ಇಂಡಿಯನ್ ಕ್ರಿಕೆಟ್ ಅಣಕ..ಎದೆ ತುಂಬಿ…ಧಾಟಿಯಲ್ಲಿ

Posted: ಸೆಪ್ಟೆಂಬರ್ 17, 2008 in aNaka
ಟ್ಯಾಗ್ ಗಳು:, ,

ಇದನ್ನು ಬರೆದು ಬಹಳ ಕಾಲ ಆಯ್ತು. ಇಂಡಿಯಾ ಕ್ರಿಕೇಟ್ ಟೀಮ್ ವರ್ಲ್ಡ್ ಕಪ್‌ನಲ್ಲಿ ಬಾಂಗ್ಲಾ ಎದುರು ಸೋತಾಗ ಬೇಸರವಾಗಿ ಬರೆದ ಅಣಕ ಇದು….ಹೇಗಿದೆ ಹೇಳಿ

ನಿದ್ದೆ ಬಿಟ್ಟು ನೋಡುವೆವು ಮ್ಯಾಚು ನಾವು

ಮಾನ ಬಿಟ್ಟು ಸೋಲುವಿರಿ ಅಲ್ಲಿ ನೀವು…ನಿದ್ದೆ ಬಿಟ್ಟು ||

 

ತಂಡಗೆಲ್ಲಲಿ ಎಂದು…ನೀವು ಆಡುವುದಿಲ್ಲ

ನೋಡುವುದು ಅನಿವಾರ್ಯರ್ಮ ನಮಗೆ

ಕೇಳುವವರು ನಿಮಗಿಂದು ಯಾರಿಲ್ಲ ಅದರಿಂದ

ಆಡುವಿರಿ ಮೈಮರೆತು…ಆಡುವಿರಿ ಮೈಮರೆತು

ಎಂದಿನಂತೆಯೇ ಸೋತು…

ಯಾರು ಎಷ್ಟು ಚುಚ್ಚಿದರೂ…ನಿಮಗಿಲ್ಲ ಚಿಂತೆ 

ನಿದ್ದೆ ಬಿಟ್ಟು….||

 

ಇಂದು ನೀವಾಡಿದರೆ ಎಂದಿನಂತೆಯೇ ಕುಳಿತು

ನೋಡುವೆವು ನಾವು ನಿಮಗೆ ಬೇಡ ಅನುಮಾನ

ಆಡ್ ಸಿಕ್ಕರೆ ಸಾಕೇ…ಆಡ್ ಸಿಕ್ಕರೆ ಸಾಕೇ…

ಇರಬೇಡ್ವೇ ಮಾನ

ನಿದ್ದೆ ಬಿಟ್ಟು…ಊಟ ಬಿಟ್ಟು…ಕೆಲ್ಸ ಬಿಟ್ಟು

ನೋಡುವೆವು ಮ್ಯಾಚು ನಾವು…

 

ನಿದ್ದೆ ಬಿಟ್ಟು….||

ಟಿಪ್ಪಣಿಗಳು
  1. neelihoovu ಹೇಳುತ್ತಾರೆ:

    “ಆಡ್ ಸಿಕ್ಕರೆ ಸಾಕೆ?” ಎಂಬಲ್ಲಿ ಮೀಟರ್ ತಪ್ಪಿತು ಅನ್ನಿಸಿತು.
    ಒಟ್ಟಾರೆ ಸೂಪರ್.. ನಗು ತರಿಸಿತು..

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s