸ…ಣ್ಣಾ…
ಮಧ್ಯಂತರ…

ಕನ್ನಡಿಯಲ್ಲಿಯೂ…
ಕಣ್ಣಿಗೆ ಬೀಳದ…
ಭೂಮಿಕೆಯೂ…
ಇದೇ..ತಕೋ….

ಸೆಳೆದಂತಿದೆ…
ನಿನ್ನನು
ಸೆಳೆದಂತಿದೆ…
ನಿನ್ನನು

ಬೇರೇ… ಯಾರೋ…
ಬರೆದಂತಿದೆ…
ಸಾಲನು
ಮರೆತಂತಿದೆ…
ಮಾತನು

‘ಗೊಂಬೆಗಳ Love’ ಚಿತ್ರದ ‘ಪ್ರೇಮವೇ ಜೀವ… ಪ್ರೇಮವೇ ದೈವ’ ಧಾಟಿಯಲ್ಲಿ ಒಂದು ಭ್ರಷ್ಟ್ರ ಗೀತೆ… v-ಚಿತ್ರ ಗೀತೆ…ಹಾಗೇ ಸುಮ್ಮನೆ 🙂


ಗಾಂಧಿಯ ತತ್ವ… ಗಾಂಧಿಯ ಧ್ಯೇಯ
ಕೊಂದವ್ರೆ ಭ್ರಷ್ಟ… ಪುಡಾರಿಗಳು
ಸ್ಕ್ಯಾಮಿನ ಮಾರ್ಗ… ಮೋಸವೇ ಎಲ್ಲವೂ
ನುಂಗವ್ರೇ ಎಷ್ಟೋ… ಕಾಳಧನವು

ತಿಂದದ್ದೇ ಆಗ… ತಿಂದದ್ದೇ ಈಗ
ಆದರಾಗ… ಹಾಗು ಇದರಾಗ
ಮೋಸದ ಜಾಲ… ತೆಗೆಯೇ ಈಗ
ಮುಗಿತೀಗ… ಮುಂದೆ ಜೈಲು ಯೋಗ

ಗಾಂಧಿಯ ತತ್ವ… ಗಾಂಧಿಯ ಧ್ಯೇಯ
ಕೊಂದವ್ರೆ ಭ್ರಷ್ಟ… ಪುಡಾರಿಗಳು

ನೀನು ಬಿಚ್ಚದಿರು… ನಾನು ಹೇಳೆನು
ದೊಚುತಲಿ ಬಾಳುವ
ದೊಂಬರಾಟ ಸಾಗಲಿ… ಗುಪ್ತ ಆಗಿಯೇ
ಹಣ ಸೂರೆ ಗೈಯುವ

ಇನ್ನು ಮರು ಆಯ್ಕೆ ಆಗೆವು
ಇದು ಕೊನೆ ಟರ್ಮು ಹಾಗಾಗಿ
ಇರೊ ಪ್ರತಿಯೊಂದು ಸ್ಕೀಮಿನಲೂ
ಕೋಟಿ ಕೋಟಿ ನಮ್ಮದಾಗಲಿ
ಐಟಿ ದಾಳಿಯ ವೇಳೆಯೂ… ಹೊರಗೇ ಬೀಳದದು

ಸ್ಕ್ಯಾಮು ಮಾಡುತಿರೋ… ಪಕ್ಷ ಎಲ್ಲವೇ
ಸೇರಿಕೊಂಡು ದೋಚುವ
ಎಲ್ಲ ಶಾಸಕರ ಬಾ… ಕೇಳಿ ನೋಡುವ
ಹಂಚಿಕೊಂಡು ಮುಕ್ಕುವ

ಬಿಡು ಜನರೇನೇ ಹೇಳಲಿ
ಬಿಡು ಅವರೆಷ್ಟೇ ಉಗ್ಯಲಿ
ಏನ ಕಿಸಿಯೋಕೆ ಸಾಧ್ಯವೆ
ನಮ್ಮ ಹಣತಿಂಬ ಕುಂಡಲಿ
ನಮ್ಮ ಗೆಲ್ಲಿಸಿ ಕಳ್ಸಿದ… ಪ್ರಜೆಯೇ ಹಲುಬಲಿ

ಗಾಂಧಿಯ ತತ್ವ… ಗಾಂಧಿಯ ಧ್ಯೇಯ
ಕೊಂದವ್ರೆ ಭ್ರಷ್ಟ… ಪುಡಾರಿಗಳು
ಸ್ಕ್ಯಾಮಿನ ಮಾರ್ಗ… ಮೋಸವೇ ಎಲ್ಲವೂ
ನುಂಗವ್ರೇ ಎಷ್ಟೋ… ಕಾಳಧನವು

ತಿಂದದ್ದೇ ಆಗ… ತಿಂದದ್ದೇ ಈಗ
ಆದರಾಗ… ಹಾಗು ಇದರಾಗ
ಮೋಸದ ಜಾಲ… ತೆಗೆಯೇ ಈಗ
ಮುಗಿತೀಗ… ಮುಂದೆ ಜೈಲು ಯೋಗ

ಗಾಂಧಿಯ ತತ್ವ… ಗಾಂಧಿಯ ಧ್ಯೇಯ
ಕೊಂದವ್ರೆ ಭ್ರಷ್ಟ… ಪುಡಾರಿಗಳು

ಮೂಲ ಹಾಡು ‘ಗೊಂಬೆಗಳ Love’ ಚಿತ್ರದ ‘ಪ್ರೇಮವೇ ಜೀವ… ಪ್ರೇಮವೇ ದೈವ’
ಕೃಪೆ:
kannadalyrics.com

ಪ್ರೇಮವೆ ಜೀವ… ಪ್ರೇಮವೆ ದೈವ
ನಂಬಿವೆ ಎಷ್ಟೋ… ಉಸಿರುಗಳು
ಪ್ರೇಮವೆ ಸ್ವರ್ಗ… ಪ್ರೇಮವೆ ಬದುಕು
ತುಂಬಿವೆ ಎಷ್ಟೋ… ಹೆಸರುಗಳು

ತಿಳಿದೆ ಈಗ… ತಿಳಿದೆ ಈಗ
ಆನುರಾಗ… ಇದು ಅನುರಾಗ
ಎದೆಯ ಬೀಗ… ತೆಗೆದೆ ಈಗ
ಶುಭ ಯೋಗ… ಇದು ಶುಭ ಯೋಗ

ಪ್ರೇಮವೆ ಜೀವ… ಪ್ರೆಮವೇ ದೈವ
ನಂಬಿವೆ ಎಷ್ಟೋ… ಉಸಿರುಗಳು

ನೀನು ಮುಟ್ಟದಿರು… ನಾನು ಸೋಕೆನು
ಪ್ರೀತಿಸುತ ಬಾಳುವ
ಉಸಿರಾಟ ಸೋಕಲಿ… ಸಾಕು ಪ್ರೇಮಿಯೆ
ಪ್ರೇಮವಿದು ವೈಭವ

ಇನ್ನು ಮರು ಜನ್ಮ ಯಾತಕೆ
ಇದು ಕೊನೆ ಜನ್ಮವಾಗಲಿ
ಇರೊ ಪ್ರತಿಯೊಂದು ಗಳಿಗೆಯೂ
ಹೊಸ ಹೊಸ ಜನ್ಮವಾಗಲಿ
ಬಿರು ಬಿಸಿಲೋ ಮಳೆಯೋ… ಒಲವು ನಡುಗದು

ಸಾವು ಬಾರದಿರೋ.. ಲೋಕ ಎಲ್ಲಿದೆ
ಹೇಳಿಬಿಡು ಹೋಗುವ
ಎಲ್ಲ ದೇವರನ್ನು ಬಾ… ಕೇಳಿ ನೋಡುವ
ಆಯಸನ್ನು ಬೇಡುವ

ಬಿಡು ಅವನೇನೆ ಮಾಡಲಿ
ಬಿಡು ಅವನಾಟ ಸಾಗಲಿ
ಇನ್ನು ಕಸಿಯೋಕೆ ಸಾಧ್ಯವೆ
ನಮ್ಮ ಒಲವೆಂಬ ಅಂಬಲಿ
ನಮ್ಮ ಕತೆಯ ಬರೆದ… ಶಿವನೆ ನಗುವನು

ಪ್ರೇಮವೆ ಜೀವ… ಪ್ರೇಮವೆ ದೈವ
ನಂಬಿವೆ ಎಷ್ಟೋ… ಉಸಿರುಗಳು
ಪ್ರೇಮವೆ ಸ್ವರ್ಗ… ಪ್ರೇಮವೆ ಬದುಕು
ತುಂಬಿವೆ ಎಷ್ಟೋ… ಹೆಸರುಗಳು

ತಿಳಿದೆ ಈಗ… ತಿಳಿದೆ ಈಗ
ಆನುರಾಗ… ಇದು ಅನುರಾಗ
ಎದೆಯ ಬೀಗ… ತೆಗೆದೆ ಈಗ
ಶುಭ ಯೋಗ… ಇದು ಶುಭ ಯೋಗ

ಪ್ರೇಮವೆ ಜೀವ… ಪ್ರೆಮವೇ ದೈವ
ನಂಬಿವೆ ಎಷ್ಟೋ… ಉಸಿರುಗಳು

ಎಲ್ಲೆಲ್ಲೂ ಸುಡುವ ಬಿಸಿಲೇ…ಓ…ಓ… (ಸಿದ್ಲಿಂಗು -‘ಎಲ್ಲೆಲ್ಲೋ ಓಡುವ ಮನಸೇ…) ಅಣಕ

Posted: ಮೇ 11, 2013 in aNaka, anakavaadu, ಅಣಕ, ಅಣಕವಾಡು, ಇತ್ಯಾದಿ..., ಕನ್ನಡ, ಕನ್ನಡ ಅಣಕ, ಕನ್ನಡ ಅಣಕ ಹಾಡು, ಕನ್ನಡ ಚಲನಚಿತ್ರ ಹಾಡು ಅಣಕ, ಕನ್ನಡ ರೀಮಿಕ್ಸ್, ಗಮ್ಮತ್ತಿನ ಹಾಡು, ರಿಮಿಕ್ಸ್, ರೀಮಿಕ್ಸ್, ಹಾಗೆ ಸುಮ್ಮನೆ, film, gammaththina haadu, kannada anakavadu, kannada cinema songs, kannada film song, kannada film song remix, kannada remix, kannada songs
ಟ್ಯಾಗ್ ಗಳು:, , , , , , , , , , , , , , , , , , , , , , , , , , , , , ,

ಬೇಸಿಗೆ ಬಿಸಿಲು ಬೇಗೆಯಾಗಿ ಸುಡಲು… ಆಶಿಸುತಿದೆ ಮನ ಮಳೆಯ ಗುದುದ್ಗು ಸಿಡಿಲು… ‘ಸಿದ್ಲಿಂಗು’ ಚಿತ್ರದ ‘ಎಲ್ಲೆಲ್ಲೊ ಓಡುವ ಮನಸೇ…’ ಧಾಟಿಯಲ್ಲಿ ಬೇಗೆ ನೀಗಿಸೆ ಬಾ ಮಳೆಯೇ ಎನ್ನುವ ಹಾಡು 🙂

ಎಲ್ಲೆಲ್ಲೂ ಸುಡುವ ಬಿಸಿಲೇ…ಓ…ಓ…
ಯಾಕ್ಹಿಂಗೆ ಕಿಚ್ಚಂತೆ ಉರಿವೆ ?
ಇಲ್ಲದೆ ಮರದ ನೆರಳೇ… ಹಾಂ… ಹಾ…
ಕೂತಲ್ಲಿ ನಿಂತಲ್ಲಿ ಬೆವರೇ…

ವರುಣನೂ ಕಣ್ಬಿಡದೆ…
ಸೆಕೆಯಲಿ ಬೆಂದಿರುವೆ…
ಬಂದರೂ ಮಳೆಯೂ… ಹನಿದು… ಧಗೆಯಾ…ಹೆ… ಚ್ಚಿ… ಸಿ …

ಎಲ್ಲೆಲ್ಲೂ ಸುಡುವ ಬಿಸಿಲೇ…ಓ…ಓ…
ಯಾಕ್ಹಿಂಗೆ ಕಿಚ್ಚಂತೆ ಉರಿವೆ ?
ಇಲ್ಲದೆ ಮರದ ನೆರಳೇ… ಹಾಂ… ಹಾ…
ಕೂತಲ್ಲಿ ನಿಂತಲ್ಲಿ ಬೆವರೇ…

ಬಾನು… ಮೋಡಮುಸುಗಿದೆ
ವರ್ಷದಾ… ಸ್ಪರ್ಶದಾ…ಮನೀಷೆ…
ಗಾಳಿ… ಸುಂಯ್ಯೋ ಎನ್ನುತಾ
ಅವನಿಯ… ಹರ್ಷವೇ…ನಿರಾಶೆ

ಶಾಲ್ಮಲ… ‘ಮೇ’ಘಾವೃತ
ಗುಡು ಗುಡು ಮೇಘ ಘೋಷ …
ವೃಷ್ಟಿಯೇ…. ತಲಸ್ಪರ್ಶಿಸೆ…
ಇಲ್ಲ ಇಳೆಯಾ ತೃಷೆ…

ಬಿದ್ದರೂ ಕ್ಷಣದೀ… ದೂರಾ… ಕಡಲಾ… ಸೇ..ರು..ವೇ …

ಎಲ್ಲೆಲ್ಲೂ ಸುಡುವ ಬಿಸಿಲೇ…ಓ…ಓ…
ಯಾಕ್ಹಿಂಗೆ ಕಿಚ್ಚಂತೆ ಉರಿವೆ ?
ಇಲ್ಲದೆ ಮರದ ನೆರಳೇ… ಹಾಂ… ಹಾ…
ಕೂತಲ್ಲಿ ನಿಂತಲ್ಲಿ ಬೆವರೇ…

ಬೇಗೆ-ನೀಗಿ ಇಂಗಿಸೋ…
ಹಂಬಲ… ವೃಷ್ಟಿಯೇ… ತೋಯಿಸಿ….
ಕಪ್ಪು ಮೋಡ ಮೆಲ್ಲಗೆ
ಧಾರೆಯೇ…ಆಗಿಸೋ… ‘ಮೋ..ಹಿ’ ನೀ…

ಮೆಲ್ಲನೆ… ಭುವಿ-ಕಲ್ಪಕೆ
ಮುದ ಮುದ … ನಿನ್ನಾಗಮ
ತಣ್ಣನೆ… ಹನಿ ಚುಂಬಿಸೆ
ಮುತ್ತಿ ಇಳೆಯಾ…ಹಣೆ

ಬೇಗೆಯಾ… ಝಳಕೆ… ತನುವಾ… ತ..ಣಿ..ಸೇ …

ಎಲ್ಲೆಲ್ಲೂ ಸುಡುವ ಬಿಸಿಲೇ…ಓ…ಓ…ಹಾಂ… ಹಾ… ಲಾ…ಲಾ…ಲ…

___________________________________

ಮೂಲ ಹಾಡು ‘ಸಿದ್ಲಿಂಗು’ ಚಿತ್ರದ ‘ಎಲ್ಲೆಲ್ಲೊ ಓಡುವ ಮನಸೇ…’
ಕೃಪೆ: kannadalyrics.com

ಎಲ್ಲೆಲ್ಲೊ ಓಡುವ ಮನಸೇ…ಓ…ಓ…
ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ… ಹಾ…
ಹೋದಲ್ಲಿ ಬಂದಲ್ಲಿ ತರವೇ…?

ಹರುಷವಾ ಮುಂದಿಡುವೇ…
ವ್ಯಸನವಾ ಬೆಂಬಿಡುವೇ…
ಬಂದರೂ ಅಳುವೂ… ನಗಿಸೀ… ನಲಿವಾ… ಮ… ನ… ವೇ…

ಎಲ್ಲೆಲ್ಲೊ ಓಡುವ ಮನಸೇ…ಓ…ಓ…
ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ… ಹಾ…
ಹೋದಲ್ಲಿ ಬಂದಲ್ಲಿ ತರವೇ…?

ನಾನು ನನ್ನದೆನ್ನುವಾ…
ನಿನ್ನಯಾ… ತರ್ಕವೇ… ಬಾಲಿಶಾ…
ಎಲ್ಲಾ ಶೂನ್ಯವೆನ್ನುವಾ
ನಿನ್ನಯಾ… ವರ್ಗವೇ… ಅಂಕುಶಾ…

ಕಲ್ಮಶಾ… ನಿಶ್ಕಲ್ಮಶಾ…
ಥರ ಥರಾ ನಿನ್ನ ವೇಷ…
ದ್ವಾದಶಿ… ಏಕಾದಶಿ…
ಎಲ್ಲಾ ನಿನ್ನಾ ಖುಷಿ…

ಇದ್ದರೂ ಜೊತೆಗೇ… ದೂರಾ… ಇರುವಾ… ಮ..ನ..ವೇ…

ಎಲ್ಲೆಲ್ಲೊ ಓಡುವ ಮನಸೇ…ಓ…ಓ…
ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ… ಹಾ…
ಹೋದಲ್ಲಿ ಬಂದಲ್ಲಿ ತರವೇ…?

ಬೇಕು ಬೇಡ ಎನ್ನುವಾ…
ಗೊಂದಲ… ಸೃಷ್ಟಿಸೋ… ಮಾಯೆ ನೀ….
ತಪ್ಪು ಒಪ್ಪು ಎಲ್ಲವಾ
ತೋರುವಾ… ಕಾಣದ… ಛಾ..ಯೆ ನೀ…

ಕಲ್ಪನೆ… ಪರಿಕಲ್ಪನೆ
ವಿಧ ವಿಧಾ ನಿನ್ನಾ ತಾಣ…
ಬಣ್ಣನೆ… ಬದಲಾವಣೆ…
ಎಲ್ಲ ನಿನ್ನಾ ಹೊಣೇ…

ಕಂಡರೂ ಸಾವೂ… ಬದುಕೂ… ಎನುವಾ… ಮ..ನ..ವೇ…

ಎಲ್ಲೆಲ್ಲೊ ಓಡುವ ಮನಸೇ…ಹಾಂ… ಹಾ… ಲಾ…ಲಾ…ಲ…