ಬೇಕೇ ಹೇಳಿ…ಈ ಪರಿಯ ದ್ವೇಷ…?

Posted: ಆಗಷ್ಟ್ 25, 2008 in ಮನಸಿನ ಹಾಡು
ಟ್ಯಾಗ್ ಗಳು:, ,

ಕಾನ್ಸಂಟ್ರೇಶನ್ ಕ್ಯಾಂಪಿನ ಕ್ರೆಮೆಟೋರಿಯಂನಲ್ಲಿ

ಉರಿದು ಬೂದಿಯಾಗಿ ಹೋದ,

ವಿಷಗಾಳಿಯ ಹಾಯಿಸಿದ ಛೇಂಬರಿನೊಳಗೆ

ಉಸಿರಾಡುತ್ತಲೇ ಇಲ್ಲವಾಗಿಹೋದ

ಕಾಮಪಿಪಾಸು ನಾಜಿ ಸೈನಿಕರ ಅಧಿಕಾರಿಗಳ

ದಾಹಕ್ಕೆ ಸಿಲುಕಿ ನಲುಗಿಹೋದ

ವಿಜ್ಞಾನಿ-ವೈದ್ಯರುಗಳ ಪ್ರಯೋಗಗಳಿಗೆ

ಬಲಿಪಶುವಾಗಿ ನರಳಿದ

ತಮ್ಮವರನೆಲ್ಲ ಕಣ್ಣೆದುರೇ ಕಳೆದುಕೊಂಡು

ಬದುಕಿದ್ದೂ ಶವವಾದ

ತುಂಡು ಬ್ರೆಡ್ಡಿಗೂ ಗತಿಯಿಲ್ಲದೆ ಮೂಳೆಚಕ್ಕಳವಾಗಿ

ಸೊರಗಿ ಅಸುನೀಗಿದ

ನೂರು ಸಾವಿರ ಸಾವಿನ ಕಥೆಯನ್ನು ಕೇಳಿದ ಮೇಲೂ

ಎದೆಯ ಮೇಲೊಮ್ಮೆ ಕೈಯಿಟ್ಟು ಕೇಳಿ ನೋಡಿ…

ಬೇಕೆನ್ನುಸುತ್ತಿದೆಯೇ ಈ ಜನಾಂಗೀಯ ದ್ವೇಷ?

 

( ನೇಮಿಚಂದ್ರರ ಯಾದ್ ವಶೇಮ್ ಒಮ್ಮೆ ಒದಿ ನೋಡಿ. ಆಮೇಲೆ ಜೀವಮಾನದಲ್ಲೇ ಜನಾಂಗೀಯ ದ್ವೇಷದ ಯೋಚನೆ ಅಪ್ಪಿತಪ್ಪಿ ಕೂಡಾ ಯಾರ ಕನಸಲ್ಲೂ ಸುಳಿಯಲಾರದು)

ಟಿಪ್ಪಣಿಗಳು
 1. vijayraj ಹೇಳುತ್ತಾರೆ:

  ವಿಮಲ ಅವರೆ,

  ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಕನ್ನಡದಲ್ಲಿ ಟೈಪ್ ಮಾಡೋದು ತುಂಬಾ ಸುಲಭ. ಅದಕ್ಕೆ ಸಾಫ್ಟ್‌ವೇರ್ ಏನು ಬೇಕಾಗಿಲ್ಲ. ಈ ಕೆಳಗಿನ ಲಿಂಕ್‌ಗೆ ಹೋಗಿ ಸುಲಭವಾಗಿ ಟೈಪ್ ಮಾಡಬಹುದು

  http://www.quillpad.in/kannada/

 2. vimalanavada ಹೇಳುತ್ತಾರೆ:

  Kannantare, nimma baraha ,kavana ella tumba chennagide.nooru saavira nenapu nannannoo heege bahala dina kadittu.heege bareyuttiri.kannadadalliye bareyuva aase,aadare K-GUNITA hegendu gottguttilla.manasina marmara kelisiddakke,kundapra kannadakke kannadi hidididdakke dhanyavada.Heege nadeeli.

 3. vijayraj ಹೇಳುತ್ತಾರೆ:

  ಶಂಕರ್,
  ನನಗೆ ಹಿಟ್ಲರ್‌ನ ಬಗ್ಗೆ ಅಲ್ಪ ಸ್ವಲ್ಪ ಕೇಳಿ ಗೊತ್ತಿತ್ತು. ಅದರೆ ಆ ಕರಾಳತೆಯ ಪೂರ್ಣ ಪರಿಚಯವಾಗಿದ್ದು ‘ಯಾದ್ ವಶೇಮ್’ ಓದಿದ ಮೇಲೇನೆ. ಆ ಕಾದಂಬರಿಯ ಕೊನೆಯಲ್ಲಿ ಪ್ಯಾಲಸ್ತೇನ್ ಇಸ್ರೇಲ್ ಸಂಘರ್ಷದ ಬಗ್ಗೆ ಕೂಡಾ ವಿವರಗಳಿವೆ. ಅಂದು ಯಹೂದಿಗಳನ್ನು ಇಸ್ರೇಲಿನಿಂದ ಓಡಿಸಿದಂತೆ, ಇಂದು ಪ್ಯಾಲೆಸ್ತೀನ್‌ನಿಂದ ಅರಬ್ಬರನ್ನು ಒಕ್ಕಲೆಬ್ಬಿಸಿ ಇಸ್ರೇಲ್ ಸ್ಥಾಪಿಸಿದ ಯಹೂದಿಗಳು, ಗೋಳುಗೋಡೆಯ ಪ್ರಾರ್ಥನೆ ..ಇವೆಲ್ಲದರ ಸಚಿತ್ರ ವಿವರಗಳಿವೆ. ಆಮೇಲೆ ಇನ್ನೂ ಒಂದು ಕುತೂಹಲಕರ ವಿಷಯವಿದೆ.. ಯಹೂದಿ ಮತ್ತು ಮುಸ್ಲಿಮರ ಮೂಲದ ಕುರಿತಾಗಿ. ಪುಸ್ತಕವನ್ನು ನಾನು ಈಗಾಗಲೇ ಎರಡು ಬಾರಿ ಓದಿದ್ದೇನೆ. ಇದನ್ನು ಓದಿ ಮುಗಿಸಿದ ಮೇಲೆ ಮನಸ್ಸು ಇಸ್ರೇಲಿನಂತೆ ಪ್ರಕ್ಷುಬ್ಧ. ಹ್ಯಾನಾ ಮೋಸೆಸ್ ಪಾತ್ರದ ಮೂಲಕ ಲೇಖಕಿ ಕೇಳುವ ಪ್ರಶ್ನೆಗಳು ಯೋಚಿಸುವಂತೆ ಮಾಡುತ್ತದೆ.

  ನೀಲಾಂಜಲ,
  ಈ ಪ್ರಶ್ನೆಗೆ ಉತ್ತರಿಸಬೇಕಾದವರು ನಾವೆಲ್ಲರೂ ಕೂಡಾ. ನಾವು ಯಾವ ದೇವರು ಧರ್ಮವನ್ನು ನಂಬುತ್ತೇವೋ ಬಿಡುತ್ತೇವೋ. ಅದು ಏನಿದ್ದರೂ ನಮ್ಮ ಎದೆಗೆ ಸೀಮೀತವಾಗಬೇಕು. ಅದರ ಬಾಹ್ಯ ಪ್ರದರ್ಶನ, ಅದನ್ನು ಬೀದಿಯಲ್ಲಿ ಮೆರೆಸಲು ಹೊರಡುವುದೇ ಎಲ್ಲಾ ಅನಿಷ್ಟಗಳಿಗೆ ಮೂಲ.
  ಯಾದ್ ವಶೇಮ್‌ನಲ್ಲಿ ಹ್ಯಾನ ಹೇಳುವ ಮಾತುಗಳನ್ನು ಅರ್ಥೈಸಿಕೊಂಡೆವಾದರೆ…ಈ ದ್ವೇಷ ಎಷ್ಟು ಅರ್ಥಹೀನವಲ್ಲವೇ ಅನ್ನಿಸಿಬಿಡುತ್ತದೆ.
  “ನಿನ್ನೆ ಏನೂ ಸಂಭವಿಸಿರಬಹುದು. ಅದು ಮರೆಯಲಾಗದಂತಹ ಅನ್ಯಾಯವೇ ಆಗಿರಬಹುದು. ನಮ್ಮ ಇಂದಿನ ಸಮಸ್ಯೆಗಳಿಗೆ ಉತ್ತರಕ್ಕಾಗಿ ಇತಿಹಾಸವನ್ನು ಕೆದಕಬಾರದು. ಅದನ್ನು ನಾವೇ ಹುಟ್ಟು ಹಾಕಿರುವುದು ..ಅದಕ್ಕೆ ಪರಿಹಾರ ಕೂಡಾ ನಾವೇ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಭವಿಷ್ಯದ ನೂರು ನೋವುಗಳಿಗೆ ಅದು ಮುನ್ನುಡಿಯಾದೀತು”

  ಅದಕ್ಕೇ ನಮ್ಮ ನಂಬಿಕೆ, ಆಚರಣೆ, ದೇವರು ಧರ್ಮ ಎಲ್ಲಾ ನಮಗೇ ಸೀಮಿತವಾಗಿರಬೇಕು. ಆಗ ಮಾತ್ರ ಈ ದ್ವೇಷಕ್ಕೆ, ರೋಷಕ್ಕೆ, ಸಾವಿಗೆ, ನೋವಿಗೆ, ಅನುಮಾನಗಳಿಗೆ ಪೂರ್ಣವಿರಾಮ ಬಿದ್ದೀತು. ಅಲ್ಲವೇ?

 4. neelanjala ಹೇಳುತ್ತಾರೆ:

  mele barediddannu odide.

  adaru sahita horage dariyalli hogabEkadare;

  -kappu batteyavaru mattu gaddadavaru
  -janivaaradavaru hAgu adu illadavaru

  eddeddu kaNuttiddare.

  yakanta gotte swami??

 5. shankar ಹೇಳುತ್ತಾರೆ:

  ವಿಜಯ್ ರಾಜ್
  ನಿಜ ಜನಾಂಗೀಯ ಕ್ರೂರತೆ ತನ್ನ ಪರಾಕಾಷ್ಟೆಯನ್ನು ತಲುಪಿದ್ದು ಹಿಟ್ಲರನ ಅವಧಿಯಲ್ಲಿ. ಇದನ್ನು ನೋಡಬೇಕೆಂದರೆ ಸ್ಪಿಲ್‌ಬರ್ಗನ “ಶಿಂಡ್‌ಲರ್ಸ್ ಲಿಸ್ಟ್ ” , ಅಥವ ಪಿಯಾನಿಸ್ಟ್ , ನೋಡಿ.. ಅದ್ಭುತವಾದ ಚಿತ್ರಗಳು..
  ಅಂದ ಹಾಗೆ ನಾನು ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ಯಾದೆ ವಶೇಮ್ ಕೊಳ್ಳಬೇಕು..!

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s